Meenakshi Chaudhary: ಇತ್ತೀಚಿನ ದಿನಗಳಲ್ಲಿ ಟಾಲಿವುಡ್ನ ‘ದಿ ಮೋಸ್ಟ್ ಸೆನ್ಸೇಷನ್’ ನಟಿಯಾಗಿ ಹೊರಹೊಮ್ಮಿರುವ ಮೀನಾಕ್ಷಿ ಚೌಧರಿ, ಸತತ ಎರಡು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡುವ ಮೂಲಕ ಸಿನಿಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ಕಾಡಂಚಿನ ಗ್ರಾಮಗಳಿಗೆ ಹಗಲಿನ ವೇಳೆ 3 ಫೇಸ್ ವಿದ್ಯುತ್ ಪೂರೈಕೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸರ್ಕಾರಕ್ಕೆ ಸಲಹೆ
ಕಳೆದ ವರ್ಷ ದಕ್ಷಿಣ ಭಾರತದ ಚಿತ್ರರಂಗದ ಹಲವು ಸಿನಿಮಾಗಳಲ್ಲಿ ನಟಿಸಿದ ಮೀನಾಕ್ಷಿ, ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಇಷ್ಟಾದರೂ ಸಹ ವಿಭಿನ್ನ ಕಥಾಹಂದರಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಿರುವ ನಟಿ, ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸಂಕ್ರಾಂತಿಕಿ ವಾಸ್ತುನಂ’ ಮೂಲಕ ಮತ್ತೊಮ್ಮೆ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದಾರೆ.
ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು, ಬಾಕ್ಸ್ಆಫೀಸ್ನಲ್ಲಿ 300 ಕೋಟಿ ರೂ.ಗೂ ಹೆಚ್ಚು ಲಾಭ ಗಳಿಸಿದೆ. ‘ಗುಂಟೂರು ಕಾರಂ’ ಚಿತ್ರದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ತಮಿಳು ನಟ ದಳಪತಿ ವಿಜಯ್‌ರಂತಹ ಸ್ಟಾರ್ ನಟರೊಂದಿಗೆ ಬೆಳ್ಳಿ ಪರದೆಯ ಮೇಲೆ ಮಿಂಚುತ್ತಿರುವ ಸೌತ್ ಬ್ಯೂಟಿ, ಬ್ಯಾಕ್ ಟು ಬ್ಯಾಕ್ ಅವಕಾಶವನ್ನು ಪಡೆಯುತ್ತಿರುವುದು ಗಮನಾರ್ಹ. ಈ ವರ್ಷದಲ್ಲಿ ಮತ್ತಷ್ಟು ಹಿಟ್ ಕೊಡುವತ್ತ ನಟಿ ದಾಪುಗಾಲಿಟ್ಟಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ ಮೀನಾಕ್ಷಿ, “ತಾಯಿಯ ಪಾತ್ರ ನನ್ನಗೆ ದೊಡ್ಡ ಸವಾಲಾಗಿತ್ತು. ಪ್ರೇಕ್ಷಕರು ನನ್ನನ್ನು ತಾಯಿ ಪಾತ್ರದಲ್ಲಿ ನೋಡಿದರೆ ಒಪ್ಪಿಕೊಳ್ಳುತ್ತಾರೋ ಎಂಬ ಭಯ ನನ್ನಲ್ಲಿ ಕಾಡುತ್ತಿತ್ತು. ಆದರೆ, ಸುಮತಿ ಪಾತ್ರಕ್ಕೆ ನಾನು ಒದಗಿಸಿದ ನ್ಯಾಯ ಇಂದು ಫಲಿಸಿದೆ. ಜನರು ನನ್ನನ್ನು ಸುಮತಿಯಾಗಿ ಒಪ್ಪಿಕೊಂಡಿದ್ದಾರೆ ಎಂಬುದು ನನಗೆ ಸಂತೋಷವಾಗಿದೆ. ಈಗ ನಾನು ಆ ಪಾತ್ರಕ್ಕೆ ಅರ್ಹಳು ಎಂಬ ಖುಷಿ ನನ್ನಲ್ಲಿದೆ” ಎಂದು ಮೀನಾಕ್ಷಿ ಹೇಳಿದ್ದಾರೆ,(ಏಜೆನ್ಸೀಸ್).
ಶೀಘ್ರವೇ ಆರ್ಬಿಐನಿಂದ ಹೊಸ 50 ರೂ. ನೋಟು ರಿಲೀಸ್! ಈ ನಿರ್ಧಾರದಿಂದ ಹಳೆಯ ನೋಟುಗಳ ಗತಿ ಏನು? ಇಲ್ಲಿದೆ ಉತ್ತರ | RBI