ಚಡಚಣ: ತಾಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷರಾಗಿ ಶಿಣ ಇಲಾಖೆಯ ಬಸವರಾಜ್ ಎಸ್.ಮಜ್ಜಗಿ ಪುನರ್ ಆಯ್ಕೆಯಾಗಿದ್ದಾರೆ.
ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ರೇವಣಸಿದ್ದ ಲಾಳಸೇರಿ, ಖಜಾಂಚಿಯಾಗಿ ಕಂದಾಯ ಇಲಾಖೆಯ ವಿಠ್ಠಲ್ ಕೋಳಿ ಹಾಗೂ ಕಾರ್ಯದರ್ಶಿಯಾಗಿ ಶಿಣ ಇಲಾಖೆಯ ವಿಠ್ಠಲ್ ಕಾಂಬಳೆ ಸೇರಿ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಶೋಕ್ ಉಮರಾಣಿ ಘೊಷಿಸಿದ್ದಾರೆ.
ನೂತನ ಪದಾಧಿಕಾರಿಗಳನ್ನು ತಾಲೂಕಿನ ವಿವಿಧ ಸಂಟನೆಗಳ ವತಿಯಿಂದ ಸನ್ಮಾನಿಸಲಾಯಿತು. ಸಂದ ಜಿಲ್ಲಾಧ್ಯ ಸುರೇಶ್ ಶೇಡಸ್ಯಾಳ, ಜುಬೇರ್ ಕೆರೂರ, ವಿಜು ಮೇಲಿನಕೇರಿ, ಎ.ಎಸ್ ಸೊನ್ನಗಿ, ಐ.ಎಂ. ಬೆದ್ರೇಕರ್, ಎಸ್.ಎಸ್. ಪಾಟೀಲ್, ಎಸ್.ಬಿ. ಪಾಟೀಲ್, ಸುರೇಶ್ ಮಾವಿನಮರ, ಬಸವಂತ ಉಮರಾಣಿ, ಡಿ.ಎಸ್. ಬಗಲಿ ಇದ್ದರು.