More

    ಅಮೆರಿಕದ ಕಸ್ತೂರಿ ಕನ್ನಡ ಸಂಘದಿಂದ ಮಣ್ಣು ಉಳಿಸಿ ಅಭಿಯಾನದ ಮೂಲಕ ಅರ್ಥಪೂರ್ಣ ಯುಗಾದಿ ಆಚರಣೆ

    ವರದಿಗಾರಿಕೆ: ಡಾ. ನವೀನ ಉಲಿ

    ಈ ಕಳೆದ ಶನಿವಾರ (ಮೇ 14)ದಂದು ಬೆಂಟ್ಲಿವಿಲ್ ಒಹಾಯೊದ ಶೆಲ್ಟರ್ ಹೌಸ್ ಪಿಕ್ನಿಕ್ ಏರಿಯಾದಲ್ಲಿ ಕಸ್ತೂರಿ ಕನ್ನಡ ಸಂಘದ ಯುಗಾದಿ ಸಮಾರಂಭ ನಡೆಯಿತು. ಸೋಲನ್ ಪಟ್ಟಣದ ಮೇಯರ್ ಶ್ರೀಯುತ ಎಡ್ವರ್ಡ್ ಕ್ರೌಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಸಕ್ತಿಯಿಂದ ವೀಕ್ಷಿಸಿದರು. “ಮಣ್ಣು ಉಳಿಸಿ“ ಚಳುವಳಿಯ ಮಾಹಿತಿಯನ್ನು ತಿಳಿದ ಬಳಿಕ ಪ್ರಶಂಸೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ನಮ್ಮ ಕಾರ್ಯಗಳಿಗೆ ಬೆಂಬಲದ ಆಶ್ವಾಸನೆ ನೀಡಿ, ಈಶಾನ್ಯ ಒಹಾಯೋದ ಇತರ ಮೇಯರ್​ಗಳ ಜತೆ ಸಂಪರ್ಕ ಬೆಳೆಸಲು ಸಲಹೆಗಳನ್ನು ಕೊಟ್ಟರು. ಇದೇ ವೇಳೆ ಅವರಿಗೆ ಸಂಘದಿಂದ ಕೃತಜ್ಞತೆ ಸಲ್ಲಿಸಲಾಯಿತು.

    ನಮಗೆ ಆದರದ ಸ್ವಾಗತ ನೀಡಿ, ಕಾರ್ಯಕ್ರಮದಲ್ಲಿ ನೆರೆದ ಎಲ್ಲರಿಗೂ ಮಣ್ಣಿನ ದುಸ್ಥಿತಿಯ ಬಗ್ಗೆ ಜಾಗೃತಿ ಮೂಡುವಂತೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷೆ ಶ್ರೀಮತಿ ದೀಪಾ ರಾವ್ ಮತ್ತು ಅವರ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ನಾವು ಅಭಾರಿಗಳು. ದರ್ಶನಾ ಮತ್ತಿತರ ಭೂ-ಸ್ನೇಹಿತ ಸ್ವಯಂಸೇವಕರು ಅಲ್ಲಿ ನೆರೆದ ದೊಡ್ಡವರು ಹಾಗೂ ಮಕ್ಕಳನ್ನು ತೊಡಗಿಸಿಕೊಂಡು, ಕಲ್ಪನೆ ಮತ್ತು ಸೃಜನಶೀಲತೆಯಿಂದ ಹೆಗಲ ಚೀಲಗಳ ಮೇಲೆ ಕಲಾತ್ಮಕ ಚಿತ್ರಗಳನ್ನು ಬರೆಯುವುದರ ಮೂಲಕ ನಮ್ಮ ಚಳುವಳಿಯ ಬಗ್ಗೆ ಅರಿವು ಹರಡಿದರು. ಅವರಿಗೆ ನಮ್ಮ ಅಸಂಖ್ಯ ವಂದನೆಗಳು.

    “ಮಣ್ಣು ಉಳಿಸಿ” ಚಳುವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿ ಬೆಂಬಲ ತೋರಿದ ಎಲ್ಲರಿಗೂ ನಮ್ಮ ಗೌರವಯುತ ನಮನಗಳು. ಬೇರೆ ಬೇರೆ ಸಮುದಾಯಗಳತ್ತ ಕೈ ಚಾಚಿ ನಮ್ಮ ಕಾರ್ಯಕ್ರಮಗಳ ಬಗ್ಗೆ ಅರಿವು ಹರಡುವತ್ತ ನಮ್ಮ ಅಳಿಲು ಸೇವೆ ಸಲ್ಲಿಸೋಣ. “ಸೇವ್ ಸಾಯಿಲ್” ಇದನ್ನು ನನಸಾಗಿಸೋಣ. ಎರಡು ವರ್ಷಗಳ ಕಾಲ ಕರೊನ ಪಿಡುಗಿನಿಂದಾಗಿ ಬರೀ ಅಂತರ್ಜಾಲದ ಮೂಲಕ ವಿವಿಧ ಸಮಾರಂಭಗಳನ್ನು ಆಚರಿಸಿ ಬೇಸತ್ತ ಈಶಾನ್ಯ ಒಹಾಯೋದ ಕನ್ನಡಿಗರು ಕೊನೆಗೂ ಯುಗಾದಿ ಸಮಾರಂಭದ ಮೂಲಕ ಮುಖತಃ ಭೇಟಿಯಾಗಲು ಈ ಕಳೆದ ಶನಿವಾರ ಮೇ ತಿಂಗಳ ೧೪ರಂದು ಸಾಧ್ಯವಾಯಿತು.

    2022 ರಲ್ಲಿ ಕಸ್ತೂರಿ ಕನ್ನಡ ಸಂಘದ ಮೊದಲ ಕಾರ್ಯಕ್ರಮ ಕ್ಲೀವ್ ಲ್ಯಾಂಡ್ ಮೆಟ್ರೋಪಾರ್ಕ್ ಬೆಂಟ್ಲಿವಿಲ್ ಶೆಲ್ಟರ್ ಹೌಸ್ ಪಿಕ್ನಿಕ್ ಏರಿಯಾ ದಲ್ಲಿ ಅದ್ದೂರಿಯಿಂದ ನಡೆಯಿತು. ಸೋಲನ್ ಪಟ್ಟಣದ ಮೇಯರ್ ಶ್ರೀಯುತ ಎಡ್ವರ್ಡ್ ಕ್ರೌಸ್ ಅವರು ಮುಖ್ಯ ಅತಿಥಿಯಾಗಿ, ಶ್ರೀ ವಿಜಯಕುಮಾರ್ ಮಠದ ಮತ್ತು ಶ್ರೀಮತಿ ಗಾಯತ್ರಿ ವಿಜಯಕುಮಾರ್ ಅವರ ಜೊತೆಗೆ ಈ ಸಮಾರಂಭವನ್ನು ಉದ್ಘಾಟಿಸಿದರು.

    ಕ್ಲೀವ್ ಲ್ಯಾಂಡ್ ಸುತ್ತಮುತ್ತದಲ್ಲಿರುವ ಕನ್ನಡಿಗರಲ್ಲಿ ಗರಿಷ್ಟ ಸಂಖ್ಯೆ ಸೋಲನ್ ಪಟ್ಟಣದಲ್ಲಿ ವಾಸಿಸಿರುವ ಕಾರಣ ಅಲ್ಲಿನ ಮೇಯರ್ ಅವರನ್ನು ಆಮಂತ್ರಿಸಲು ನಾವು ನಿರ್ಧರಿಸಿದೆವು. ಕನ್ನಡಿಗರು ಈ ಪ್ರದೇಶದ ಆರ್ಥಿಕತೆಗೆ ಮಾಡುತ್ತಿರುವ ಕೊಡುಗೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸುವದು ನಮ್ಮ ಉದ್ದೇಶವಾಗಿತ್ತು. ಅವರು ಉತ್ಸಾಹದಿಂದ ನಮ್ಮ ಕಾರ್ಯಕ್ರಮಗಳನ್ನು ವೀಕ್ಷಿಸಿ ನಮ್ಮ ವಿಧ ವಿಧದ ಅಡಿಗೆಗಳನ್ನು ಸೇವಿಸಿದ್ದು ನಮಗೆ ತುಂಬಾ ಮುದ ತಂದಿತು.

    ದೊಡ್ಡವರು ಧ್ವನಿ ಸೇರಿಸಿಕೊಂಡು ಹಾಡಿದರೆ, ಬಾಲಕ ಬಾಲಕಿಯರು ಲಯಬದ್ಧವಾಗಿ ಕುಣಿದರು. ಮಹಿಳೆಯರು ವರ್ಣಮಯವಾಗಿ ವಯ್ಯಾರದಿಂದ ಬಳುಕಿದರೆ, ಗಂಡಸರು ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು. ಯುಗಾದಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಹೊರಾಂಗಣ ಪಿಕ್ನಿಕ್ ಸೇರಿಸಿದ್ದು ಈ ವರ್ಷದ ವೈಶಿಷ್ಟ್ಯ. ಕನ್ನಡ ಬಳಗದವರು ದಿನವಿಡೀ ಕ್ರಿಕೆಟ್ ಆಡುತ್ತ, ಹಾಡುತ್ತ, ಕುಣಿಯುತ್ತ, ಬಿಸಿ ಬೇಳೆ ಭಾತ್ ಮತ್ತು ಒಬ್ಬಟ್ಟಿನ ಊಟ ಸವಿಯುತ್ತ ಕಾಲ ಕಳೆದಿದ್ದು ಒಂದು ಅವಿಸ್ಮರಣೀಯ ಅನುಭವ. ಸೂರ್ಯಾಸ್ತದ ನಂತರ ಶಿಬಿರದ ಬೆಂಕಿಯ ಸುತ್ತ ಗುಂಪಾಗಿ ಸೇರಿದ್ದು ಅನನ್ಯ.

    ಚುನಾವಣೆ ಸಮೀಪದಲ್ಲೇ ಗುಜರಾತ್​ನಲ್ಲಿ ಮಹತ್ತರ ಬೆಳವಣಿಗೆ: ಕಾಂಗ್ರೆಸ್​ಗೆ ಹಾರ್ದಿಕ್​ ಪಟೇಲ್ ಗುಡ್​ ಬೈ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts