ಕುಮಟಾ: ದೇಶದಲ್ಲಿ ಪ್ರಜೆಗಳ ಪ್ರಭುತ್ವದಲ್ಲಿ ಸಮಗ್ರತೆ, ಸಮಾನತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸಂವಿಧಾನದ ಧ್ಯೇಯವಾಗಿದ್ದು, ಪ್ರತಿಯೊಬ್ಬರೂ ದೇಶ ಸೇವೆಗಾಗಿ ಜೀವನವನ್ನು ಮುಡಿಪಾಗಿಡಬೇಕು. ಸಂವಿಧಾನದ ಆಶಯಗಳಿಗೆ ಧಕ್ಕೆ ಬಾರದಂತೆ ಬದುಕಿ ಪ್ರಗತಿ ಸಾಧಿಸಬೇಕು ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ವೆಂಕಟೇಶ ಕಾಂಬ್ಳೆ ಹೇಳಿದರು.
ಪಟ್ಟಣದ ಮಣಕಿ ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ 76 ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಾರ್ವಜನಿಕ ಸಂದೇಶ ನೀಡಿದರು.
ಪುರಸಭೆ ಸದಸ್ಯರಾದ ಅನಿಲ ಹರ್ಮಲಕರ, ಗೀತಾ ಮುಕ್ರಿ, ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ತಾಪಂ ಇಒ ರಾಜೇಂದ್ರ ಭಟ್, ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ವಿವಿಧ ಇಲಾಖಾ ಅಧಿಕಾರಿಗಳಾದ ಎಂ.ಪಿ. ನಾಯ್ಕ, ರಾಘವೇಂದ್ರ ನಾಯ್ಕ, ಸಿಡಿಪಿಒ ಶೀಲಾ ಪಟೇಲ, ವಿನಾಯಕ ವೈದ್ಯ, ಭಾರತಿ ಆಚಾರಿ, ರೇಖಾ ನಾಯ್ಕ ಇತರರು ಇದ್ದರು.
ವಿವಿಧ ಸ್ಪರ್ಧಾ ವಿಜೇತರು, ಸಾಧಕ ವಿದ್ಯಾರ್ಥಿಗಳಾದ ಭೂಮಿಕಾ ಹೆಗಡೆ, ಸಿಂಚನಾ ಭಟ್, ದೇವಕಿ ಗೌಡ, ಸಚಿನ್ ಗೌಡ, ಅನಮೋಲ್ ನಾಯ್ಕ, ಹರ್ಷಿತ ಭಟ್, ಕೃತಿಕಾ ಭಟ್, ಸಂಭ್ರಮ ನಾಯ್ಕ, ಸ್ನೇಹಾ ನಾಯ್ಕ, ರಾಹುಲ ಭಟ್ನಮನ ಹರಿಕಾಂತ, ವಿಕಾಸ ಶಾನಭಾಗ, ಪಾಯಲ್ ದಾಹಿಯಾ, ರಾಜೇಶ ಮಡಿವಾಳ, ಲಿಖಿತ ನಾಯ್ಕ ಇತರರನ್ನು ಸನ್ಮಾನಿಸಲಾಯಿತು.
ತಹಸೀಲ್ದಾತಗಗ ಸತೀಶ ಗೌಡ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರ್ವಹಿಸಿದರು. ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು. ತಾಲೂಕಿನೆಲ್ಲೆಡೆ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.