ಸಚಿವಾಲಯ ನೌಕರರ ಪ್ರಮುಖ ಸಭೆ ಇಂದು

ಬೆಂಗಳೂರು: ಸಚಿವಾಲಯ ನಿಯಮಗಳನ್ನು ಸಮಗ್ರ ತಿದ್ದುಪಡಿ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸುವ ಕುರಿತಂತೆ ಚರ್ಚೆ ನಡೆಸಲು ಸಚಿವಾಲಯ ನೌಕರರ ಸಂಘದ ಸಭೆ ಶನಿವಾರ (ಮೇ 25) ಮಧ್ಯಾಹ್ನ 1.30ಕ್ಕೆ ವಿಕಾಸಸೌಧದಲ್ಲಿ ನಡೆಯಲಿದೆ.

ನಿಯಮಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಅಪರ ಮುಖ್ಯ ಕಾರ್ಯದರ್ಶಿ ಅವರು ಸಚಿವಾಲಯ ನೌಕರರ ಜತೆ ನಡೆಸಿದ ತೀರ್ವನಕ್ಕೆ ವಿರುದ್ಧವಾಗಿ ಸಂಪುಟ ಪ್ರಸ್ತಾವನೆ ಸಿದ್ಧಪಡಿಸಿರುವುದರ ವಿರುದ್ಧ ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಯಲಿದೆ.

ಪ್ರತಿ ವರ್ಷ 50 ಶಾಖಾಧಿಕಾರಿ ಹುದ್ದೆಗಳಿಗೆ ಸಚಿವಾಲಯ ಸಿಬ್ಬಂದಿಗೆ ಬಡ್ತಿ ನೀಡಲಾಗುತ್ತಿತ್ತು. ಅದನ್ನು ಕೈಬಿಟ್ಟು ಪ್ರತಿ ನೇಮಕಾತಿಯಲ್ಲಿ 5 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ 5 ಬಡ್ತಿ ಮೂಲಕ ಭರ್ತಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅದನ್ನು ಕೈಬಿಟ್ಟು ಶೇ. 20ರಷ್ಟು ನೇರ ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಹೋರಾಟದ ರೂಪುರೇಷೆಯನ್ನು ಸಭೆಯಲ್ಲಿ ತೀರ್ವನಿಸಲಾಗುತ್ತದೆ.

ಇದಲ್ಲದೆ ಸಚಿವಾಲಯಕ್ಕೆ ಗುತ್ತಿಗೆಯಿಂದ ನೇಮಕವಾಗಿರುವ ಅಧಿಕಾರಿಗಳನ್ನು ಹೊರ ಹಾಕಬೇಕು, ನಿಯೋಜನೆ ಮೇಲೆ ಸಚಿವಾಲಯಕ್ಕೆ ಬಂದವರನ್ನು ಮಾತೃ ಇಲಾಖೆಗೆ ಕಳುಹಿಸಬೇಕು, ಸಚಿವಾಲಯ ನೌಕರರಿಗೆ ಬಡ್ತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಅಧ್ಯಕ್ಷ ಪಿ. ಗುರುಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *