ಅಮೀನಗಡ: ಗರ್ಭಿಣಿಯರು ಹಾಗೂ ಜನಿಸುವ ಮಕ್ಕಳ ಆರೋಗ್ಯ ಕಾಪಾಡಲು ಸರ್ಕಾರ ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ವಿತರಿಸುವ ಯೋಜನೆ ಜಾರಿಗೊಳಿಸಿದ್ದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಎ.ಗಿರಿತಮ್ಮನವರ ಹೇಳಿದರು.
ಪಟ್ಟಣದ ವಾರ್ಡ್ ನಂ.6ರಲ್ಲಿನ ಶಂಕ್ರಮ್ಮದೇವಿ ಮಂಗಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಶಿಶು ಅಭಿವೃದ್ಧಿ ಯೋಜನೆ, ಅಮೀನಗಡ ಪಪಂ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೋಷಣ ಮಾಸಾಚರಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಮೇಳ ಮತ್ತು ಕಲಿಕಾ ಸಾಮಗ್ರಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಮೇಲ್ವಿಚಾರಕಿ ಶಿವಲೀಲಾ ಸರಗಣಾಚಾರಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ವೈದ್ಯಾಧಿಕಾರಿಗಳಾದ ಅರವಿಂದ ದೇಶಮುಖ, ಪ್ರೀತಿ ಮಚಗಾರ ಹಾಗೂ ಪಪಂ ಸದಸ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಮೇಶ ಸುರಳಿಕೇರಿ, ಪಪಂ ಸದಸ್ಯರಾದ ಬಾಬು ಛಬ್ಬಿ, ಾತಿಮಾ ಅತ್ತಾರ, ಬೇಬಿ ಚವ್ಹಾಣ್, ಉಮಾಶ್ರೀ ಹಣಗಿ, ರಮೇಶ ಮುರಾಳ, ತುಕಪ್ಪ ಲಮಾಣಿ, ಗಣೇಶ ಚಿತ್ರಗಾರ, ರಾಘವೇಂದ್ರ ಮುಳ್ಳೂರ, ಸಂಜಯ ಐಹೊಳ್ಳಿ, ಸಂತೋಷ ಕಂಗಳ, ವಿದ್ಯಾ ರಾಮವಾಡಗಿ, ಶ್ರೀದೇವಿ ನಿಡಗುಂದಿ, ಮಹಿಳಾ ಸಂಘದ ಸದಸ್ಯೆಯರಾದ ಮಂಜುಳಾ ಕಳ್ಳಿಮಠ, ವಿಜಯಲಕ್ಷ್ಮೀ ಐಹೊಳ್ಳಿ, ಶೋಭಾ ಯರಗೇರಿ, ವಿಜಯಲಕ್ಷ್ಮೀ ತತ್ರಾಣಿ, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಇದ್ದರು.