ಅಮರಾವತಿ: ಆಂಧ್ರ ಮತ್ತು ತೆಲಂಗಾಣದಲ್ಲಿ ಇತ್ತೀಚೆಗೆ ಪ್ರವಾಹದಿಂದ ಜನ ತತ್ತರಿಸಿಹೋಗಿದ್ದು, ಸಂತ್ರಸ್ತರ ನೆರವಿಗೆ ಟಾಲಿವುಡ್ ಸೆಲಬ್ರಿಟಿಗಳು ಮುಂದಾಗಿದ್ದಾರೆ. ಅದರಲ್ಲೂ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಹೀರೋಗಳೆಲ್ಲಾ ಕೋಟ್ಯಂತರ ರೂಪಾಯಿ ದೇಣಿಗೆ ಘೋಷಿಸಿ ಉದಾರತೆ ಮೆರೆದಿದ್ದಾರೆ. ಈಗ ಅವರ ಹಾದಿಯಲ್ಲಿ ಚಿರಂಜೀವಿ ಪುತ್ರಿ ನಿಹಾರಿಕಾ ಕೂಡ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಮೊಯಿನ್ ಅಲಿ
ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್, ಸಾಯಿ ಧರಮ್ ತೇಜ್ ಮತ್ತು ವರುಣ್ ತೇಜ್ 8.5ಕೋಟಿ ರೂ.ದೇಣಿಗೆ ಘೋಷಿಸಿದ್ದಾರೆ. ಇದರಲ್ಲಿ ಪವನ್ ಕಲ್ಯಾಣ್ ಗರಿಷ್ಠ ಅಂದರೆ 6 ಕೋಟಿ ರೂ. ಘೋಷಿಸಿ ಹೃದಯವೈಶಾಲ್ಯತೆ ಮೆರೆದಿದ್ದಾರೆ.
ಇದೀಗ ತಮ್ಮ ಕುಟುಂಬ ತೋರಿದ ಸ್ಫೂರ್ತಿಯಿಂದ ವಿಜಯವಾಡ ಗ್ರಾಮಾಂತರ ಪ್ರದೇಶದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಹತ್ತು ಹಳ್ಳಿಗಳಿಗೆ ಪ್ರತಿ ಗ್ರಾಮಕ್ಕೆ ಐವತ್ತು ಸಾವಿರದಂತೆ ಐದು ಲಕ್ಷ ರೂಪಾಯಿ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಪ್ರವಾಹದಿಂದ ವಿಜಯವಾಡ ಗ್ರಾಮಾಂತರ ಪ್ರದೇಶದ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ನನಗೆ ಬೇಸರ ತಂದಿದೆ. ಇಂತಹ ಪ್ರಾಕೃತಿಕ ವಿಕೋಪಗಳಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ನಾನು ಹುಟ್ಟಿ ಬೆಳೆದದ್ದು ನಗರದಲ್ಲಿಯೇ ಆದರೂ ನನ್ನ ಹಿರಿಯರೆಲ್ಲರೂ ಗ್ರಾಮೀಣ ಭಾಗದಿಂದ ಬಂದವರು. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿ ನಮ್ಮೆಲ್ಲ ಕುಟುಂಬದವರು ಸಂತ್ರಸ್ತರ ಬೆಂಬಲಕ್ಕೆ ನಿಂತಿರುವುದು ನನಗೆ ಅತೀವ ಸಂತಸ ತಂದಿದೆ.
ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಕುಟುಂಬವೊಂದಕ್ಕೆ 1000 ರೂ., 50 ಸಾವಿರ ರೂ., ನಂತೆ ಐದು ಲಕ್ಷ ರೂಪಾಯಿ ದೇಣಿಗೆ ನೀಡಲು ನಿರ್ಧರಿಸಿದ್ದೇನೆ. ಈ ಭೀಕರ ಪರಿಸ್ಥಿತಿ ಶೀಘ್ರವೇ ಅಂತ್ಯವಾಗಲಿ, ಎಲ್ಲಾ ಜನರು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ನಿಹಾರಿಕಾ ಹೇಳಿದ್ದಾರೆ.
ಪ್ರವಾಹ ಸಂತ್ರಸ್ತರ ನೆರವಿಗೆ ಪವನ್: ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಟ್ಟ ದೇಣಿಗೆ ಎಷ್ಟು ಕೋಟಿ ಗೊತ್ತಾ?