ಶೃಂಗೇರಿ: ಅಟಿ ಅಮಾವಾಸ್ಯೆಯಾದ ಭಾನುವಾರ ತಾಲೂಕಿನ ಹಲವಾರು ಕಡೆ ಜನರು ಹಾಲೆಮರದ ಕೆತ್ತೆಯ ಕಷಾಯವನ್ನು ಸೇವಿಸಿದರು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಕಾಡಿಗೆ ಹೋಗಿ ಹಾಲೆಮರದ ಕೆತ್ತೆಯನ್ನು ತೆಗೆದು ಮನೆತಂದ ಬಳಿಕ ಅದರ ಸಿಪ್ಪೆಯನ್ನು ತೆಗೆದು ಸ್ವಚ್ಛಗೊಳಿಸಿ ಸಣ್ಣತುಂಡುಗಳನ್ನಾಗಿ ಮಾಡಿ ಬಳಿಕ ಇದಕ್ಕೆ ಕಾಳುಮೆಣಸು, ಓಮದ ಕಾಳು ಹಾಗೂ ಜೀರಿಗೆ ಹಾಕಿ ಒರಳಕಲ್ಲಿನಲ್ಲಿ ರುಬ್ಬಿಕೊಂಡು ಶುಭ್ರವಾದ ಬಟ್ಟೆಯಲ್ಲಿ ಸೋಸಿ ಅದರ ರಸವನ್ನು ತೆಗೆಯಲಾಯಿತು. ರಸದ ಜತೆ ಕೆಂಡದಲ್ಲಿ ಸುಟ್ಟ ಬಿಳುಚು ಕಲ್ಲನ್ನು ಹಾಕಿ ಹತ್ತು ನಿಮಿಷದ ಬಳಿಕ ಸಿದ್ಧಗೊಂಡ ಕಷಾಯವನ್ನು ಮನೆಮಂದಿ, ನೆರೆಹೊರೆಯವರು ಖಾಲಿಹೊಟ್ಟೆಯಲ್ಲಿ ಸೇವಿಸಿದರು.
ಸುರಿಯುವ ಮಳೆಗೆ ಅಷಾಢ ಮಾಸದಲ್ಲಿ ಸೋಂಕುಗಳು ಕಾಣಿಸಿಕೊಳ್ಳುವುದು ಹೆಚ್ಚು. ಇದನ್ನು ಅರಿತ ಪೂರ್ವಜರು ತಮ್ಮ ಜೀವನಶೈಲಿ ಹಾಗೂ ಆರೋಗ್ಯಕರವಾದ ಆಹಾರ ಕ್ರಮ ಅಳವಡಿಸಿಕೊಂಡವರು. ಅವರ ಆಹಾರ ಕ್ರಮದಲ್ಲಿ ಔಷಧೀಯ ಗುಣವಿತ್ತು. ಹಾಲೆಮರದ ಕಷಾಯ ದೇಹದ ಕಲ್ಮಶಗಳನ್ನು ಹೊರಹಾಕಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ಕಳೆದ 25 ವರ್ಷಗಳಿಂದ ಮನೆಯಲ್ಲಿ ಕಷಾಯವನ್ನು ತಯಾರಿಸುತ್ತಿದ್ದೇವೆೆ. ಸುಮಾರು 50ಕ್ಕೂ ಹೆಚ್ಚು ಮಂದಿ ಕಷಾಯವನ್ನು ಸೇವಿಸಿದ್ದಾರೆ ಎಂದು ವೈಕುಂಠಪುರದ ಭಾಸ್ಕರ ಆಚಾರ್ಯ ತಿಳಿಸಿದರು.
ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್ ಇರಬಹುದು!!
ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….
ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…
ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್!
ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…