ಸುಳ್ಯ: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ತಾಲೂಕಿನ ನಾಗರಿಕರು ನೆಲ್ಲೂರು ಕೆಮ್ರಾಜೆಯಲ್ಲಿ ಸಭೆ ಸೇರಿ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ದ.ಕ. ಕರ್ನಾಟಕ ವತಿಯಿಂದ ನೆಲ್ಲೂರು ಕೆಮ್ರಾಜೆ ಸೊಸೈಟಿ ಹಾಲ್‌ನಲ್ಲಿ ಸುಳ್ಯ ತಾಲೂಕಿನ ಕಸ್ತೂರಿರಂಗನ್ ವರದಿ ಬಾಧಿತ ಗ್ರಾಮಗಳ ಗ್ರಾಮಸ್ಥರ ಸಭೆ ನಡೆಸಲಾಗಿತ್ತು.
ಕಸ್ತೂರಿರಂಗನ್ ವರದಿ ಜಾರಿಯನ್ನು ಎಲ್ಲ ಗ್ರಾಮಸ್ಥರು ಒಕ್ಕೊರಲಿನಿಂದ ವಿರೋಧಿಸುವ ಕುರಿತು ಸಂಚಾಲಕ ಕಿಶೋರ್ ಶಿರಾಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನಮ್ಮ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಬೂತ್‌ಮಟ್ಟದ ಕಾರ್ಯಕರ್ತರು ತಯಾರಾಗಬೇಕು. ಅಲ್ಲದೆ ಈ ತಿಂಗಳೊಳಗೆ ಪ್ರತಿ ಗ್ರಾಮಗಳಲ್ಲಿ ಮತ್ತೊಂದು ಸುತ್ತಿನ ಪ್ರಚಾರ ನಡೆಸಿ ನಂತರ ಮುಂದಿನ ಹೋರಾಟಗಳಿಗೆ ತಾವೆಲ್ಲರೂ ಸಿದ್ಧರಾಗಬೇಕು ಎಂದು ಕಿಶೋರ್ ಶಿರಾಡಿ ತಿಳಿಸಿದರು.
ಸೈಯದ್ ಮೀರಾ ಸಾಹೇಬ್ ಮಾತನಾಡಿ, ನಾವೆಲ್ಲರೂ ಅನೇಕ ಹೋರಾಟ ಮಾಡಿ ಕೇಸ್ ಹಾಕಿಸಿಕೊಂಡಿದ್ದೇವೆ. ಹಾಗಾಗಿ ಮುಂದೆಯೂ ನಮ್ಮ ಹೋರಾಟ ನಿರಂತರ ನಡೆಯುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ಕಸ್ತೂರಿರಂಗನ್ ವರದಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದರು. ಸುಳ್ಯ ತಾಲೂಕಿನ ಬಾಧಿತ ಗ್ರಾಮದ ಎಲ್ಲ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ತೇಪೆ ಕಾಮಗಾರಿಗೆ ತಡೆಯೊಡ್ಡಿದ ಜನತೆ! :ಸಂಪೂರ್ಣ ಹದಗೆಟ್ಟ ಕಡಬಪಂಜ ರಸ್ತೆ : ಸುಸಜ್ಜಿತ ರಸ್ತೆಗಾಗಿ ಹಲವು ಬಾರಿ ಮನವಿ