#MeToo: ಲೈಂಗಿಕ ಕಿರುಕುಳಕ್ಕೆ ಬೇಸತ್ತು ಚಿತ್ರರಂಗಕ್ಕೆ ಗುಡ್​ ಬೈ ಹೇಳಿದ್ರಾ ‘ಎರಡನೇ ಸಲ’ ಚೆಲುವೆ?

ಬೆಂಗಳೂರು: ಇಷ್ಟುದಿನ ಬಾಲಿವುಡ್​ನಲ್ಲಿ ಸಾಲು ಸಾಲು #MeToo ಪ್ರಕರಣಗಳು ಬೆಳಕಿಗೆ ಬಂದಿದ್ದು, ಸದ್ಯ ಸ್ಯಾಂಡಲ್​ವುಡ್​ನಲ್ಲಿಯೂ ಆರಂಭವಾಗಿದೆ. ಎರಡನೇ ಸಲ ಚಿತ್ರದ ನಟಿ ಸಂಗೀತಾ ಭಟ್​ ಇದೇ ವಿಷಯವಾಗಿ ತಮ್ಮ ಚಿತ್ರರಂಗದ ಕರಾಳ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸಿ ಚಿತ್ರರಂಗಕ್ಕೇ ಗುಡ್​ ಬೈ ಹೇಳಿದ್ದಾರೆ.

ಹೌದು, ತಮ್ಮ ಫೇಸ್​ಬುಕ್​ನಲ್ಲಿ ಮೂರು ಪುಟಗಳ ವಿವರಣೆ ನೀಡಿ ತಾನು 15ನೇ ವಯಸ್ಸಿನಲ್ಲಿದ್ದಾಗಿನಿಂದ ಇಲ್ಲಿಯವರೆಗೂ ಅನುಭವಿಸಿದ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ವಿಷಯವನ್ನು ಯಾರ ಬಳಿಯೂ ಹೇಳಬೇಡ ಎಂದು ಹಲವರು ನನಗೆ ಸಲಹೆ ನೀಡಿದ್ದರು. ಆದರೆ ನನಗಾದ ಅನುಭವವನ್ನು ಹೇಳದೆ ನನ್ನ ಮನಸ್ಸಿನಲ್ಲಿಯೇ ಉಳಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಹಾಗಾಗಿ ಇದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದೇನೆ. ನಾನು ಈಗಾಗಲೇ ಚಿತ್ರರಂಗದಿಂದ ದೂರು ಉಳಿದಿದ್ದು, ಯಾವುದೇ ಪ್ರಚಾರಕ್ಕಾಗಿಯೋ ಅಥವಾ ಉತ್ತಮ ಅವಕಾಶಕ್ಕಾಗಿಯೋ ಇವನ್ನೆಲ್ಲ ಹೇಳಿಕೊಳ್ಳುತ್ತಿಲ್ಲ ಎಂದು ಸಂಗೀತ ಭಟ್​ ಹಂಚಿಕೊಂಡಿದ್ದಾರೆ.

View this post on Instagram

Hello everyone….i have been wanting to share with you all from a few months,…that i am no longer in the film industry (for good) been undergoing a lot of trauma since the time i stepped foot in this industry…many told me not to share my story but i didn't want my struggle,my pain to go unnoticed, I request you all to read the attached post's being human and not by judging or assuming different stories.I have tried my best to put my story in a summary of three pages(which was a challenge). These posts are not posted to attain any attention from media etc…These are my experiences which haunts me every minute of my life..i have gathered too much courage to write this,which i know,comes with a lot of risk… please read page 1,2,3 to know more… #mybadexperiences

A post shared by Sangeetha Bhat Sudarshan (@sangeetha_bhat) on

ಚಿಕ್ಕ ವಯಸ್ಸಿನಲ್ಲಿಯೇ ನನ್ನ ತಂದೆಯನ್ನು ಕಳೆದುಕೊಂಡ ನಾನು ಅನಿವಾರ್ಯವಾಗಿ ದುಡಿಯಬೇಕಾಯಿತು. ನಟನೆ ನನ್ನ ಪ್ಯಾಶನ್​ ಆಗಿದ್ದರಿಂದ ಅದೇ ಕ್ಷೇತ್ರದಲ್ಲಿ ಮುಂದುವರಿಯಲು ನಿರ್ಧರಿಸಿ 15ನೇ ವಯಸ್ಸಿನಲ್ಲಿಯೇ ಆಡಿಷನ್​ಗಳನ್ನು ಕೊಡಲು ಆರಂಭಿಸಿದೆ. ಅಂದಿನಿಂದ ಇಂದಿನವರೆಗೂ ಚಿತ್ರ ತಂಡದಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ತಮ್ಮ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)