ಸಿನಿಮಾ

ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿದ್ದ ವ್ಯಕ್ತಿ ಇನ್ನಿಲ್ಲ

ಅಮೆರಿಕಾ: ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿದ್ದು, ಗಿನ್ನೆಸ್​​ ವರ್ಲ್‌ ರೆಕಾರ್ಡ್ ಮಾಡಿದ್ದ ವ್ಯಕ್ತಿ ಮೆಹ್ಮೆತ್ ಓಝುರೆಕ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಮೆಹ್ಮೆತ್ ಓಝುರೆಕ್ ವಿಶ್ವದಲ್ಲೇ ಅತಿ ಉದ್ದದ ಮೂಗನ್ನು ಹೊಂದಿದ್ದ ಖ್ಯಾತಿಯನ್ನು ಹೊಂದಿದ್ದರು. ತಮ್ಮ 75ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದಾರೆ. ಮೆಹ್ಮೆತ್ ಇತ್ತೀಚಿಗೆ ಹೃದಯಾಘಾತಕ್ಕೊಳಗಾಗಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಭಾವನಾತ್ಮಕ ವಿದಾಯ ಹೇಳಿದ್ದಾರೆ.

 ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ ನೀಡದಿರುವುದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ: ರಾಹುಲ್ ಗಾಂಧಿ

ಮೆಹ್ಮೆತ್ ಓಝುರೆಕ್ ಅವರ ಮೂಗಿನ ವಿಶೇಷತೆ: ಮೆಹ್ಮೆತ್ ಮೂಗು 8.8 cm ಉದ್ದವಿತ್ತು. ಮೆಹ್ಮೆತ್ ಯಾವಾಗಲೂ ತನ್ನ ಮೂಗು ಮತ್ತು ಅದರ ಸ್ನಿಫಿಂಗ್ ಸಾಮರ್ಥ್ಯಗಳ ಬಗ್ಗೆ ಹೆಮ್ಮೆಪಡುತ್ತಿದ್ದರು.

ಪ್ರಶಸ್ತಿಗಳು: ಮೆಹ್ಮೆತ್ ಉದ್ದ ಮೂಗಿಗಾಗಿ ಅವರು ಸಾಕಷ್ಟು ಪ್ರಶಸ್ತಿ ಗಳನ್ನು ಪಡೆದಿದ್ದರು. 2001 ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, 2010ರಲ್ಲಿ ಇಟಲಿಯಲ್ಲಿ ಪ್ರೈಮ್ಟೈಮ್ ದಾಖಲೆ, ಮತ್ತೊಮ್ಮೆ ಲೋ ಶೋ ಡೀ ರೆಕಾರ್ಡ್ ಸೆಟ್‌ನಲ್ಲಿ 2021 ರಲ್ಲಿ ದಾಖಲೆ ಮಾಡಿದ್ದರು.

18ನೇ ಶತಮಾನದಲ್ಲಿ ಜೀವಿಸಿದ್ದ ಬ್ರಿಟಿಷ್‌ ಸರ್ಕಸ್‌ ಸಾಧಕ ಥಾಮಸ್‌ ವಾಡ್‌ಹೌಸ್‌ನ ಮೂಗು ಒಂದಲ್ಲ ಎರಡಲ್ಲ 19 ಸೆಂ.ಮೀ. (7.5 ಇಂಚು) ಉದ್ದವಿತ್ತು. ಈ ಮೂಲಕ ಅವರು ಅತಿ ಉದ್ದದ ಮೂಗು ಹೊಂದಿದ್ದ ವ್ಯಕ್ತಿ ಎಂಬ ದಾಖಲೆಗೆ ಪಾತ್ರನಾಗಿದ್ದರು. ಆ ನಂತರ ಟರ್ಕಿಯ ಮೆಹ್ಮೆಂಟ್‌ ಝ್ಯುರೆಕ್‌ 3.6 ಇಂಚಿನ ಮೂಗು ಹೊಂದಿದ್ದು ದಾಖಲೆ ಮಾಡಿದ್ದರು.

ವಿದ್ಯುತ್ ಬಿಲ್ ವಸೂಲಿಗೆ ಬಂದ ಲೈನ್​ಮ್ಯಾನ್​ಗೆ ಚಪ್ಪಲಿಯಿಂದ ಹಲ್ಲೆ; ವ್ಯಕ್ತಿ ಅರೆಸ್ಟ್

Latest Posts

ಲೈಫ್‌ಸ್ಟೈಲ್