ಭಾರತ-ಪಾಕ್​ ವಿಶ್ವಕಪ್​ ಪಂದ್ಯಾವಳಿ: ಟ್ವೀಟ್​ ಮಾಡಿ ಕೆಂಗಣ್ಣಿಗೆ ಗುರಿಯಾದ ಮೆಹಬೂಬಾ ಮುಫ್ತಿ

ನವದೆಹಲಿ: ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ವಿಶ್ವಕಪ್​ ಕ್ರಿಕೆಟ್​ ಪಂದ್ಯಾವಳಿ ನಡೆಯುತ್ತಿದ್ದು ದೇಶಾದ್ಯಂತ ಭಾರತ ತಂಡಕ್ಕೆ ಶುಭಹಾರೈಸುತ್ತಿದ್ದಾರೆ. ಟೀಂ ಇಂಡಿಯಾಕ್ಕೆ ಚಿಯರ್​ಅಪ್​ ಮಾಡುತ್ತಿದ್ದಾರೆ.
ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್​ ಮಾಡಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಇಂದು ನಡೆಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅತ್ಯುತ್ತಮ, ಸಮರ್ಥ ತಂಡ ಗೆಲುವು ಸಾಧಿಸುತ್ತದೆ. ಆದರೆ ಪ್ರತಿಯೊಬ್ಬರಿಗೂ ಅವರಿಗೆ ಇಷ್ಟವಾದ ತಂಡವನ್ನು ಪ್ರೋತ್ಸಾಹಿಸುವ ಹಕ್ಕು ಇದೆ. ಈ ವಿಚಾರದಲ್ಲಿ ನಾವು ನಾಗರಿಕರಾಗಿ ವರ್ತಿಸಬೇಕು ಎಂದು ಮುಫ್ತಿ ಟ್ವೀಟ್​ ಮಾಡಿದ್ದಾರೆ.
ಈ ಟ್ವೀಟ್​ಗೆ ಹಲವು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಪಾಕಿಸ್ತಾನವನ್ನು ಪ್ರೋತ್ಸಾಹಿಸುವಂತಿದ್ದರೆ ಅಲ್ಲಿಯೇ ಹೋಗಿ, ನೀವು ಮುಂದಿನ ಚುನಾವಣೆಯಲ್ಲ, ಅದಕ್ಕೂ ಮುಂದಿನ ಚುನಾವಣೆಯನ್ನೂ ಸೋಲಬೇಕು…ಎಂಬಂಥ ಕಾಮೆಂಟ್​ಗಳನ್ನು ನೆಟ್ಟಿಗರು ನೀಡಿದ್ದಾರೆ.

ಇದುವರೆಗಿನ ವಿಶ್ವಕಪ್​ ಪಂದ್ಯಾವಳಿಗಳಲ್ಲಿ ಎಂದಿಗೂ ಪಾಕ್​ ಭಾರತದ ವಿರುದ್ಧ ಗೆದ್ದಿದ್ದೇ ಇಲ್ಲ. ಭಾರತಕ್ಕೆ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಯಾಗಿದೆ.

Leave a Reply

Your email address will not be published. Required fields are marked *