ಅಪರಾಧ ತಡೆಗೆ ಅನುಕೂಲ I ಸಾರ್ವಜನಿಕರ ಮನವಿಗೆ ಸ್ಪಂದನೆ
ಮಾಯಕೊಂಡ: ಕಳ್ಳತನ ಮತ್ತಿತರ ಅಪರಾಧಗಳನ್ನು ಪತ್ತೆಹಚ್ಚಲು, ತಡೆಗೆ ಮಾಯಕೊಂಡ ಗ್ರಾಮದ ಆಯಾಕಟ್ಟಿನ ಜಾಗದಲ್ಲಿ 7 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ.
ಮಾಯಕೊಂಡ ಮತ್ತಿತರ ಅನೇಕ ಗ್ರಾಮಗಳ ಜಮೀನು, ತೋಟಗಳಲ್ಲಿ ಅಡಕೆ, ಕುರಿಗಳ್ಳತನ, ಮೋಟಾರ್ ಸ್ಟಾರ್ಟ್‌ರ್‌ಗಳ ಕಳವು ಮತ್ತಿತರ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಇದು ರೈತರು, ಸಾರ್ವಜನಿಕರು ಹಾಗೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಗ್ರಾಮಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಇವುಗಳನ್ನು ತಡೆಯಬಹುದು ಎಂದು ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳ ಜನರು, ರೈತ ಮುಖಂಡರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆ, ಗ್ರಾಪಂಗೆ ಕಳೆದ ತಿಂಗಳು ಮನವಿ ಮಾಡಿದ್ದರು.
ತಕ್ಷಣ ಕಾರ್ಯ ಪ್ರವೃತ್ತರಾದ ಮಾಯಕೊಂಡ ಪೊಲೀಸರು ಠಾಣಾ ವ್ಯಾಪ್ತಿಯ 8 ಗ್ರಾಪಂಗೆ ಪತ್ರ ಬರೆದು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಾಗೂ ಅತಿ ಸೂಕ್ಷ ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ತಿಳಿಸಿದ್ದರು. ಗ್ರಾಪಂ ಏಳು ಕಡೆ ಸಿಸಿ ಕ್ಯಾಮರಾ ಅಳವಡಿಸಿದೆ.
ಮಾಯಕೊಂಡ ಗ್ರಾಮದಲ್ಲಿ ಕುರಿ, ಅಡಕೆ, ಮೋಟರ್ ಸ್ಟಾರ್ಟರ್ ಮತ್ತಿತರ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಇವುಗಳ ತಡೆಗಾಗಿ ಸಿಸಿ ಕ್ಯಾಮರಾ ಅಳಡಿಸುವಂತೆ ಗ್ರಾಮಸ್ಥರು, ಪೊಲೀಸ್ ಇಲಾಖೆ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿ, ಗ್ರಾಮದ ಒಳ- ಹೊರಗಿನ ಏಳು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎನ್ನುತ್ತಾರೆ ಮಾಯಕೊಂಡ ಪಿಡಿಒ ಎನ್. ಶ್ರೀನಿವಾಸ್.
ಮಾಯಕೊಂಡ ಗ್ರಾಮದಲ್ಲಿ ಕ್ಯಾಮರಾ ಅಳವಡಿಸುವ ಮುಂಚೆ ಗ್ರಾಮದಲ್ಲಿ 2, ಕೊಡಗನೂರು ಗ್ರಾಮದಲ್ಲಿ ಕುರಿಗಳ್ಳತನದ ದೂರು ಬಂದಿದ್ದವು. 7 ಅಡಕೆ ಕಳ್ಳತನ, 1 ಪಂಪ್‌ಸೆಟ್ ಮೋಟಾರ್ ಕಳ್ಳತನದ ದೂರು ದಾಖಲಾಗಿದ್ದವು. ಹಾಗಾಗಿ, ಮಾಯಕೊಂಡ ಠಾಣೆಯ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಂಡಿದೆ. ಕೊಡಗನೂರಿನಲ್ಲಿ ಕಾರ್ಯ ನಡೆಯುತ್ತಿದೆ.
I ಎಸ್.ಬಿ.ಅಜಯ್, ಪಿಎಸ್‌ಐ
ಕಳ್ಳತನ ಮತ್ತಿತರ ಅಪರಾಧಗಳ ತಡೆಗಾಗಿ ಸಿಸಿ ಕ್ಯಾಮರಾ ಅಳವಡಿಸುವಂತೆ ರೈತರು, ಸಾರ್ವಜನಿಕರು ಮತ್ತು ಗ್ರಾಮಸ್ಥರು ಹಾಗೂ ಪೊಲೀಸ್ ಇಲಾಖೆ ಗ್ರಾಪಂಗೆ ಮನವಿ ಬಂದಿತ್ತು. ಅಂದಾಜು 80 ಸಾವಿರ ರೂ. ವೆಚ್ಚದಲ್ಲಿ ಏಳು ಕ್ಯಾಮರಾ ಅಳವಡಿಸಲಾಗಿದೆ.
I ಎಚ್. ಲತಾ ಮಲ್ಲಿಕಾರ್ಜುನ್, ಅಧ್ಯಕ್ಷೆ, ಗ್ರಾಪಂ, ಮಾಯಕೊಂಡ.