ಡಾ.ಎಚ್.ಕೆ.ಎಸ್. ಸ್ವಾಮಿ ಹೇಳಿಕೆ I ಮಾಯಕೊಂಡದಲ್ಲಿ ವಿಚಾರ ಸಂಕಿರಣ
ಮಾಯಕೊಂಡ: ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಜತೆಗೆ ಪರಿಸರ ಸಂರಕ್ಷಣೆಯತ್ತ ಗಮನ ಹರಿಸುವಂತೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್.ಕೆ.ಎಸ್. ಸ್ವಾಮಿ ತಿಳಿಸಿದರು.
ಮಾತೃಶ್ರೀ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಬಸವೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ದೇಶ ಸುಂದರವಾಗಲು ಮೊದಲು ಹಳ್ಳಿಗಳು ಸ್ವಚ್ಛವಾಗಿರಬೇಕು ಎಂಬುದು ಮಹಾತ್ಮ ಗಾಂಧೀಜಿ ಪರಿಕಲ್ಪನೆ. ಅವರ ಮಾತಿನಂತೆ ಪರಿಸರ ಸ್ವಚ್ಛತೆಗೆ ನಾವು ಆದ್ಯತೆ ನೀಡಬೇಕು. ಹಣದ ಹಿಂದೆ ಹೋದರೆ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಹಳ್ಳಿಗಳಲ್ಲಿ ಸ್ವಚ್ಛಂದವಾದ ಬದುಕು ಕಟ್ಟಿಕೊಳ್ಳಬೇಕು. ಗ್ರಾಮೀಣ ಸಾಕ್ಷರತೆ ಪ್ರಮಾಣ ಹೆಚ್ಚಳದ ಜತೆಗೆ ಶೈಕ್ಷಣಿಕ ಅಭಿವೃದ್ಧಿಯೂ ಆಗಬೇಕು ಎಂದರು.
ಪತ್ರಕರ್ತ ಪಿ.ಎಚ್.ಕೃಷ್ಣಮೂರ್ತಿ ಮಾತನಾಡಿ, ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕೆ ಪರಿಸರ ರಕ್ಷಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯೆ ಡಾ. ತ್ರಿವೇಣಿ ಮಾತನಾಡಿ, ಪರಿಸರದ ಜತೆಗೆ ಮನಸ್ಸನ್ನು ಕೂಡ ಪರಿಶುದ್ಧ ಮಾಡಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಗಾಂಧೀಜಿ ವಿಚಾರಗಳನ್ನು ರೂಢಿಸಿಕೊಳ್ಳಲು ಸಲಹೆ ನೀಡಿದರು.
ಮಾತೃಶ್ರೀ ಸಂಸ್ಥೆಯ ಅಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿ, ಸಂಸ್ಥೆಯ ಸಾಮಾಜಿಕ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಬಸವೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕರಾದ ಸೋಮಶೇಖರ್, ಸಂತೋಷ್, ದಿನೇಶ್, ಲಕ್ಷ್ಮಣ್, ಮಾತೃಶ್ರೀ ಸಂಸ್ಥೆಯ ನಿರ್ದೇಶಕ ಆಂಜನೇಯ, ಮಂಜುನಾಥ್, ಯೋಗೇಶ್, ಲಕ್ಷ್ಮಿ, ಪ್ರದೀಪ್, ಕುಮಾರಸ್ವಾಮಿ ಇತರರಿದ್ದರು.