Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಯೋ ಯೋ ಟೆಸ್ಟ್​ನಲ್ಲಿ ಕೊಹ್ಲಿ ದಾಖಲೆ ಮುರಿದ ಮಯಾಂಕ್​!

Monday, 16.07.2018, 7:19 PM       No Comments

ನವದೆಹಲಿ: ಹಿಮಾಚಲ ಪ್ರದೇಶ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಯುವ ಆಟಗಾರ ಮಯಾಂಕ್ ದಗರ್ ಇತ್ತೀಚೆಗೆ ಭಾಗಿಯಾಗಿದ್ದ ಯೋ ಯೋ ಟೆಸ್ಟ್​ನಲ್ಲಿ 19.3 ಅಂಕ ಗಳಿಸಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಷ್ ಪಾಂಡೆ ದಾಖಲೆಯನ್ನು ಮುರಿದಿದ್ದಾರೆ.

ಕೊಹ್ಲಿ 19 ಅಂಕ ಸಂಪಾದಿಸಿರುವುದು ಗರಿಷ್ಠವಾಗಿದ್ದರೆ, ಮನೀಷ್ ಪಾಂಡೆ, ಟೀಮ್ ಇಂಡಿಯಾದ ಗರಿಷ್ಠ 19.2ರ ದಾಖಲೆ ಹೊಂದಿದ್ದಾರೆ. 19 ವಯೋಮಿತಿ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಯಾಂಕ್​ ತಮ್ಮ ಇನ್ಸ್​ಟಾಗ್ರಾಮ್ ಖಾತೆಯನ್ನು ಯೋ ಯೋ ಟೆಸ್ಟ್​ನಲ್ಲಿ 19.3 ಅಂಕ ಸಂಪಾದಿಸಿರುವುದನ್ನು ತಿಳಿಸಿದ್ದಾರೆ.

ಯೋ ಯೋ ಟೆಸ್ಟ್ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರ ಫಿಟ್​ನೆಸ್ ಬೆಂಚ್​ ಮಾರ್ಕ್ ಎನಿಸಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಹಾದಿಯಲ್ಲಿರುವ ಆಟಗಾರರು ಉತ್ತಮ ಫಾರ್ಮ​ನೊಂದಿಗೆ ಯೋ ಯೋ ಟೆಸ್ಟ್​ನಲ್ಲೂ ಉತ್ತಿರ್ಣರಾಗಿರಬೇಕು. ಅಂಬಟಿ ರಾಯುಡು, ಸಂಜು ಸ್ಯಾಮ್ಸನ್ ಹಾಗೂ ಮೊಹಮದ್ ಶಮಿ, ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತ ಹಾಗೂ ಭಾರತ ಎ ತಂಡದಿಂದ ಹೊರಬೀಳಲು ಕಾರಣವಾಗಿದ್ದು ಇದೇ ಯೋ ಯೋ ಟೆಸ್ಟ್.

ಯೋ ಯೋ ಟೆಸ್ಟ್ ನಡೆಸುವ ಬಗ್ಗೆ ಇನ್ನೂ ಬಿಸಿಸಿಐ ಹಂತದಲ್ಲಿ ಚರ್ಚೆಗಳು ನಡೆಯುತ್ತಿರುವ ವೇಳೆಯಲ್ಲಿಯೇ ಹಲವು ದೇಶೀಯ ಆಟಗಾಟರರು ಈಗಾಗಲೇ ಯೋ ಯೋ ಟೆಸ್ಟ್​ಗೆ ಸಿದ್ಧವಾಗುತ್ತಿದ್ದಾರೆ. (ಏಜೆನ್ಸೀಸ್​)

View this post on Instagram

Mayank Dagar who plays domestic cricket for Himachal Pradesh recently took the yo-yo fitness test and cleared it with flying colours. It is mandatory to go past the score of 16.1 in the test which most of the Indian cricketers manage to do it. Reportedly, the bar is set to increase up to 16.3 or 16.5 going forward. Though we don’t have the latest scores of the Indian cricketers, last year Virat Kohli and Manish Pandey were the top scorers.While the captain managed to score 19, Pandey trumped him with 19.2 which most probably remains the known top score until now. Ashish Nehra had also managed to score 18.5 before he played his last international series. However, Mayank Dagar has easily gone past all these stars and his yo-yo test score reads 19.3.🔥😍😎 – #MayankDagar 🍁 ❤We Love You Mayank❤

A post shared by Mayank Dagar 🌹 (@mayank_dagar.fc) on

Leave a Reply

Your email address will not be published. Required fields are marked *

Back To Top