ಹಳಿಯಾಳ: ಶಾಂತಿ, ಪ್ರೀತಿ, ಸಹಬಾಳ್ವೆ, ಕ್ಷಮೆಯ ಸಂದೇಶ ಸಾರಿದ ಯೇಸುವಿನ ಹುಟ್ಟು ಹಬ್ಬ ಕ್ರಿಸ್ಮಸ್ ನಮ್ಮೆಲ್ಲರಲ್ಲಿ ಶಾಂತಿ ಸೌಹಾರ್ದತೆಯ ಜೀವನ ನಡೆಸಲು ಪ್ರೇರಣೆಯಾಗಲಿ ಎಂದು ಹಳಿಯಾಳ ಮಿಲಾಗ್ರಿಸ್ ಚರ್ಚನ ಪ್ರಧಾನ ಗುರು ಪ್ರಾನ್ಸಿಸ್ ಮಿರಾಂಡ ಹೇಳಿದರು.
ಪಟ್ಟಣದ ಕಾರ್ವೆಲ್ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಹಳಿಯಾಳದ ಕ್ರೈಸ್ತ ಸಮುದಾಯದವರು ಹಮ್ಮಿಕೊಂಡಿದ್ದ ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮದ ನಂತರ ಪಟ್ಟಣದ ವಿವಿಧ ವಾರ್ಡಗಳ ಕ್ರೈಸ್ತ ಬಾಂಧವರಿಂದ ಕ್ರಿಸ್ಮಸ್ ಸಂದೇಶ ಸಾರುವ ಕಿರುನಾಟಕಗಳು, ನೃತ್ಯ ಪ್ರದರ್ಶನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಚಿಕ್ಕ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಸಹಮಿಲನ ಸಾಂಸೃ್ಕಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಮಿಲಾಗ್ರಿಸ್ ಚರ್ಚ್ ಸಹಾಯಕ ಗುರು ಅರುಣ ಫರ್ನಾಡೀಸ್, ಗುರು ರೇಗನ್ ಫರ್ನಾಡೀಸ್, ಕಾರ್ವೆಲ್ ಕಾನ್ವೆಂಟ್ ಮುಖ್ಯ ಭಗಿನಿ ರೋಜಿಮಾ ಇತರರಿದ್ದರು.