More

  ಬರೀ ಗಿಡ ನೆಟ್ಟುಬಿಟ್ರೆ ಸಾಮಾಜಿಕ ಕಳಕಳಿ ಆಗಲ್ಲ … ವಿಜಯ್​ ಕಾಲೆಳೆದ ಮೀರಾ

  ಈ ಮೀರಾ ಮಿಥುನ್​ ಎಂಬ ಕಾಲಿವುಡ್​ ನಟಿ ಇಷ್ಟೆಲ್ಲಾ ಪ್ರಚಾರಕ್ಕಾಗಿ ಮಾಡುತ್ತಿದ್ದಾರೋ ಅಥವಾ ಹತಾಶೆಯಿಂದ ಮಾಡುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರತಿ ದಿನ ಕಾಲಿವುಡ್​ನ ಜನಪ್ರಿಯ ಸ್ಟಾರ್​ಗಳ ಕಾಲೆಳೆಯುವುದನ್ನು ಮಾತ್ರ ರೂಢಿ ಮಾಡಿಕೊಂಡಿದ್ದಾರೆ.

  ಈಗಾಗಲೇ ಅವರು ಕೆಲವು ದಿನಗಳಿಂದ ರಜನಿಕಾಂತ್​, ವಿಜಯ್​, ಕಮಲ್​ ಹಾಸನ್​, ಸೂರ್ಯ, ತ್ರಿಷಾ, ಜ್ಯೋತಿಕಾ ಸೇರಿದಂತೆ ಹಲವರ ಕಾಲೆಳೆದಿದ್ದಾರೆ. ಅವರಿಗೆ, ಅವರ ಅಭಿಮಾನಿಗಳಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಆದರೆ, ಅವರ ವಿರುದ್ಧ ಯಾವೊಬ್ಬ ಸ್ಟಾರ್​ ನಟ ಅಥವಾ ನಟಿ ಸಹ ಪ್ರತಿಕ್ರಿಯೆ ನೀಡಿಲ್ಲ.

  ಇದನ್ನೂ ಓದಿ: ಆಮೀರ್​, ರಾಣಾ, ರಾಕುಲ್​ಗೆ ರಿಯಾ ಫೋನ್​ ಮಾಡಿದ್ದೇಕೆ?

  ಇದನ್ನು ನೋಡಿ ಸಿಟ್ಟಾಗಿರುವ ಹಿರಿಯ ನಿರ್ದೇಶಕ ಭಾರತೀರಾಜ ಅವರು, ಮೀರಾ ಹೇಳಿಕೆಗಳನ್ನು ಖಂಡಿಸಿದ್ದರು. ಜನಪ್ರಿಯತೆಗಾಗಿ ನಟ-ನಟಿಯರ ಕಾಲೆಳೆಯುವುದು ತಪ್ಪು ಎಂದಿದ್ದರು. ಕಷ್ಟಪಟ್ಟು ಕೆಲಸ ಮಾಡಿ, ಜನಪ್ರಿಯಳಾಗು ಎಂದು ಹಿತವಚನ ನೀಡಿದ್ದರು.

  ಅದಾಗಿ ಎರಡೇ ದಿನಕ್ಕೆ ಮೀರಾ ಮತ್ತೆ ತಮ್ಮ ಹಳೆಯ ಕೆಲಸವನ್ನು ಶುರು ಹಚ್ಚಿಕೊಂಡಿದ್ದಾರೆ. ಈ ಬಾರಿ ವಿಜಯ್​ ಅವರನ್ನು ಟಾರ್ಗೆಟ್​ ಮಾಡಿದ್ದಾರೆ. ವಿಷಯವೇನೆಂದರೆ, ಇದೀಗ ಎಲ್ಲಾ ಕಡೆ ಗ್ರೀನ್​ ಇಂಡಿಯಾ ಚಾಲೆಂಜ್​ ನಡೆಯುತ್ತಿದೆಯಲ್ಲಾ? ಅದರ ಅಂಗವಾಗಿ ತೆಲುಗು ನಟ ಮಹೇಶ್​ ಬಾಬು ಅವರು ವಿಜಯ್​ಗೆ ಗಿಡ ನೆಡುವ ಚಾಲೆಂಜ್​ ಹಾಕಿದ್ದರು.

  ಇದನ್ನೂ ಓದಿ: Photos: ಕೊಡಗು ಪ್ರವಾಸದಲ್ಲಿ ನಟ ನಿಖಿಲ್​ ಕುಮಾರ್​ಸ್ವಾಮಿ; ಕಾವೇರಿ ನದಿಗೆ ಬಾಗಿನ ಅರ್ಪಣೆ

  ಅದರಂತೆ ವಿಜಯ್​, ತಮ್ಮ ಮನೆಯ ಹಿತ್ತಲಲ್ಲಿ ಒಂದು ಗಿಡ ನೆಟ್ಟಿದ್ದಾರೆ. ಅಷ್ಟೇ ಅಲ್ಲ, ಅದರ ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅವರ ಅಭಿಮಾನಿಗಳಿಗೆ ಖುಷಿಯಾಗಿರಬಹುದು, ಮೀರಾಗೆ ಅಲ್ಲ. ತಕ್ಷಣ ಸೋಷಿಯಲ್​ ಮೀಡಿಯಾದಲ್ಲಿ ಮೆಸೇಜ್​ ಹಾಕುರುವ ಆಕೆ, ‘ಮನೆಯಲ್ಲಿ ಒಂದು ಗಿಡ ನೆಟ್ಟುಬಿಟ್ರೆ ಸಾಮಾಜಿಕ ಕಳಕಳಿ ಆಗುವುದಿಲ್ಲ. ಗಿಡಗಳನ್ನು ಎಲ್ಲಿ ಮತ್ತು ಹೇಗೆ ನೆಡಬೇಕು ಎಂಬುದನ್ನು ಹಿರಿಯ ನಟ ವಿವೇಕ್​ ಅವರನ್ನು ನೋಡಿ ಕಲಿತಿಕೋ’ ಎಂದು ಸಲಹೆ ನೀಡಿದ್ದಾರೆ.

  See also  ಅದ್ಧೂರಿ ಮದ್ವೆಗೆ ಒಂದು ನಯಾಪೈಸೆ ಖರ್ಚು ಮಾಡದೆ ಕೋಟಿ ಕೋಟಿ ಸಂಪಾದಿಸಿದ ನಯನಾ-ವಿಘ್ನೇಶ್!​

  ವಿವೇಕ್​ ಅವರು, ‘ಗ್ರೀನ್​ ಕಲಾಮ್​’ ಎಂಬ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು, ತಮಿಳುನಾಡಿನಾದ್ಯಂತ 10 ಲಕ್ಷ ಸಸಿಗಳನ್ನು ನೆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರನ್ನು ಹೋಲಿಸಿ ಮೀರಾ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

  ಮಳೆಯಲ್ಲೇ ‘ಸಲಗ’ನ ರೊಮ್ಯಾನ್ಸ್​ … ಮಲೆನಾಡಲ್ಲಿ ಡ್ಯುಯೆಟ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts