ಮುಂಡರಗಿ: ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಜಗದ್ಗುರು ಅನ್ನದಾನೀಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಸಹ ಕಾರ್ಯದರ್ಶಿ ವಿ.ಸಿ. ಕೊಪ್ಪಳ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸರಸ್ವತಿ ಪೂಜೆ ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಸಮಿತಿ ಸದಸ್ಯ ಡಾ. ಸಿ.ಸಿ. ವಾಚದಮಠ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಮಣ್ಣಿನ ಮುದ್ದೆಯಂತಿರುವ ಮಕ್ಕಳಿಗೆ ಶಿಕ್ಷಕರು ಉತ್ತಮ ಶಿಕ್ಷಣ ನೀಡಿ ಅವರನ್ನು ತಿದ್ದಿ ತೀಡಿರುತ್ತಾರೆ. ಮಕ್ಕಳು ಮುಂದಿನ ಹಂತದಲ್ಲೂ ಚೆನ್ನಾಗಿ ವ್ಯಾಸಂಗ ಮಾಡಬೇಕು ಎಂದರು.
ಶಾಲೆಯ ಸಮಿತಿಯ ಸದಸ್ಯ ದೊಡ್ಡಪ್ಪ ಅಂಗಡಿ, ಯು.ಪಿ. ಪೂಜಾರ, ಆರ್.ವಿ. ಕಡಿವಾಳರ, ನಾಗರಾಜ ಮುರಡಿ ಮಾತನಾಡಿದರು. ಶಾಲಾ ಸಮಿತಿ ಸದಸ್ಯ ಎಸ್.ಕೆ. ಹಿರೇಮಠ, ಶಿಕ್ಷಕರಾದ ಸಾವಿತ್ರಿ ಗಾಳಿ, ಶಶಿಕಲಾ ಅಬ್ಬಿಗೇರಿ, ಗೀತಾ ಕೊಪ್ಪಳ ಮಮತಾ ದ್ಯಾವನಗೌಡ್ರು, ಸಾವಿತ್ರಿ ಮಲಾರ್ಜಿ ಇತರರು ಇದ್ದರು. ಮುಖ್ಯಶಿಕ್ಷಕ ವೆಂಕಟೇಶ ದಾಸಕನಕಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.