ಬೆಂಗಳೂರು: ಸ್ಯಾಂಡಲ್ವುಡ್ ನಟ ದಿ.ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ಪುತ್ರನಿಗೆ ಇಂದು(ಗುರುವಾರ) ತೊಟ್ಟಿಲ ಶಾಸ್ತ್ರ ನಡೆದಿದೆ.
ಅ.22ರಂದು ಜನಿಸಿದ ಜೂ.ಚಿರುಗೆ ಚಿಕ್ಕಪ್ಪ ಧ್ರುವ ಸರ್ಜಾ ಬರೋಬ್ಬರಿ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಗಿಫ್ಟ್ ಕೊಟ್ಟಿದ್ದಾರೆ. ಮೇಘನಾ ತುಂಬು ಗರ್ಭಿಣಿಯಾಗಿದ್ದಾಗಲೇ ಅಣ್ಣನ ಮಗುವಿಗೆ ಅಂತಾ ವಿಶೇಷ ಉಡುಗೊರೆಯಾಗಿ ತೊಟ್ಟಿಲು ಖರೀದಿಸಿದ್ದರು. ಆದರೆ, ಇಂದು ನಡೆದ ತೊಟ್ಟಿಲ ಶಾಸ್ತ್ರಕ್ಕೆ ಮೇಘನಾ ಕುಟುಂಬಸ್ಥರು ಧ್ರುವ ಸರ್ಜಾ ಕೊಟ್ಟ ತೊಟ್ಟಿಲನ್ನು ಬಳಸಲಿಲ್ಲ. ಬೇರೆ ತೊಟ್ಟಿಲಿಗೆ ಪೂಜೆ ಮಾಡಿದ ಮೇಘನಾ ತಂದೆ ಸುಂದರ್ರಾಜ್-ತಾಯಿ ಪ್ರಮೀಳಾ ತೊಟ್ಟಿಲ ಶಾಸ್ತ್ರ ನೆರವೇರಿಸಿದರು. ಬಳಿಕ ಇದೇ ತೊಟ್ಟಿಲಿಗೆ ಮಗುವನ್ನು ಹಾಕಿ ಮೇಘನಾ ಸಂಭ್ರಮಿಸಿದರು.
ಅರೇ, ಧ್ರುವ ಸರ್ಜಾ ಪ್ರೀತಿಯಿಂದ ತಂದುಕೊಟ್ಟ ತೊಟ್ಟಿಲಿಗೆ ಯಾಕೆ ಜೂ.ಚಿರುವನ್ನು ಹಾಕಲಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಅದಕ್ಕೆ ಇಲ್ಲಿದೆ ಉತ್ತರ.
ಹಿರಿಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಜೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರ ನೇರವೇರಿದೆ. ಈ ಶಾಸ್ತ್ರಕ್ಕೆ ಗದಗದಿಂದ ವನಿತಾ ಅವರು ಕೊಟ್ಟಿರುವ ತೊಟ್ಟಿಲನ್ನೇ ಬಳಸಲಾಯಿತು. ಯಾಕಂದ್ರೆ ಇದು ತವರು ಮನೆಯಿಂದ ನಡೆದ ಶಾಸ್ತ್ರ ಹಾಗಾಗಿ.
ತವರು ಮನೆಯ ತೊಟ್ಟಿಲ ಶಾಸ್ತ್ರಕ್ಕೆ ವನಿತಾ ಅವರು ಕೊಟ್ಟಿರುವ ತೊಟ್ಟಿಲು ಬಳಸಿಕೊಂಡಿದ್ದೀವಿ. ಈ ತೊಟ್ಟಿಲು ಚೆನ್ನಾಗಿದೆ. ಇವತ್ತಿನ ತೊಟ್ಟಿಲು ಶಾಸ್ತ್ರ ಕೇವಲ ಟ್ರೈಲರ್. ಧ್ರುವ ತಂದಿರುವ ತೊಟ್ಟಿಲಲ್ಲಿ ಇನ್ನೊಮ್ಮೆ ತೊಟ್ಟಿಲ ಶಾಸ್ತ್ರ ಆಗಲಿದೆ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಮೊದಲು ನಾನು ಸೀಮಂತ ಬೇಡ ಅಂತ ಹೇಳಿದ್ದೆ. ಚಿರು ಇಲ್ಲದ ಮೇಲೆ ಸೀಮಂತ ಯಾಕೆ ಬೇಕು? ಎಂದು ಕೊಂಡಿದ್ದೆ. ಕೊನೆಯದಾಗಿ ನಾನು 4 ಬಾರಿ ಸೀಮಂತ ಮಾಡಿಕೊಂಡೆ ಎಂದರು. ಚಿರು ಸ್ಥಾನವನ್ನ ಮನೆಯಲ್ಲಿ ನಾನು ತೆಗೆದುಕೊಳ್ಳಬೇಕಾದ ಸ್ಥಿತಿ ಇದೆ ಎಂದ ಮೇಘನಾ, ಮಗನನ್ನ ಸಿನಿಮಾ ಇಂಡಸ್ಟ್ರಿಗೆ ಲಾಂಚ್ ಮಾಡೋದಾದ್ರೆ ನಾನು ರೆಡಿ. ನನ್ನಪ್ಪ ಮಗನಿಗೆ ಚಿಂಟು ಅಂತ ಕರೀತಾರೆ. ಚಿಂಟು ಅಂದ್ರೆ ಚಿಂತೆ ಇಲ್ಲದ ಚಿರು ಚಿಂಟು ಎಂದರು.
ಜೂ.ಚಿರು ತೊಟ್ಟಿಲ ಶಾಸ್ತ್ರದ ದಿನವೇ ಕಣ್ಣೀರಿಡುತ್ತಾ ಸುದ್ದಿಗೋಷ್ಠಿಯಲ್ಲಿ ಮೇಘನಾ ಹೇಳಿದ್ದೇನು?