ಬೀಳಗಿ: ಹೋಳಿ ಹಬ್ಬವನ್ನು ಎಲ್ಲ ಧರ್ಮದವರು ಒಂದುಗೂಡಿ ಆಚರಿಸುವ ಮೂಲಕ ಹಬ್ಬಕ್ಕೆ ನಿಜವಾದ ಅರ್ಥ ಕಲ್ಪಿಸಿದ್ದಾರೆ ಎಂದು ಹೋಳಿ ಆಚರಣೆ ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಮ್ಮೂರ ಹೋಳಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೋಳಿ ದಿನದಂದು ಬಣ್ಣ ಆಡುವುದನ್ನು ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೋಳಿ ಹಬ್ಬ ಪ್ರವಾಸ, ಪಾರ್ಟಿಗೆ ಮಾತ್ರ ಸೀಮಿತವಾಗುತ್ತಿದೆ. ಹೀಗಾಗಬಾರದು ಎಂಬ ಉದ್ದೇಶದಿಂದ ಎಲ್ಲ ಧರ್ಮದವರು ಸೇರಿ ಹೋಳಿ ಆಚರಿಸಲು ನಿರ್ಧರಿಸಲಾಗಿತ್ತು ಎಂದರು.
ಚಲನಚಿತ್ರ ನಟಿ ಪ್ರಿಯಾ ಸವದಿ ಹಾಗೂ ಹುಬ್ಬಳ್ಳಿ ನೃತ್ಯಗಾರ್ತಿ ತನುಶ್ರೀ ಭಾಗವಹಿಸಿದ್ದು, ಅವರ ಜತೆ ಸೆಲ್ಪಿ ತೆಗೆದುಕೊಳ್ಳಲು ಜನರು ಮುಗಿ ಬಿದ್ದರು. ಅವರಿಬ್ಬರನ್ನು ಪ್ರವೀಣಗೌಡ ಪಾಟೀಲರ ನೇತೃತ್ವದಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.
ಹೋಳಿ ಉತ್ಸವ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಬಸವರಾಜ ಹೊಳಬಣ್ಣವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಪಪಂ ಸಿದ್ದು ಮಾದರ, ಪಡಿಯಪ್ಪ ಕಳ್ಳಿಮನಿ, ರವಿ ನಾಗನಗೌಡರ, ಸಿದ್ದು ಗಡ್ಡದ, ರವಿ ಮಂಟೂರ, ಆನಂದ ಮುಳವಾಡ, ಪತ್ರಕರ್ತರ ಕಿರಣ ನಾಯ್ಕರ, ಮನೋಜ ಹಾದಿಮನಿ, ಆನಂದ ಮಂಟೂರ, ಜೈಭೀಮ, ಮೈಬೂಬ ನಿಂಬಾಳ್ಕರ ಇದ್ದರು.