ಕೋ.ಶಿವಾಪುರ: ಗುರುಪಟ್ಟಾಧಿಕಾರ ಸ್ವೀಕರಿಸಿದ ಜಡೆತಲೆ ಮರುಳಸಿದಟಛಿ ಶಿವಾಚಾರ್ಯ ಸ್ವಾಮೀಜಿ ಈ ಭಾಗದ ಭಕ್ತರ ಧ್ವನಿಯಾಗಿ ಸ್ಪಂದಿಸುವಂತಾಗಲಿ ಹಾಗೂ ಈ ಮಠದಿಂದ ಸತ್ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರು ಆಶಿಸಿದರು.

ಗ್ರಾಮದ ಹಿರೇಮಠದಲ್ಲಿ 20 ದಿನಗಳ ವರೆಗೆ ನಿರಂತರ ಪ್ರವಚನ ಸಮಾರೋಪ ಹಾಗೂ| ಗುರು ಪಟ್ಟಾಧಿಕಾರ ಮಹೋತ್ಸವದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದರು.
ಧರ್ಮಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಗ್ರಾಮದಲ್ಲಿ ಪೂಜ್ಯರು ಪಟ್ಟಾಧಿಕಾರ ಸ್ವೀಕರಿಸಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಪೂಜ್ಯರಿಂದ ಜನರಿಗೆ ಒಳ್ಳೆಯ ಮಾರ್ಗದರ್ಶನ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುರಾಜೇಂದ್ರ ಶಿವಾಚಾರ್ಯರಿಂದ ಹಿರೇಮಠದ ಚರಂತಯ್ಯ ದೇವರಿಗೆ ಪಟ್ಟಬಂಧನ ಮುದ್ರಾ ಉಂಗುರ, ಮುದ್ರಾಬಟ್ಟಲ, ದಂಡಕಮಂಡಲ, ಮಂತ್ರೋಪದೇಶ ಪೂರ್ವಕವಾಗಿ ಜಡೆತಲೆ ಮರುಳಸಿದಟಛಿ ಶಿವಾಚಾರ್ಯ ಸ್ವಾಮೀಜಿಗೆ ಗುರುಪಟ್ಟಾಧಿಕಾರ ನೀಡಿ ನೂತನ ಅಭಿದಾನ ಅನುಗ್ರಹಿಸಿದರು.
ಮುತ್ನಾಳ ಶಿವಾನಂದ ಶಿವಾಚಾರ್ಯರು, ಬಿಜಗುಪ್ಪಿ ರೇಣುಕ ಶಿವಯೋಗಿ ಶಿವಾಚಾರ್ಯರು, ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯರು, ಮೊರಬ ಮಹೇಶ್ವರ ಶಿವಾಚಾರ್ಯರು, ಪಾಲ್ಗೊಂಡಿದ್ದರು.ಗ್ರಾಮದಲ್ಲಿ ಮಹಿಳೆಯರಿಂದ ಆರತಿ, ಕುಂಭಮೇಳದೊಂದಿಗೆ ವಿವಿಧ ವಾದ್ಯಮೇಳಗಳೊಂದಿಗೆ ಜಡೆತಲೆ ಮರುಳಸಿದಟಛಿ ಶಿವಾಚಾರ್ಯ ಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ವಿವಿಧ ಮಠಾಧೀಶರು, ಗಣ್ಯಮಾನ್ಯರನ್ನು ಸಾಧಕರನ್ನು ಸನ್ಮಾನಿಸಲಾಯಿತು.
ಎಂ.ಚಂದರಗಿ ತಪೋಭೂಷಣ ವೀರಭದ್ರ ಶಿವಯೋಗಿ ಶಿವಾಚಾರ್ಯರು ಅಧ್ಯತೆ ವಹಿಸಿದ್ದರು. ಹೂಲಿ ಉಮೇಶ್ವರ ಶಿವಾಚಾರ್ಯರು, ಶಿರಕೋಳ ಗುರುಸಿದೆಟಛೀಶ್ವರ ಶಿವಾಚಾರ್ಯರು, ಚಿಪ್ಪಲಕಟ್ಟಿ ಅಭಿನವ ಸಿದಟಛಿಲಿಂಗ ಶಿವಾಚಾರ್ಯರು, ದೊಡವಾಡ ಉಮೇಶ್ವರ ಶಿವಾಚಾರ್ಯರು, ಸೇಡಂ ಶಿವಶಂಕರ ಶಿವಾಚಾರ್ಯರು, ಅಶೋಕ ಪೂಜಾರಿ, ಮಹಾದೇವಪ್ಪ ಗಡ್ಡಿ, ಉಮೇಶ ಬಾಳಿ, ಬಸಯ್ಯ ಹಿರೇಮಠ, ಮಹಾಂತೇಶ ತೋಟಗಿ, ಸಿಂಗಯ್ಯ ಮಠಪತಿ, ಚಂದ್ರಯ್ಯ ವಸ್ತ್ರದ, ಈರಪ್ಪ ಜಕ್ಕನ್ನವರ, ಮಹಾದೇವ ವನ್ನೂರ, ಶಿವಾನಂದ ಹಾದಿಮನಿ, ಮಹಾದೇವ ಬಾಗಿಲದ, ಸಿದ್ದಪ್ಪ ಶಿಂಗನ್ನವರ, ಚನ್ನಪ್ಪ ಬೆಣಚನಮರಡಿ, ಬಸವರಾಜ ವಾಲಿ, ರಮೇಶ ಅರ್ಭಾಟ, ಶಿವಾ ಕಟ್ಟಿಮನಿ, ಮಲ್ಲಿಕಾರ್ಜುನ ಅಂಗಡಿ ಉಪಸ್ಥಿತರಿದ್ದರು.