ಕಲ್ಯಾಣಿ ಸುತ್ತ ಅಕ್ರಮ ಅಂಗಡಿ ಮಳಿಗೆ ತೆರವು

ಮೇಲುಕೋಟೆ: ಮೇಲುಕೋಟೆ ಪಂಚಕಲ್ಯಾಣಿ ಸುತ್ತ ಅಕ್ರಮವಾಗಿ ತಲೆ ಎತ್ತಿದ್ದ ಅಂಗಡಿ ಮಳಿಗೆಗಳನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಲಾಯಿತು.

ಪಂಚಾಕಲ್ಯಾಣಿ ಸುತ್ತಲಿನ ಸರ್ಕಾರಿ ಜಾಗದಲ್ಲಿ ಗ್ರಾಮ ಪಂಚಾಯತಿ ಯಾವುದೇ ಅನುಮತಿ ಪಡೆಯದೆ 10ಕ್ಕೂ ಹೆಚ್ಚು ಅಂಗಡಿಗಳು ಅಕ್ರಮವಾಗಿ ತಲೆ ಎತ್ತಿದ್ದವು. ತಿಂಗಳ ಹಿಂದೆಯೇ ಅಂಗಡಿ, ಮಳಿಗೆಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ನೋಟಿಸ್ ನೀಡಿತ್ತು. ಆದರೆ, ಯಾರೊಬ್ಬರು ತೆರವು ಮಾಡಿರಲಿಲ್ಲ.

ಆ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಅವ್ವಗಾಂಗಧರ್ ಹಾಗೂ ಪಿಡಿಓ ತಮ್ಮೇಗೌಡ ನೇತೃತ್ವದಲ್ಲಿ ಬೆಳಗ್ಗೆ ಜೆಸಿಬಿಗಳ ಮೂಲಕ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲಾಯಿತು.