More

    ಮುಂಬೈ ವಿರುದ್ಧ ಪಂದ್ಯದಿಂದ ಮಯಾಂಕ್​ಗೆ ರೆಸ್ಟ್

    ಬೆಂಗಳೂರು: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ವಿರುದ್ಧದ ಪಂದ್ಯಕ್ಕೆ ಮುನ್ನ ಕರ್ನಾಟಕ ತಂಡಕ್ಕೆ ಹೊಡೆತ ಬಿದ್ದಿದೆ. ಭಾರತದ ಟೆಸ್ಟ್ ತಂಡದ ಆರಂಭಿಕರೂ ಆಗಿರುವ ಮಯಾಂಕ್ ಅಗರ್ವಾಲ್​ಗೆ ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಮುನ್ನ ವಿಶ್ರಾಂತಿ ತೆಗೆದುಕೊಳ್ಳುವಂತೆ ಬಿಸಿಸಿಐ ಸೂಚನೆ ನೀಡಿದೆ. ಇದರಿಂದಾಗಿ ಜನವರಿ 3ರಿಂದ ಮುಂಬೈನಲ್ಲಿ ನಡೆಯಲಿರುವ ಕರ್ನಾಟಕ ತಂಡದ 4ನೇ ಲೀಗ್ ಪಂದ್ಯದಿಂದ ಮಯಾಂಕ್ ಅವರನ್ನು ಹೊರಗಿಡಲಾಗಿದೆ. ಈ ಮುನ್ನ ತಂಡದಿಂದ ಕೊಕ್ ಪಡೆದಿದ್ದ ಬ್ಯಾಟ್ಸ್​ಮನ್ ಆರ್. ಸಮರ್ಥ್, ಮಯಾಂಕ್ ಸ್ಥಾನವನ್ನು ತುಂಬಲು ತಂಡಕ್ಕೆ ಮರಳಿದ್ದಾರೆ.

    ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಮಯಾಂಕ್ ಭಾರತ ಎ ತಂಡದ ಪರ ಅಲ್ಲಿಗೆ ತೆರಳಲಿದ್ದು, ಜನವರಿ 17ರಿಂದ ಚತುರ್ದಿನ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ಬಳಿಕ ಫೆಬ್ರವರಿ 21ರಿಂದ ನಡೆಯಲಿರುವ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅವರು ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕರ್ನಾಟಕ ತಂಡ ಈಗಾಗಲೆ ರಾಷ್ಟ್ರೀಯ ತಂಡದ ಸೇವೆಯಲ್ಲಿರುವ ಕೆಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ಗೈರಿನ ಹಿನ್ನಡೆ ಹೊಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts