ಸಂತ ಅನ್ನಮ್ಮ ಕಾಲೇಜಿಗೆ ನಾಳೆ ನ್ಯಾಕ್ ಭೇಟಿ

ವಿರಾಜಪೇಟೆ: ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆಯ ಪ್ರತಿನಿಧಿಗಳು ಮಾರ್ಚ್ 22ಮತು 23ರಂದು ಸಂತ ಅನ್ನಮ್ಮ ಕಾಲೇಜಿಗೆ ಭೇಟಿ ನೀಡಲಿದ್ದು, ಕಾಲೇಜಿನ ಶೈಕ್ಷಣಿಕ ಹಾಗೂ ಇತರ ಚಟುವಟಿಕೆಗಳ ಕುರಿತು ಪರಮರ್ಶೆ ನಡೆಸಿ ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆಗೆ ವರದಿ ನೀಡಲಿದೆ ಎಂದು ಪ್ರಾಂಶುಪಾಲ ಐಸಾಕ್ ರತ್ನಾಕರ್ ತಿಳಿಸಿದ್ದಾರೆ.

ಕಲಿಕಾ ವಿಧಾನ, ಸಂಶೋಧನೆ, ಸಂಸ್ಥೆ ಮತ್ತು ಔದ್ಯೋಗಿಕ ರಂಗಗಳ ಪರಸ್ಪರ ಅವಲಂಬನೆ, ಸಾಮಾಜಿಕ ಪಾಲ್ಗೊಳ್ಳುವಿಕೆ, ಸಂಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಂಸ್ಥೆಯ ಸಾಧನೆ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ… ಹೀಗೆ ಹಲವು ಅಂಶಗಳ ಬಗ್ಗೆ ಅಮೂಲಾಗ್ರವಾಗಿ ಪರೀಕ್ಷಿಸಿ ನ್ಯಾಕ್ ಸಂಸ್ಥೆ ಗ್ರೇಡ್ ನೀಡಲಿದೆ.

ಪ್ರಸಕ್ತ ವರ್ಷದಲ್ಲಿ ಹೆಚ್ಚು ವಿದ್ಯಾರ್ಥಿಗಳು ಕ್ರೀಡೆ, ಕಲಿಕೆ, ದಕ್ಷತೆ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ನ್ಯಾಕ್ ಭೇಟಿ ವೇಳೆ ಈ ವಿಚಾರಗಳು ಪ್ರಶಂಸೆಗೆ ಪಾತ್ರವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.