ಮಾಯಕೊಂಡ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರೀಜಿ ಭಾರತ ದೇಶ ಕಂಡ ಸರ್ವ ಶ್ರೇಷ್ಠ ಸಾಮಾಜಿಕ ಚಿಂತಕರು ಎಂದು ಉಪ ಪ್ರಾಚಾರ್ಯ ಟಿಎಸ್ ನಾಗರಾಜ್ ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರೀಜಿ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಮಹಾತ್ಮ ಗಾಂಧೀಜಿ ಹಳ್ಳಿಗಳು, ರೈತರು, ಕೂಲಿ ಕಾರ್ಮಿಕರು, ಬಡವರ ಉದ್ಧಾರದ ಕನಸು ಕಂಡವರು ಎಂದರು.
ಸ್ವಾತಂತ್ರ್ಯ ಹೋರಾಟದ ಚಳವಳಿಗಳ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಸಾಕಷ್ಟು ಸಂಖ್ಯೆಯಲ್ಲಿ ಹೋರಾಟಕ್ಕೆ ಬೆಂಬಲ ನೀಡಿದರು. ಮಾಯಕೊಂಡ ಗ್ರಾಮವೊಂದರಲ್ಲಿ 300ಕ್ಕಿಂತ ಹೆಚ್ಚು ಸ್ವಾತಂತ್ರೃ ಸೇನಾನಿಗಳು ಸ್ವಾತಂತ್ರೃಕ್ಕೋಸ್ಕರ ಹೋರಾಡಿದವರು ಎಂದು ಸ್ಮರಿಸಿದರು.
ಹಿರಿಯ ಶಿಕ್ಷಕರಾದ ಟಿ ನಾಗರಾಜ್, ಎಚ್ ಪಿ ರವಿಕುಮಾರ್ ಹಾಗೂ ಎಲ್ಲಾ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.