ಶಾರ್ಜಾ: ಆರ್‌ಸಿಬಿ ತಂಡ ಐಪಿಎಲ್ ಎಲಿಮಿನೇಟರ್‌ನಲ್ಲಿ ಸೋಲು ಕಂಡು ಸತತ 14ನೇ ಬಾರಿಯೂ ಕಪ್ ಕನಸು ಭಗ್ನಗೊಂಡ ಬೆನ್ನಲ್ಲೇ ತಂಡದ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಕ್ರಿಶ್ಚಿಯನ್ ಮತ್ತು ಅವರ ಗರ್ಭಿಣಿ ಸಂಗಾತಿ ಜೋರ್ಗಿಯಾ ಡುನ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಭಾರಿ ನಿಂದನೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಇಬ್ಬರೂ ಆಟಗಾರರೂ ಅಸಮಾಧಾನ ವ್ಯಕ್ತಪಡಿಸಿದ್ದು, ತಂಡದ ನಿಜವಾದ ಅಭಿಮಾನಿಗಳಿಗಷ್ಟೇ ಧನ್ಯವಾದ ಸಲ್ಲಿಸಿದ್ದಾರೆ.
ಆನ್‌ಲೈನ್ ಟ್ರೋಲ್‌ಗಳ ಬಗ್ಗೆ ಕಿಡಿ ಕಾರಿರುವ ಮ್ಯಾಕ್ಸ್‌ವೆಲ್, ಅದನ್ನು ‘ಅಸಹ್ಯ’ ಮತ್ತು ‘ಕೊಳಕು’ ಎಂದಿದ್ದಾರೆ. ಮತ್ತೊಂದೆಡೆ ಕ್ರಿಶ್ಚಿಯನ್, ಈ ಕ್ರಿಕೆಟ್ ವಿಚಾರದಿಂದ ತಮ್ಮ ಸಂಗಾತಿಯನ್ನು ಹೊರಗಿಡುವಂತೆ ಮನವಿ ಮಾಡಿಕೊಂಡಿದ್ದಾರೆ.
We’re 100% with you @danchristian54 and we will not tolerate online abuse towards players and especially towards their families and loved ones. #PlayBold #WeAreChallengers #SayNoToOnlineAbuse pic.twitter.com/w2UvpyJ6aD
— Royal Challengers Bangalore (@RCBTweets) October 12, 2021
ಕೆಕೆಆರ್ ವಿರುದ್ಧದ ಎಲಿಮಿನೇಟರ್‌ನಲ್ಲಿ ಡೇನಿಯಲ್ ಕ್ರಿಶ್ಚಿಯನ್ 1.4 ಓವರ್‌ಗಳಲ್ಲಿ 29 ರನ್ ಬಿಟ್ಟುಕೊಟ್ಟಿದ್ದರು. ಅವರು ಎಸೆದ ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಸುನೀಲ್ ನಾರಾಯಣ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯ ಆರ್‌ಸಿಬಿ ಕೈಜಾರಿತ್ತು. ಇದಕ್ಕಾಗಿ ಕ್ರಿಶ್ಚಿಯನ್ ಅವರ ಸಂಗಾತಿ ಜೋರ್ಗಿಯ ಡುನ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ನಿಂದನೆಯ ಕಾಮೆಂಟ್‌ಗಳು ಹರಿದುಬಂದಿವೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕ್ರಿಶ್ಚಿಯನ್, ‘ಹೌದು, ಕಳೆದ ರಾತ್ರಿಯ ಪಂದ್ಯ ನನ್ನ ಪಾಲಿಗೆ ಉತ್ತಮವಾಗಿರಲಿಲ್ಲ. ಆದರೆ ಇದು ಕ್ರೀಡೆ. ದಯವಿಟ್ಟು ಇದರಿಂದ ಅವಳನ್ನು ಹೊರಗಿಡಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Winning and losing are a part of this beautiful game we all love. Our players put in the hard work day in and day out to reach the level they’re at. They give it their everything to try and win the game for us! #PlayBold #WeAreChallengers #SayNoToOnlineAbuse
— Royal Challengers Bangalore (@RCBTweets) October 12, 2021