ಎಚ್​.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡಿ: ಬಿಎಸ್​ಪಿಯ ಏಕೈಕ ಶಾಸಕನಿಗೆ ಮಾಯಾವತಿ ಸೂಚನೆ

ಲಕ್ನೋ: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಅಲ್ಪಮತಕ್ಕೆ ಕುಸಿದಿರುವ ತಮ್ಮ ಸರ್ಕಾರದ ಪರವಾಗಿ ವಿಶ್ವಾಮತ ಯಾಚಿಸುತ್ತಿರುವ ಕರ್ನಾಟಕ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪರವಹಿಸುವಂತೆ ರಾಜ್ಯದ ಏಕೈಕ ಬಿಎಸ್​ಪಿ ಶಾಸಕ ಎನ್​. ಮಹೇಶ್​ಗೆ ಬಿಎಸ್​ಪಿ ನಾಯಕಿ ಮಾಯಾವತಿ ಸೂಚಿಸಿದ್ದಾರೆ.

ಈ ಬಗ್ಗೆ ಭಾನುವಾರ ಟ್ವೀಟ್​ ಮಾಡಿರುವ ಅವರು, ಎಚ್​.ಡಿ. ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಎನ್​. ಮಹೇಶ್​ಗೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ಎಚ್​.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತಿದ್ದು, ಚರ್ಚೆಗಳೆಲ್ಲ ಮುಗಿದ ನಂತರದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಮತ ವಿಭಜನೆಗೆ ಹಾಕಿದಾಗ ತಾವು ಕಲಾಪಕ್ಕೆ ಗೈರುಹಾಜರಾಗುವುದಾಗಿ ಎನ್​. ಮಹೇಶ್​ ಹೇಳಿದ್ದರು. ಸರ್ಕಾರವನ್ನು ಬೆಂಬಲಿಸಬೇಕೆ, ಬೇಡವೇ ಎಂಬ ಬಗ್ಗೆ ಪಕ್ಷದ ಮುಖಂಡರಿಂದ ತಮಗೆ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಇದರಿಂದ ದೋಸ್ತಿ ಸರ್ಕಾರ ಚಿಂತೆಗೀಡಾಗಿದ್ದರೆ, ಬಿಜೆಪಿ ಪಾಳೆಯದಲ್ಲಿ ಸಂತಸ ಮೂಡಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *