ಮುಂಡರಗಿ: ನಾವು ಮಾಡುವ ದಾಸೋಹ ಸೇವೆಯು ಸಾರ್ಥಕತೆಯಿಂದ ಕೂಡಿರಬೇಕು. 12ನೇ ಶತಮಾನದಲ್ಲಿ ಶರಣರು ಶ್ರಮ, ಕಾಯಕದಿಂದ ಬಂದಂತ ಹಣದಿಂದ ದಾಸೋಹ ಮಾಡುತ್ತಿದ್ದರು. ಆದ್ದರಿಂದ ಪ್ರತಿಯೊಬ್ಬರೂ ಶರಣರ ಕಾಯಕ ದಾಸೋಹ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕತೆ ಹೊಂದಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಮನ್ವಯ ಅಧಿಕಾರಿ ಹನುಮರಡ್ಡಿ ಇಟಗಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ತಾಲೂಕು ಅಧ್ಯಕ್ಷ ಪೊ›. ಎಂ.ಜಿ. ಗಚ್ಚಣ್ಣವರ ಮಾತನಾಡಿ, ಶ್ರಾವಣ ಮಾಸದಲ್ಲಿ ಉತ್ತಮ ಸಂದೇಶ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುವುದರಿಂದ ಜೀವನದಲ್ಲಿ ಉತ್ತಮ ವಿಚಾರ ಚಿಂತನೆಗಳನ್ನು ಹೊಂದಲು ಸಾಧ್ಯವಾಗುತ್ತದೆ. ಶರಣರು ತೋರಿದ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.
ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾ ಬಸಾಪೂರ, ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಮಾತನಾಡಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪೊ›. ಆರ್.ಎಲ್. ಪೊಲೀಸ್ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಉಮಾ ದೊಡ್ಡಮನಿ, ಸುಮಿತ್ರಾ ಜಾಧವ, ಹುಲಿಗೆಮ್ಮ ಭಜಂತ್ರಿ, ಆರ್.ಕೆ. ರಾಯನಗೌಡ್ರ, ಎಸ್.ಆರ್. ಬಸಾಪೂರ, ಕೃಷ್ಣಮೂರ್ತಿ ಸಾಹುಕಾರ, ಎನ್.ಎನ್. ಕಲಕೇರಿ, ಗಿರಿಜಾ ಸೂಡಿ, ಕಾವೇರಿ ಬೋಲಾ, ಕಳಕಪ್ಪ ಜಲ್ಲಿಕೇರಿ ಇತರರು ಇದ್ದರು.
ರಮೇಶ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಅಕ್ಕಮಹಾದೇವಿ ಕೊಟ್ಟೂರಶೆಟ್ಟರ ನಿರೂಪಿಸಿದರು. ಕೊಟ್ರೇಶ ಜವಳಿ ವಂದಿಸಿದರು.