ಮಾಯಕೊಂಡ: ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮಾಯಕೊಂಡದ ತಂಡ ಪ್ರಥಮ ಸ್ಥಾನ ಗಳಿಸಿದೆ.
ಮಾಯಕೊಂಡದ ಯೂತ್ ಕ್ಲಬ್‌ನಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ಮಾಯಕೊಂಡದ ತಂಡವು ದಾವಣಗೆರೆಯ ಡಿವೈಇಎಸ್ ತಂಡ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ದಾವಣಗೆರೆಯ ಚಾಮುಂಡೇಶ್ವರಿ ತಂಡ ತೃತೀಯ ಸ್ಥಾನ ಪಡೆಯಿತು.
ಕ್ರೀಡಾಪಟು ಕಡ್ಡಿ ಅಭಿ ಬೆಸ್ಟ್ ರೈಡರ್, ಕಾರ್ತಿಕ್ ಬೆಸ್ಟ್ ಡಿಫೆಂಡರ್, ದಾವಣಗೆರೆಯ ಡಿವೈಇಎಸ್ ತಂಡದ ಹನುಮಂತು ಬೆಸ್ಟ್ ಆಲ್ ರೌಂಡರ್ ಆಗಿ ಹೊರಹೊಮ್ಮಿದರು.
ಗ್ರಾಪಂ ಅಧ್ಯಕ್ಷೆ ಲತಾ ಜಿ.ಆರ್. ಮಲ್ಲಿಕಾರ್ಜುನ್, ಪೊಲೀಸ್ ಇಲಾಖೆಯ ರಾಜು, ಪ್ರತಾಪ್, ಭೀಮರಾಜ್, ಕುಮಾರ್ ಪಾಪು, ಮಜ್ಜಿಗೆ ರಮೇಶ್, ಅಂಜು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರದೀಪ್, ಹನುಮಂತು, ಕೆ. ರವಿ ಕಾರ್ಯನಿರ್ವಹಿಸಿದರು. ಆಯೋಜಕರಾದ ಪವನ್, ಶರತ್, ಅಮರ್, ಅಭಿ, ನಂದೀಶ್, ಸೂರಿ ಇತರರಿದ್ದರು.