ಮಹಿಳಾ ಕುಸ್ತಿಪಟುಗಳ ಪದಕ ಬೇಟೆ

blank
blank

 ಹಳಿಯಾಳ: ವಿಜಯನಗರ ಜಿಲ್ಲೆ ಹಂಪಿ ಉತ್ಸವದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳ ಕ್ರೀಡಾ ವಸತಿ ನಿಲಯದ ಮಹಿಳಾ ಕುಸ್ತಿಪಟುಗಳು ಎರಡು ಚಿನ್ನ, ಎರಡು ಬೆಳ್ಳಿ ಪದಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಮನಿಷಾ ಸಿದ್ದಿ= ಹಂಪಿ ಮಹಿಳಾ ಕಂಠೀರವ: ಕ್ರೀಡಾ ವಸತಿ ನಿಲಯದ ಮನಿಷಾ ಸಿದ್ದಿ 58 ಕೆ.ಜಿ. ಮೇಲ್ಪಟ್ಟವರ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಹಂಪಿ ಮಹಿಳಾ ಕಂಠೀರವ-2025 ಪ್ರಶಸ್ತಿ ಮತ್ತು ಪ್ರತಿಕ್ಷಾ ಭೋವಿ 58 ಕೆ.ಜಿ. ಮೇಲ್ಪಟ್ಟವರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

 ಕಾವ್ಯಾ ದಾನವೇನ್ನವರ – ಹಂಪಿ ಮಹಿಳಾ ಕೇಸರಿ:  ಕುಸ್ತಿ ಪಟು ಕಾವ್ಯ ದಾನವೇನ್ನವರ 54 ಕೆಜಿಯಲ್ಲಿ ಹಂಪಿ ಮಹಿಳಾ ಕೇಸರಿ ಪ್ರಶಸ್ತಿ ಹಾಗೂ ಕಾವೇರಿ ತಲಗೇರಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕುಸ್ತಿ ತರಬೇತುದಾರ ತುಕಾರಾಮ ಗೌಡ ಮಾಹಿತಿ ನೀಡಿದ್ದಾರೆ.

Share This Article

ಸಂಜೆ 7 ಗಂಟೆಯೊಳಗೆ ಊಟ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..? Dinner

Dinner: ನಿಮ್ಮ ದೇಹವು ಸಿರ್ಕಾಡಿಯನ್ ಲಯ ಎಂದು ಕರೆಯಲ್ಪಡುವ ಆಂತರಿಕ ಗಡಿಯಾರವನ್ನು ಹೊಂದಿದೆ ಮತ್ತು ಇದು…