ಮ್ಯಾಟ್ರಿಮೋನಿಯಲ್ಲಿ 23 ಯುವತಿಯರಿಗೆ ವಂಚನೆ ಪ್ರಕರಣ: ಆರೋಪಿಯಿಂದ ಸ್ಫೋಟಕ ಮಾಹಿತಿ

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ನಂಬಿಸಿ 23 ಯುವತಿಯರಿಗೆ ವಂಚನೆ ಪ್ರಕರಣದ ಆರೋಪಿ ನವೀನ್ ಸಿಂಗ್ ಅಲಿಯಾಸ್​ ಯುವರಾಜ್ ಸಿಂಗ್‌ ಪೊಲೀಸ್​ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಹಲವಾರು ಜನರಿಗೆ ವಂಚಿಸಿದ್ದರ ಕುರಿತು ವಿಚಾರಣೆ ವೇಳೆ ಒಪ್ಪಕೊಂಡಿದ್ದಾನೆ. ಆರೋಪಿ ನವೀನ್ ಎಂಬಿಎ ಪದವೀಧರನಾಗಿದ್ದು, ಉತ್ತಮ ಮಾತಿನ ಕಲೆ ಹೊಂದಿದ್ದ. ಹೀಗಾಗಿ ಜನರನ್ನು ಮಾತಿನಲ್ಲೇ ಮರಳು ಮಾಡುತ್ತಿದ್ದ.

ತಿಪಟೂರಿನಿಂದ ಬೆಂಗಳೂರಿಗೆ ಬರುವಾಗ ಬಸ್​ನ ಚಾಲಕ, ನಿರ್ವಾಹಕನಿಗೂ ವಂಚಿಸಿದ್ದ. ನಿರ್ವಾಹಕರ ಸಂಬಂಧಿಗಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 12 ಸಾವಿರ ಪಡೆದು ಪಂಗನಾಮ ಹಾಕಿದ್ದಾನೆ.

ಅಷ್ಟೇಅಲ್ಲದೇ ಮೊಬೈಲ್​ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ, ಕಡಿಮೆ ಬೆಲೆಗೆ ಮೊಬೈಲ್ ಸಿಗುತ್ತೆ ಎಂದು 10 ಸಾವಿರ ಪಡೆದು‌ ಮೋಸ ಮಾಡಿದ್ದಾನೆ. 2015 ರಲ್ಲಿ‌ ಮ್ಯಾಟ್ರಿಮೋನಿಯಲ್ಲಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ. ತಂದೆ-ತಾಯಿಗೆ ಅನಾರೋಗ್ಯ ಹಿನ್ನೆಲೆ ಹಣದ ಅಭಾವದಿಂದ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *