More

    ಮಾಯಕ್ಕಾದೇವಿ ಜಾತ್ರೆಗೆ ಎಲ್ಲರೂ ಶ್ರಮಿಸೋಣ

    ಚಿಂಚಲಿ: ಇಲ್ಲಿನ ಪಟ್ಟಣ ಪಂಚಾಯಿತಿ, ಗ್ರಾಮಸ್ಥರು ಹಾಗೂ ರಾಯಬಾಗ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳ ಸಹಕಾರದ ಜತೆಗೆ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದಿಂದ ಮಾಯಕ್ಕಾದೇವಿ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದ್ದಾರೆ.
    ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಯಕ್ಕಾದೇವಿ ಜಾತ್ರೆಯ ಪೂರ್ವ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.

    ಫೆ. 9ರಿಂದ 18ರ ವರೆಗೆ ಜಾತ್ರೆ ನಡೆಯಲಿದ್ದು, ಭಕ್ತರಿಗೆ ವಿವಿಧ ಸೌಲಭ್ಯ ಕಲ್ಪಿಸಬೇಕು. ಹಾಲಹಳ್ಳಕ್ಕೆ ಫೆ.1ರಿಂದ ಕಾಲುವೆ ಮೂಲಕ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಜೆಎಲ್‌ಬಿಸಿ ಅಧಿಕಾರಿಗೆ ಸೂಚಿಸಿ ಮೇಲಧಿಕಾರಿ ಹಾಗೂ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುವಂತೆ ಹೇಳಿದರು. ಪಶು ವೈದ್ಯಾಧಿಕಾರಿ ಮಾತನಾಡಿ, ಈಗಾಗಲೇ ಜಾನುವಾರುಗಳಿಗೆ ರೋಗ ಹರಡದಂತೆ ಶೇ.75 ರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಜಾತ್ರೆ ಸಮಯದಲ್ಲಿ ತುರ್ತು ಚಿಕಿತ್ಸೆಗಾಗಿ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ನಿಯೋಜಿಸಿ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ಕುಡಚಿ ಪೊಲೀಸ್ ಅಧಿಕಾರಿ ತಿಳಿಸಿದರು. ಚಿಂಚಲಿ ಸಂಪರ್ಕಿಸುವ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದು, ಅವುಗಳನ್ನು ಮುಚ್ಚಲಾಗುವುದು ಎಂದು ಲೋಕೋಪಯೋಗಿ ಅಧಿಕಾರಿ ನಿಂಗನೂರೆ ಹೇಳಿದರು. ದೇವಸ್ಥಾನದ ಅಧ್ಯಕ್ಷ ಜಿತೇಂದ್ರ ಜಾಧವ, ತಹಸೀಲ್ದಾರ್ ಪ್ರಭು ಭಜಂತ್ರಿ, ಪಪಂ ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ಗ್ರಾಮಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ಅಂಕುಶ ಜಾಧವ, ರಮೇಶ ಹಾರೂಗೇರಿ, ಕದ್ದು ಜಾಧವ, ಮಹಾವೀರ ಹಾರೂಗೇರಿ, ಮಹಾದೇವ ಪಡೋಲಕರ, ಜಾಕೀರ್ ತರಡೆ, ನಾನಾಸಾಹೇಬ ಸೌಂದಲಗಿ, ರಾಜು ಶಿಂಧೆ, ರಾಮಚಂದ್ರ ಕಾಂಬಳೆ, ಸಂಜಯ ಮೈಶಾಳೆ, ರಮೇಶ ಜಾಧವ, ಸುಭಾಷ ಕೋರೆ, ಅಣ್ಣಾಸಾಬ ಪೂಜೇರಿ, ರಾಜು ಸೌಂದಲಗಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು, ಮುಖಂಡರು ಇದ್ದರು. ಲಕ್ಷ್ಮಣ ಕೋಳಿಗುಡ್ಡೆ ಸ್ವಾಗತಿಸಿದರು. ಎಸ್.ಎ. ತುರಮುಂದಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts