ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ

blank

ಹೊಸಕೋಟೆ : ನಗರ ಭಾಗದಲ್ಲಿ ನೀರಿನ ಸಮಸ್ಯೆ ನೀಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕೊಳವೆಬಾವಿ ಕೊರೆಸಲಾಗುತ್ತಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ಹೇಳಿದರು.

ನಗರದ ವಾರ್ಡ್​ ನಂ.1 ರಲ್ಲಿ ಕೊಳವೆಬಾವಿಗೆ ಮೋಟರ್​ ಪಂಪ್​ ಅಳವಡಿಸುವ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಟ್ಯಾಂಕರ್​ ಮೂಲಕ ನೀರು ಪೂರೈಕೆ ಆರಂಭವಾಗಿದ್ದು, ಇದ್ದನ್ನು ತಪ್ಪಿಸುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಉಪ್ಪಾರ ಹಳ್ಳಿ ಕೆರೆ ಹಾಗೂ ದೊಡ್ಡ ಕೆರೆ ಏರಿಯಲ್ಲಿ ಕೊರೆಸಿರುವ ಕೊಳವೆ ಬಾವಿಗಳಿಗೆ ನಿರಂತರ ವಿದ್ಯುತ್​ ಪೂರೈಕೆ ಮಾಡಿ ನೀರು ಒದಗಿಸಲಾಗುವುದು ಎಂದರು.

ನಗರದಲ್ಲಿ ವಿದ್ಯುತ್​ ಅಂಡರ್​ ಕೇಬಲಿಂಗ್​ ಕಾಮಗಾರಿ ನಡೆಯುತ್ತಿದ್ದು, 11 ಕೆ.ವಿ.ಫೀಡರ್​ ಅಳವಡಿಸುವ ಕೆಲಸ ಅಂತಿಮ ಹಂತ ತಲುಪಿದೆ. ಇನ್ನು ಎರಡ್ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಲೋ ಟೆನ್ಷನ್​ ವಿದ್ಯುತ್​ ಕಾಮಗಾರಿ ಆರಂಭಿಸುವ ಕಾರಣ ನಗರದಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ. ಈ ಶಾಶ್ವತ ಅಂಡರ್​ ಕೇಬಲಿಂಗ್​ ಕಾಮಗಾರಿಗೆ ಸಾರ್ವಜನಿಕರು ಸ್ವಲ್ಪ ಸಹಕಾರ ನೀಡಿದರೆ ಮುಂದಿನ 25&30 ವರ್ಷಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಹೊಸಕೋಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಸದಸ್ಯೆ ಜಮುನಾ ಹರೀಶ್​, ಗೌತಮ್​, ಮುಖಂಡರಾದ ಬಿ.ವಿ.ಬೈರೇಗೌಡ, ಗೋಪಿನಾಥ್​, ನವೀನ್​, ಆನಂದ್​, ರಾಕೇಶ್​, ವಿಷ್ಣು ಇತರರು ಇದ್ದರು.

ಗುತ್ತಿಗೆಯಲ್ಲಿ ಮೀಸಲು ಕೇವಲ ಮುಸ್ಲಿಮರಿಗಲ್ಲ? : ಮುಸ್ಲಿಂ ಸಮುದಾಯದವರಿಗೆ ಮಾತ್ರ ಶೇ.4 ಮೀಸಲಾತಿ ನೀಡಲಾಗುತ್ತಿದೆ ಎಂದು ಹೇಳಿದವರು ಯಾರು? ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೂ ಮೀಸಲಾತಿ ನೀಡಲಾಗುತ್ತಿದೆ. ಅದರಲ್ಲಿ ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಂ ಸಮುದಾಯದವರಲ್ಲ. ಕ್ರಿಶ್ಚಿಯನ್​, ಜೈನ, ಪಾರ್ಸಿ, ಸಿಖ್​ ಹೀಗೆ ಹಲವು ಧರ್ಮಗಳೂ ಬರುತ್ತವೆ. ಈ ಹಿಂದೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಗುತ್ತಿಗೆ ಮೀಸಲಾತಿ ನೀಡಲು ತಿದ್ದುಪಡಿ ಮಾಡಲಾಗಿತ್ತು. ಈಗ ಅದಕ್ಕೆ ಅಲ್ಪಸಂಖ್ಯಾತರು, ಹಿಂದುಳಿದವರನ್ನು ಸೇರಿಸಲಾಗುತ್ತಿದೆ. ಬಿಜೆಪಿಯವರು ಧರ್ಮ, ಜಾತಿಗಳ ನಡುವೆ ಒಡುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಾಮಾಜಿಕ ಕಾಳಜಿಯಿಂದ ಮೀಸಲು ಕ್ರಮ ಕೊಡಲಾಗಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ಸರಿಯಾಗಿದೆ ಸ್ಪೀಕರ್​ ನಡೆ : ವಿಧಾನಸಭೆ ಕಲಾಪದ ವೇಳೆ ಸ್ಪೀಕರ್​ ಪೀಠಕ್ಕೆ ಅಗೌರವ ತೋರಿದ ಆರೋಪದಡಿ ಪ್ರತಿಪಕ್ಷ ಬಿಜೆಪಿಯ 18 ಶಾಸಕರನ್ನು 6 ತಿಂಗಳು ಅಮಾನತು ಮಾಡಿ ಆದೇಶ ಹೊರಡಿಸಿರುವ ಸ್ಪೀಕರ್​ ಯು.ಟಿ.ಖಾದರ್​ ಅವರ ರ್ನಿಣಯವನ್ನು ಶಾಸಕ ಶರತ್​ ಬಚ್ಚೇಗೌಡ ಸಮರ್ಥಿಸಿಕೊಂಡರು. ಸದನದ ನಿಯಮಗಳನ್ನು ಉಲ್ಲಂಸಿರುವ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಕ್ರಮ ಸರಿ ಇದೆ. ಸದನದಲ್ಲಿ ಬಜೆಟ್​ ಮೇಲಿನ ಚರ್ಚೆ ವೇಳೆ ಬಿಜೆಪಿ ಶಾಸಕರು ಸ್ಪೀಕರ್​ ಪೀಠದ ಮೇಲೇರಿ ಹಾಗೂ ಸದನದ ಬಾವಿಯ ಮುಂದೆ ಪ್ರತಿಭಟನೆ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸಿರುವುದಲ್ಲದೆ, ವಿಧೇಯಕದ ಪ್ರತಿ ಹರಿದು ಸ್ಪೀಕರ್​ ಮೇಲೆ ಎಸೆಯುತ್ತಾ ೂಷಣೆಗಳನ್ನು ಕೂಗಿರುವುದು ಸ್ಪೀಕರ್​ ಹುದ್ದೆ ಹಾಗೂ ಪೀಠಕ್ಕೆ ಮಾಡಿದ ಅಪಮಾನ ಅದಾಗಿದೆ ಎಂದರು.

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…