ಡಂಬಳ: ವಿದ್ಯಾರ್ಥಿಗಳು ಆಸಕ್ತಿವಹಿಸಿ ಕಲಿತರೆ ಗಣಿತ ವಿಷಯ ಕಬ್ಬಿಣದ ಕಡಲೆಯಲ್ಲ. ಅದು ಸರಳವಾಗಿ ಅರ್ಥವಾಗುವ, ಆನಂದಿಸುವ ವಿಷಯವಾಗಿದೆ ಎಂದು ಸಿಆರ್ಪಿ ಎನ್.ಎಂ. ಕುಕನೂರ ಹೇಳಿದರು.
ಸಮೀಪದ ಮೇವುಂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಎಸ್ಡಿಎಂಸಿ ಸದಸ್ಯ ಹೇಮಂತ ಹಾರೋಗೇರಿ, ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಹೈತಾಪೂರ, ಸದಸ್ಯ ಬಸವರಾಜ ಅರಕಲ್ ಶಿಕ್ಷಕರಾದ ವಿಶ್ವನಾಥ ಉಳ್ಳಾಗಡ್ಡಿ, ಎಂ.ಎಲ್. ಪತ್ತಾರ, ವನಜಾಕ್ಷಿ ಹಿರೇಮಠ, ಅರ್.ಡಿ. ಹೊಂಬಳ, ಜೆ.ಕೆ. ಕೊಟಗಿ, ಆರ್.ಆರ್. ಈರಗಾರ, ಎ.ಕೆ. ಚೌವಡನ್ನವರ, ಎಸ್.ಜೆಡ್. ಬೇಲೆರಿ, ಚೈತ್ರಾ ಅಳವುಂಡಿ, ಪಿ.ಆರ್. ಆಲೂರ, ಶಾರದಾ ಚಿಕ್ಕರಾರ, ಮೇಘಾ ಗೋಣೆಪ್ಪನವರ, ಮಲ್ಲೇಶ ಉಡಂಡಿ, ಇತರರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಎಸ್.ವಿ. ಅರಿಷಿಣದ ಸ್ವಾಗತಿಸಿದರು. ಶಿಕ್ಷಕ ತೌಸೀಫ್ ಅಳವುಂಡಿ ಕಾರ್ಯಕ್ರಮ ನಿರ್ವಹಿಸಿದರು.