ಧರ್ಮದ ವಿಚಾರವನ್ನು ಬಹಿರಂಗವಾಗಿ ಡಿಕೆಶಿ ಮಾತನಾಡಿದ್ದು ಯಾಕೆ: ಎಂ. ಬಿ. ಪಾಟೀಲ್

ವಿಜಯಪುರ: ರಾಜಕಾರಣ ಬೇರೆ ಧರ್ಮದ‌ ವಿಚಾರವೇ ಬೇರೆ. ರಾಜಕೀಯಕ್ಕೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ನಮ್ಮ ಅಸ್ಮಿತೆ. ರಾಜಕಾರಣ ಬೇರೆ ಧರ್ಮದ‌ ವಿಚಾರವೇ ಬೇರೆ. ಲಿಂಗಾಯತ ಪ್ರತ್ಯೇಕತೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಿವೆ ಎನ್ನುವುದು ತಪ್ಪು. ಕಡಿಮೆ ಸ್ಥಾನ ಬಂದಿದ್ದರ ಕುರಿತು ಸಚಿವ ಡಿಕೆಶಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಕಡಿಮೆ ಸ್ಥಾನ ಬಂದಿದ್ದರ ಕುರಿತು ನಾಲ್ಕು ಗೋಡೆಗಳ ಮಧ್ಯೆ, ಪಕ್ಷದಲ್ಲಿ ಆಂತರಿಕವಾಗಿ ಮಾತನಾಡಬೇಕು. ಬಹಿರಂಗವಾಗಿ ಸಚಿವ ಶಿವಕುಮಾರ್​ ಮಾತನಾಡಿದ್ದು ಯಾಕೆ? ಕೆಂಪೇಗೌಡರ ಬಗ್ಗೆ ನಮಗೆ ಅಪಾರ ಅಭಿಮಾನವಿದೆ. ಒಕ್ಕಲಿಗರ, ಬಸವಣ್ಣನವರ ಬಗ್ಗೆ ನಮಗೆ ಅಪಾರ ಗೌರವಿದೆ. ಲಿಂಗಾಯತ ಪ್ರತ್ಯೇಕತೆಯಿಂದಲೇ ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಕಡಿಮೆ ಸ್ಥಾನ ಬಂದಿದೆ ಎನ್ನುವುದಾದರೆ ದಕ್ಷಿಣ ಕರ್ನಾಟಕ ಹಾಗೂ ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಡಿಕೆಶಿ ಎಷ್ಟು ಸ್ಥಾನ ಗೆಲ್ಲಿಸಿದ್ದಾರೆ ಎಂದು ಪ್ರಶ್ನಿಸಿದರು. (ದಿಗ್ವಿಜಯ ನ್ಯೂಸ್)