27.2 C
Bengaluru
Monday, January 20, 2020

ನವೆಂಬರ್ ತಿಂಗಳಿನೊಂದಿಗೆ ಕನ್ನಡ ಪ್ರೇಮವೂ ಕೊನೆಯಾಗದಿರಲಿ!

Latest News

ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಸಂಸ್ಥೆ ಪಾವತಿಸಬೇಕಿದ್ದ ಒಂದೇ ಒಂದು ಪೈಸಾ ಬಂದಿಲ್ಲ; ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

ನವದೆಹಲಿ: ಬ್ಯಾಂಕುಗಳಿಗೆ ನೀಡಬೇಕಿದ್ದ ಹಣವನ್ನು ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಸಂಸ್ಥೆ "ಒಂದೇ ಒಂದು ಪೈಸಾ ಬಂದಿಲ್ಲ" ಪಾವತಿಸಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರೋಹಿಂಟನ್...

ಹಾಸನ- ಪಿರಿಯಾಪಟ್ಟಣ ರಸ್ತೆ ಮಾರ್ಗದಲ್ಲಿ ಟೋಲ್ ಸಂಗ್ರಹ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

ಅರಕಲಗೂಡು: ತಾಲೂಕಿನ ನಿಲುವಾಗಿಲು ಬಳಿ ಹಾಸನ- ಪಿರಿಯಾಪಟ್ಟಣ ರಸ್ತೆ ಮಾರ್ಗದಲ್ಲಿ ಟೋಲ್ ಸಂಗ್ರಹ ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕ ರು ರಸ್ತೆ ತಡೆದು ಸೋಮವಾರ...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ: ರಾಜಧಾನಿಯಲ್ಲೂ ಬಿಗಿ ಭದ್ರತೆ

ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಕಳೆದ...

26ರಂದು ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಪ್ರಧಾನಿಗೆ ಅಭಿನಂದನೆ ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ‌್ಯದರ್ಶಿ ರವಿಕುಮಾರ್ ಹೇಳಿಕೆ

ಚಿತ್ರದುರ್ಗ:ಸಿಎಎ ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ರಾಜ್ಯದ 58 ಸಾವಿರ ಬೂತ್‌ಗಳಲ್ಲಿ ಜ.26 ರಂದು ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಕಾರ‌್ಯಕರ್ತರಿಂದ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ ಮಂಡ್ಯದಲ್ಲಿ ಮುಂದುವರಿದ ದರ್ಶನ್- ಯಶ್ ಹವಾ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ...

ಭಾಷೆಯನ್ನಾಡುವ ಜನರು ಬೌದ್ಧಿಕವಾದ ಕಸರತ್ತುಗಳಲ್ಲಿ ತೊಡಗದಿದ್ದರೆ ಆ ಭಾಷೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಕನ್ನಡ ಹೊಸತನವನ್ನು ಆವಾಹಿಸಿಕೊಳ್ಳುತ್ತಲೇ ಹಳೆಯ ಸಾಮರ್ಥ್ಯವನ್ನು ಉಳಿಸಿಕೊಂಡ ಭಾಷೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಭರಾಟೆ ನಡುವೆ ಹೊಸ ನೀರಿಗೆ ತೆರೆದುಕೊಂಡ ನಾವು ಹಳೆಯ ವೈಭವ ಮರೆಯುವಂತಿಲ್ಲ.

ಕನ್ನಡದ ತಿಂಗಳು ಕಳೆದೇಹೋಯ್ತು. ನವೆಂಬರ್ ಬಂದೊಡನೆ ಕನ್ನಡ ನಮಗೆಲ್ಲರಿಗೂ ನೆನಪಾಗಿಬಿಡುತ್ತದೆ. ಆಮೇಲೆ ಸುದೀರ್ಘ ದಿವ್ಯಮೌನ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಉತ್ಸಾಹ ಕನ್ನಡದ ಕುರಿತಂತೆ ನಾಡಿನಾದ್ಯಂತ ಕಂಡುಬಂದಿದೆ.

ಸಾಫ್ಟ್​ವೇರ್ ಕಂಪನಿಗಳಲ್ಲಿ, ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೊನೆಗೆ ವಿಶ್ವವಿದ್ಯಾಲಯಗಳ ಆವರಣಗಳಲ್ಲೂ ಕನ್ನಡದ ಹಬ್ಬ ವಿಶೇಷವಾಗಿ ಆಚರಿಸಲ್ಪಟ್ಟಿದೆ. ಅಂದರೆ ಕನ್ನಡ ಎಂಬುದು ಮೇಲ್ವಲಯಗಳಲ್ಲೂ ಈಗ ಒಪ್ಪಿಕೊಂಡ ಭಾಷೆ. ಬಹುಶಃ ಹಾಗೆ ತುಂಬ ಕನ್ನಡವನ್ನು ಅಪ್ಪಿಕೊಂಡು ಬದುಕುವ ಯತ್ನ ನಡೆಸಲಿಲ್ಲವೆಂದರೆ ನಮ್ಮ ಕಣ್ಣೆದುರಿಗೇ ಅದು ಲುಪ್ತವಾಗಿಹೋದರೂ ಅಚ್ಚರಿ ಪಡಬೇಕಿಲ್ಲ.

ಭಾಷಾಪ್ರೇಮ ಮತ್ತು ಭಾಷಾಂಧತೆ ಎರಡೂ ಭಿನ್ನವಾದವೇ. ತನ್ನ ಭಾಷೆಯನ್ನು ತಾನು ಪ್ರೀತಿಸಿ, ಅನ್ಯ ಭಾಷೆಯನ್ನು ಗೌರವಿಸುವ ವ್ಯಕ್ತಿತ್ವ ಬಲು ಅಗತ್ಯವಾದ್ದು. ಚಿದಾನಂದಮೂರ್ತಿಗಳು ಇದನ್ನೇ ಸ್ವಾಭಿಮಾನದ ಕನ್ನಡ ಎಂದು ಕರೆಯುತ್ತಾರೆ. ಅವರ ಮಾತಿನಂತೆ ಕನ್ನಡದ ಸಾಮ್ರಾಜ್ಯ ಹುಟ್ಟಿದ್ದೇ ಸ್ವಾಭಿಮಾನದ ನೆಲಕಟ್ಟಿನ ಮೇಲೆ. ಪಲ್ಲವರ ಕಂಚಿಯಲ್ಲಿ ಆದ ಅವಮಾನಕ್ಕೆ ಪ್ರತೀಕಾರ ಬಯಸಿ ಕನ್ನಡದ ಸಾಮ್ರಾಜ್ಯವನ್ನೇ ಹುಟ್ಟುಹಾಕಿದ ಮಯೂರವರ್ಮ, ಅವರ ಈ ಮಾತಿನ ಆಧಾರ. ಹಾಗಂತ ಇದು ಅಲ್ಲಿಗೇ ನಿಲ್ಲಲಿಲ್ಲ.

ಪೋರ್ಚುಗೀಸರನ್ನು ಸಮುದ್ರತೀರದಲ್ಲಿ ಅಡ್ಡಗಟ್ಟಿದ ರಾಣಿ ಅಬ್ಬಕ್ಕ ನಾವೆಲ್ಲ ಹೆಮ್ಮೆಪಡುವ ಹೆಣ್ಣುಮಗಳು. ಡಾಲ್​ಹೌಸಿಯ ದತ್ತುಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನನ್ನು ಧಿಕ್ಕರಿಸಿ, ಥ್ಯಾಕರೆಯೊಂದಿಗೆ ಕಾದಾಡುತ್ತ ಅವನನ್ನು ಯಮಪುರಿಗಟ್ಟಿದ ಕಿತ್ತೂರು ಚೆನ್ನಮ್ಮ ಕನ್ನಡಿಗರ ಸ್ವಾಭಿಮಾನದ ಪ್ರತೀಕವೇ. ಮತ್ತು ಈ ಘಟನೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಬ್ರಿಟಿಷರ ವಿರುದ್ಧ ಸಿಡಿದೇಳುವುದಕ್ಕಿಂತಲೂ ಸುಮಾರು ಎರಡೂವರೆ ದಶಕಕ್ಕೂ ಮುನ್ನವೇ ನಡೆದದ್ದು. ಆಕೆಯ ಬಂಟ ಸಂಗೊಳ್ಳಿ ರಾಯಣ್ಣನದು ಅದೇ ಸ್ವಾಭಿಮಾನ. ಹಲಗಲಿಯ ಬೇಡರಾಗಲೀ, ನರಗುಂದದ ಬಾಬಾಸಾಹೇಬರಾಗಲೀ, ತುಘಲಕ್​ರನ್ನು ಎದುರಿಸಿ ನಿಂತ ಗಂಡುಗಲಿ ಕುಮಾರರಾಮನೇ ಆಗಲಿ ಕನ್ನಡಿಗರು ಹೆಮ್ಮೆ ಪಡಬಹುದಾದ ವ್ಯಕ್ತಿತ್ವದವರೇ.

ವಿಜಯನಗರ ಸಾಮ್ರಾಜ್ಯ ಕೂಡ ಆ ಸ್ವಾಭಿಮಾನದ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದ್ದೇ! ವಿದ್ಯಾರಣ್ಯರಂತಹ ಸಾಧುಗಳ ತಪಸ್ಸು, ಹಕ್ಕಬುಕ್ಕರಂತಹ ವೀರರ ಕ್ಷಾತ್ರ ಬೆರೆತು ರೂಪುಗೊಂಡಿದ್ದು ಸ್ವಾಭಿಮಾನದ ಕನ್ನಡ ಸಾಮ್ರಾಜ್ಯ. ಇಡೀ ದೇಶ ಇಂದಿಗೂ ಹೆಮ್ಮೆ ಪಡಬಹುದಾದ ಮತ್ತು ಸ್ವತಃ ಶಿವಾಜಿಗೂ ಪ್ರೇರಣೆ ನೀಡಿದ ವೈಭವದ ಸಾಮ್ರಾಜ್ಯ ಅದು.

ಈ ಬಗೆಯ ಅನೇಕ ಘಟನೆಗಳನ್ನು ಉಲ್ಲೇಖಿಸಬಹುದಾದರೂ ಆನಂತರ ಕರ್ನಾಟಕವನ್ನು ಕಟ್ಟಿದ ಒಂದಷ್ಟು ಮಹನೀಯರ ಬದುಕನ್ನು ಈ ಹೊತ್ತಿನಲ್ಲಾದರೂ ಅರಿಯಲೇಬೇಕಾದ್ದು ಕರ್ತವ್ಯ. ಕರ್ನಾಟಕದ ಕುಲಪುರೋಹಿತರೆನಿಸಿಕೊಂಡ ಆಲೂರು ವೆಂಕಟರಾಯರು ಇತಿಹಾಸದ ಪುಟಗಳನ್ನು ಕೆದಕುತ್ತ ತಾಮ್ರಪತ್ರಗಳನ್ನು, ಶಾಸನಗಳನ್ನು ಹುಡುಕಿ, ಅಧ್ಯಯನ ಮಾಡಿ, ಹಳ್ಳಿಗಳಲ್ಲಿ ದೊರೆತ ಹಳೆಯ ನಾಣ್ಯಗಳ ಆಧಾರದ ಮೇಲೆ ಕರ್ನಾಟಕದ ಗಡಿಯನ್ನು ಗುರುತಿಸುವ ಪ್ರಯತ್ನ ಮಾಡದೇ ಹೋಗಿದ್ದರೆ ಅಥವಾ ಆ ನಿಟ್ಟಿನಲ್ಲಿ ಕನ್ನಡಿಗರಿಗೆ ಪ್ರೇರಣೆ ಕೊಡದೇ ಹೋಗಿದ್ದರೆ ಬಹುಶಃ ಈ ರೂಪ ಕಾಣಲಾಗುತ್ತಿರಲಿಲ್ಲವೇನೋ! ಹಗಲೂ-ರಾತ್ರಿ ಕನ್ನಡದ ಏಳಿಗೆಯ ಚಿಂತನೆಯನ್ನೇ ಮಾಡಿದ ಅವರನ್ನು ಬೇಂದ್ರೆಯವರು ‘ಕರ್ನಾಟಕದ ಪ್ರಾಣೋಪಾಸಕ’ ಎಂದು ಕರೆದದ್ದು ಸೂಕ್ತವೇ ಸರಿ.

ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಸಿಕ್ಕ ಸಾವರ್ಕರ್, ತಿಲಕರ ಸಹವಾಸ ಅವರನ್ನು ರಾಷ್ಟ್ರೀಯತೆಯ ಮಹಾಪ್ರವಾಹದೆಡೆಗೆ ಎಳೆತಂದದ್ದು ನಿಜವಾದರೂ ಅದಕ್ಕೆ ಕರ್ನಾಟಕ ತೆರೆಯಾಗಿ ಸೇರಿಕೊಳ್ಳಬೇಕೆಂದು ಅವರಿಗೆ ಪ್ರೇರಣೆ ದೊರೆತಿದ್ದು ಹಂಪಿಯ ಅವಶೇಷಗಳನ್ನು ಕಂಡಮೇಲೆಯೇ.

ಕರ್ನಾಟಕ ಏಕೀಕರಣಗೊಂಡ ಸಂತಸದ ಸುದ್ದಿ ತಿಳಿದೊಡನೆ ಹಂಪಿಗೆ ಹೋಗಿ ವಿರೂಪಾಕ್ಷನಿಗೆ ತಾವೇ ಪುರೋಹಿತರಾಗಿ ನಿಂತು ಪೂಜೆಗೈದಿದ್ದರಂತೆ ಆಲೂರರು! ಅವರೇ ಆರಂಭಿಸಿದ ‘ಜಯ ಕರ್ನಾಟಕ’ ಪತ್ರಿಕೆ ಅಂದಿನ ದಿನಗಳಲ್ಲಿ ಕನ್ನಡಿಗರ ಮನೆ-ಮನೆಯನ್ನೂ ಅಲಂಕರಿಸಿತ್ತು. ಅವರ ಪ್ರೇರಣೆಯಿಂದಲೇ ಸಾಹಿತ್ಯ ಪರಿಷತ್ತೂ ಆರಂಭಗೊಂಡದ್ದು. ಅನೇಕ ಕವಿ-ಸಾಹಿತಿಗಳಿಗೆ ವಸ್ತುವನ್ನು ಕೊಟ್ಟು ಬರೆಯಲು ಪ್ರೇರೇಪಣೆ ಕೊಡುತ್ತಿದ್ದವರೂ ಅವರೇ ಅಂತೆ.

ಅವರಂತೆ ಮುಂದಿನ ದಿನಗಳಲ್ಲಿ ಹೊಸ ಬರಹಗಾರರಿಗೆ ಬೆನ್ನು ತಟ್ಟಿ ಪ್ರೇರೇಪಿಸುತ್ತಿದ್ದ ಅ.ನ ಕೃಷ್ಣರಾಯರು, ಮಾಸ್ತಿ, ಕನ್ನಡದ ಪುಸ್ತಕಗಳನ್ನು ಮಾರಿ ಕನ್ನಡದ ಸೌಧ ಕಟ್ಟಲು ಜೀವತೇಯ್ದ ಗಳಗನಾಥರು, ಜಿ.ಪಿ ರಾಜರತ್ನಂ ಇವರೆಲ್ಲ ಸ್ಮರಿಸಿಕೊಳ್ಳಬೇಕಾದವರೇ. ಇನ್ನು ನವೋದಯದ ಕಾಲದಲ್ಲಿ ಕನ್ನಡಕ್ಕೊಂದು ಹೊಸ ಆವೇಗವನ್ನು ತಂದುಕೊಟ್ಟ ಬಿಎಮ್್ರ ಅವರಿಂದ ಹಿಡಿದು ಕುವೆಂಪುವರೆಗಿನ ಪರಂಪರೆಯೊಂದು ಅತ್ಯದ್ಭುತವಾದ್ದೇ!

ಕರ್ನಾಟಕ ಸಾಹಿತಿಗಳದ್ದಷ್ಟೇ ಲೋಕವಲ್ಲ. ಇಲ್ಲಿ ವಿಜ್ಞಾನಿಗಳಿದ್ದಾರೆ, ನಾಡು ಬೆಳಗಿದ ವಿಶ್ವೇಶ್ವರಯ್ಯನವರಂತಹ ಇಂಜಿನಿಯರುಗಳಿದ್ದಾರೆ, ಭಾರತಕ್ಕೆ ಅಗತ್ಯಬಿದ್ದಾಗ ಪ್ರತಿಸ್ಪಂದಿಸಿದ ಫೀಲ್ಡ್ ಮಾರ್ಶಲ್ ಕಾರ್ಯಪ್ಪ, ಮಾಣಿಕ್​ಷಾರಂಥವರೂ ಇದ್ದಾರೆ. ಇವರೆಲ್ಲರುಗಳ ಒಟ್ಟಾರೆ ಸ್ವರೂಪವೇ ಕರ್ನಾಟಕ.

ಹಾಗಂತ ತೀರಾ ಇತ್ತೀಚಿನದ್ದನ್ನು ಮಾತ್ರ ಉಲ್ಲೇಖಿಸಿದ್ದೇವೆಂದುಕೊಳ್ಳಬೇಡಿ. ಇಡೀ ದೇಶದಲ್ಲೇ ವಿಭಿನ್ನವಾದ ಪರಂಪರೆಯನ್ನು ಕಟ್ಟಿಕೊಟ್ಟ ಶರಣರು, ದಾಸಪಂಥದ ಮೂಲಕ ಹೊಸ ಚಿಂತನೆಯನ್ನು ಸಮಾಜಕ್ಕೆ ನೀಡಿದ ದಾಸಶ್ರೇಷ್ಠರು ತಮ್ಮ ಬದುಕಿನಿಂದಲೂ ಜೀವನದಿಂದಲೂ ಜಗತ್ತಿಗೇ ಮಾದರಿ. ಇವರೆಲ್ಲರೂ ನಿಜವಾದ ಕನ್ನಡ ರತ್ನಗಳು.

ಇತ್ತೀಚೆಗೆ ಇವರೆಲ್ಲರನ್ನೂ ಮತ್ತೊಮ್ಮೆ ಪರಿಚಯಿಸುವ ವಿಭಿನ್ನವಾದ ಕಾರ್ಯಗಳನ್ನು ಯುವಾಬ್ರಿಗೇಡ್​ನ ಕಾರ್ಯಕರ್ತರು ಆಯೋಜಿಸಿದ್ದರು. ಫೇಸ್​ಬುಕ್ಕಿನ ಮೂಲಕ ದಿನಕ್ಕೊಬ್ಬರಂತೆ ಮೂವತ್ತು ಕನ್ನಡರತ್ನಗಳನ್ನು ಪರಿಚಯಿಸುವ ಪ್ರಯತ್ನ ತಾತ್ಕಾಲಿಕವಾಗಿಯಾದರೂ ಯಶಸ್ಸು ಕಂಡಿತು. ಏಕೆಂದರೆ ದಿನಬೆಳಗಾದರೆ ಫೇಸ್​ಬುಕ್ಕಿನಲ್ಲಿ, ವಾಟ್ಸಪ್​ನಲ್ಲಿ ವೇಳೆ ಕಳೆಯುವ ತರುಣ ಪೀಳಿಗೆಯನ್ನು ಮುಟ್ಟಲು ಹೊಸ ಮಾರ್ಗವನ್ನು ಬಳಸದೇ ವಿಧಿಯಿಲ್ಲ! ಅವರಿಗೆ ಭಾಷಣ ಕೇಳುವ ಪುರಸೊತ್ತಿಲ್ಲ, ಕನ್ನಡದ ಕವಿಗಳ ಕವನ ಓದುವ ಬಯಕೆಯಿಲ್ಲ.

ಹೀಗಾಗಿ ಅವರದ್ದೇ ಮಾರ್ಗವನ್ನು ಹಿಡಿಯುವುದು ಒಳಿತೆಂಬುದರಿಂದ ಈ ಪ್ರಯತ್ನ ಅಷ್ಟೇ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ವಸಂತ್​ಕುಮಾರ್ ಇದಕ್ಕೆ ಪೂರಕವಾಗಿ ಕನ್ನಡ ಕವಿಗಳ ಕವನವನ್ನೋದುವ ಸವಾಲನ್ನು ನೀಡುವುದರೊಂದಿಗೆ ಈ ಬಾರಿಯ ರಾಜ್ಯೋತ್ಸವ ಆರಂಭದಲ್ಲೇ ವಿಭಿನ್ನ ಸ್ವರೂಪ ಪಡೆದುಕೊಂಡಿತ್ತು. ಅನೇಕ ಚಲನಚಿತ್ರ ನಟರೂ ಇದಕ್ಕೆ ಪ್ರತಿಸ್ಪಂದಿಸಿ ಕನ್ನಡದ ಕವಿಗಳ ಸಾಲುಗಳನ್ನು ಮೆಲುಕು ಹಾಕುವುದರ ಮೂಲಕ ರಾಜ್ಯೋತ್ಸವಕ್ಕೆ ರಂಗೇರಿಸಿಬಿಟ್ಟಿದ್ದರು.

ಈ ನಡುವೆ ಮತ್ತೊಂದು ಪ್ರಯತ್ನ ಕನ್ನಡ ಕಲಿಸುವ ದಿಕ್ಕಿನಲ್ಲಿ ಆರಂಭವಾಯ್ತು. ಅನೇಕ ಬಾರಿ ನಮ್ಮೆಲ್ಲರ ಆರೋಪ ಇರುವುದೇ ಬೆಂಗಳೂರಿನಲ್ಲಿ ನೆಲೆಸಿರುವ ಹೊರರಾಜ್ಯದ ಮಂದಿ ಕನ್ನಡ ಮಾತನಾಡುವುದಿಲ್ಲ ಅನ್ನೋದು. ಅವರಿಗೆ ಕನ್ನಡ ಕಲಿಸಬೇಕು ಎಂಬ ದೃಷ್ಟಿಯಿಂದ ಆರಂಭಗೊಂಡ ಈ ಪ್ರಯತ್ನಕ್ಕೆ 2000ಕ್ಕೂ ಹೆಚ್ಚು ಜನ ಆಸಕ್ತಿ ತೋರಿದರು. ಎಂಟ್ಹತ್ತು ದಿನಗಳ ಕಾಲ ದಿನಕ್ಕರ್ಧಗಂಟೆಯಂತೆ ಫೋನಿನಲ್ಲಿ ಸಂಭಾಷಣೆ ಮೂಲಕವೇ ಕನ್ನಡ ಹೇಳಿಕೊಡುವ ಪ್ರಯತ್ನ ವ್ಯಾಪಕ ಪ್ರಶಂಸೆಗಳಿಸಿತು.

ಕನ್ನಡ ಸುಗಂಧ ಹಬ್ಬಿಸುವ ಈ ಸಾಹಸದಲ್ಲಿ ಅನೇಕರು ಸ್ವಯಂಪ್ರೇರಣೆಯಿಂದ ಭಾಗವಹಿಸಿದರು. ಕರ್ನಾಟಕದ ಹೊರಗಿರುವ ಕನ್ನಡಿಗರಿಗಂತೂ ಕನ್ನಡದ ಸೇವೆಗೈಯ್ಯುವ ಮಹಾಭಾಗ್ಯವಿದು ಎಂದೆನಿಸಿತು. ದೆಹಲಿ, ಪುಣೆಗಳಿಂದಲೂ ಅಲ್ಲದೆ ದೂರದ ಅಮೆರಿಕದಲ್ಲಿರುವ ಕನ್ನಡಿಗರೂ ಈ ಕಾರ್ಯದಲ್ಲಿ ಸ್ವಯಂಸ್ಪೂರ್ತಿಯಿಂದ ಭಾಗವಹಿಸಿ ಬೆಂಗಳೂರಿನಲ್ಲಿರುವ ಹೊರನಾಡಿಗರನ್ನು ಕನ್ನಡಿಗರಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ!

ಭಾಷೆ ಆಡುವ ಮಾತಾಗಿ ಉಳಿದುಬಿಡುತ್ತದೆ. ಆ ಕೆಲಸವನ್ನು ಸಿನಿಮಾ ಸುಲಭವಾಗಿ ಮಾಡುತ್ತದೆ. ನಾಟಕ, ಸಂಗೀತ, ನೃತ್ಯದಂಥ ಕಲಾ ಪ್ರಕಾರಗಳು ಅನೇಕವೇಳೆ ಇದಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತವೆ. ಆದರೆ ಸಾಹಿತ್ಯವನ್ನು, ಅದನ್ನು ರಚನೆ ಮಾಡಿದ ಸಾಹಿತಿಯನ್ನು ಅರಿಯದ ಹೊರತು ಭಾಷೆ ಹೊಸ ಎತ್ತರಕ್ಕೆ ಏರುವುದು ಕಷ್ಟ. ಈಚಿನ ದಿನಗಳಲ್ಲಿ ಕಠಿಣ ಛಂದಸ್ಸುಗಳನ್ನು ಬಿಡಿ, ಭಾಮಿನಿ ಷಟ್ಪದಿ ಎಂದರೇನೇ ಮೇಲೆ ಕೆಳಗಾಗುವ ಪರಿಸ್ಥಿತಿ! ಭಾಷೆಯನ್ನಾಡುವ ಜನರು ಬೌದ್ಧಿಕವಾದ ಕಸರತ್ತುಗಳಲ್ಲಿ ತೊಡಗದಿದ್ದರೆ ಆ ಭಾಷೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತ ಹೋಗುತ್ತದೆ.

ಕನ್ನಡ ಹೊಸತನವನ್ನು ಆವಾಹಿಸಿಕೊಳ್ಳುತ್ತಲೇ ಹಳೆಯ ಸಾಮರ್ಥ್ಯವನ್ನು ಉಳಿಸಿಕೊಂಡ ಭಾಷೆ. ಹೀಗಾಗಿ ಆಧುನಿಕವಾದ ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆ ಹೊಸ ನೀರಿಗೆ ತೆರೆದುಕೊಂಡ ನಾವು ಹಳೆಯ ವೈಭವವನ್ನು ಮರೆಯುವಂತಿಲ್ಲ. ಹಾಗೆಂದೇ ಇಂದಿನ ಮಕ್ಕಳಿಗೆ ಕನ್ನಡದ ಸಾಹಿತಿಗಳನ್ನು ಮರುಪರಿಚಯಿಸುವ ಕಾರ್ಯ ಕಸರತ್ತು ಎಂಬ ಆಟದೊಂದಿಗೆ ಆರಂಭವಾಗಿದೆ. ಮೊದಲೆಲ್ಲ ಮಕ್ಕಳು ಕುಸ್ತಿಪಟುಗಳ ಸಾಧನೆಯುಳ್ಳ ಇಸ್ಪೀಟಿನಂತಹ ಕಾರ್ಡಗಳೊಂದಿಗೆ ಆಡುತ್ತಿದ್ದುದನ್ನು ನೀವೆಲ್ಲ ನೋಡಿರಬೇಕು.

ಈಗ ಅದೇ ಜಾಗದಲ್ಲಿ ಸಾಹಿತಿಗಳ ಕಾರ್ಡಗಳನ್ನು ಪರಿಚಯಿಸುವಂತಹ ಪ್ರಯತ್ನ ಮಾಡಲಾಗಿದೆ. ಮಕ್ಕಳು ಆಟವಾಡಲು ಬೇಕಾಗಿರುವ ಸಮಾನ ಭೂಮಿಕೆಯನ್ನು ನಿರ್ಮಾಣ ಮಾಡಿಕೊಟ್ಟು ಈ ಕಾರ್ಡಗಳನ್ನು ರೂಪಿಸಲಾಗಿದೆ. ಪ್ರೌಢಶಾಲೆಯಲ್ಲಿ ಬಂದಿರುವ ಸಾಹಿತಿಗಳನ್ನು ಸಾಧ್ಯವಾದಷ್ಟು ಈ ಕಾರ್ಡಗಳಲ್ಲಿ ಬಳಸುವ ಪ್ರಯತ್ನ ಮಾಡಿರುವುದರಿಂದ ಆ ಮಕ್ಕಳು ಈ ಆಟದಲ್ಲಿ ಪಂಟರಾದರೆಂದರೆ 50ಕ್ಕೂ ಹೆಚ್ಚು ಸಾಹಿತಿಗಳ ಕುರಿತ ಸಮಗ್ರ ವಿಚಾರ ಅರಿತಂತೆಯೇ!

ಇವಿಷ್ಟನ್ನೂ ಏಕೆ ಹಂಚಿಕೊಳ್ಳಬೇಕಾಯ್ತೆಂದರೆ ಕರ್ನಾಟಕವನ್ನು ಮತ್ತು ಕನ್ನಡವನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ಕನ್ನಡಿಗರೀಗ ನಿರ್ವಹಿಸಲೇಬೇಕಿದೆ. ಅಂದಿನಿಂದ ಇಂದಿನವರೆಗೂ ಕರ್ನಾಟಕ ಬಲು ಸಭ್ಯ. ಬಹುಶಃ ಅದು ಮೈಸೂರಿನ ಮಹಾರಾಜರ ಕೊಡುಗೆ ಇರಬೇಕು. ದೇಶ ಮುಂದೊಮ್ಮೆ ಮಾಡುವ ಕೆಲಸವನ್ನು ಮುಂಚಿತವಾಗಿಯೇ ಆಲೋಚಿಸುವ ಸಾಮರ್ಥ್ಯವಿರುವುದು ಬಹುಶಃ ಕರ್ನಾಟಕಕ್ಕೆ ಮಾತ್ರ.

ಜಾತಿ-ಮತ-ಪಂಥಗಳ ಮುಂದೊದಗುವ ತಾಕಲಾಟಕ್ಕೆ 12ನೇ ಶತಮಾನದಲ್ಲೇ ಬಸವಾದಿ ಶರಣರು ಉತ್ತರಿಸಿದ್ದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಚೆನ್ನಮ್ಮ ಬ್ರಿಟಿಷರ ವಿರುದ್ಧ ಕತ್ತಿ ಹಿಡಿದು ನಿಂತಿದ್ದಳು. ಅಧ್ಯಾತ್ಮ ಜಗತ್ತಿನಲ್ಲಿ ಎಲ್ಲರಿಗೂ ಬೇಕಾದ ಮಾರ್ಗವನ್ನು ತೋರಲು ಮೂರೂ ಆಚಾರ್ಯರು ಕರ್ನಾಟಕವನ್ನೇ ಆರಿಸಿಕೊಂಡಿದ್ದರು.

ಪ್ರಜಾಪ್ರತಿನಿಧಿಸಭಾವನ್ನು ಮೈಸೂರು ಮಹಾರಾಜರಷ್ಟು ಚೊಕ್ಕವಾಗಿ ನಡೆಸಿದವರು ಮತ್ತಾ್ಯರೂ ಇಲ್ಲ. ಸ್ವಾತಂತ್ರ್ಯಕ್ಕೂ ಮುನ್ನವೇ ಆಧುನಿಕ ಕೈಗಾರಿಕೆಗಳ ಕುರಿತಂತೆ ಕರ್ನಾಟಕ ಯೋಚನೆ ಮಾಡಿಯಾಗಿತ್ತು. ಎಲ್ಲಕ್ಕೂ ಮಿಗಿಲಾಗಿ ಇಡಿಯ ದೇಶ ವಿಜ್ಞಾನ ಯಂತ್ರಗಳನ್ನು ಆಮದು ಮಾಡಿಕೊಳ್ಳುವಾಗ ವೈಜ್ಞಾನಿಕ ಸಂಶೋಧನಾ ಕೇಂದ್ರವೊಂದಕ್ಕೆ ಜೆಮ್ೆಡ್​ಜೀ ಟಾಟಾರಿಗೆ ಭೂಮಿಕೊಟ್ಟದ್ದೇ ಕರ್ನಾಟಕ.

ಅದೇ ಇಂದು ‘ಇಂಡಿಯನ್ ಇನ್​ಸ್ಟಿ್ಟ್ಯೂಟ್ ಆಫ್ ಸೈನ್ಸ್’ ಎಂದು ಜಾಗತಿಕ ಮಟ್ಟದಲ್ಲಿ ಮೆರೆಯುತ್ತಿರೋದು. ಬಂಗಾಳದ ಜನರ ಓತಪೋ›ತ ರಾಜ್ಯಭಾವನೆಯಿಂದ ನೊಂದುಬಂದ ಸರ್ ಸಿವಿ ರಾಮನ್​ರಿಗೂ ಜಾಗಕೊಟ್ಟು ವೈಜ್ಞಾನಿಕ ಸಂಸ್ಥೆ ರೂಪಿಸಲು ಅವಕಾಶ ಮಾಡಿಕೊಟ್ಟಿದ್ದೂ ಕರ್ನಾಟಕವೇ. ಇದು ಮೈಸೂರಿನ ಮಹಾರಾಜರ ದೂರದೃಷ್ಟಿ!

ನಿಸ್ಸಂಶಯವಾಗಿ ನಾವು ಭಾರತದ ಅವಿಭಾಜ್ಯ ಅಂಗ. ಭಾರತದ ಏಳ್ಗೆಯಲ್ಲೇ ಕರ್ನಾಟಕದ ಏಳ್ಗೆಯೂ ಇದೆ. ಅದರೊಂದಿಗೆ ಭಾರತದ ಏಳ್ಗೆಗೆ ನಾವು ಕೊಡಬೇಕಾದ ಕೊಡುಗೆಯೂ ಸಾಕಷ್ಟಿದೆ. ಪ್ರತೀ ಬಾರಿ ರಾಜ್ಯೋತ್ಸವಗಳು ನವೆಂಬರ್ ತಿಂಗಳ ಉತ್ಸವಗಳಷ್ಟೇ ಆಗದೇ ಈ ನಿಟ್ಟಿನಲ್ಲಿ ನಮಗೊಂದಷ್ಟು ಪ್ರೇರಣೆ ಕೊಡುತ್ತದೆ ಎನ್ನುವುದಾದರೆ ನಿಜಕ್ಕೂ ಪ್ರಯತ್ನ ಸಾರ್ಥಕ. ಕನ್ನಡದ ಈ ಹಬ್ಬ ವರ್ಷಪೂರ್ತಿ ಸಾಧ್ಯವಾದರೆ ಬದುಕಿನ ಕೊನೆಯುಸಿರಿನವರೆಗೂ ನಮ್ಮನ್ನು ವ್ಯಾಪಿಸಿಕೊಳ್ಳುತ್ತದೆ!

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...