ಅಂತಾರಾಷ್ಟ್ರೀಯ ಗಣಿತ, ಸಂಖ್ಯಾಶಾಸ್ತ್ರ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದ ಹುಬ್ಬಳ್ಳಿ ಬಾಲಕಿ

ಹುಬ್ಬಳ್ಳಿ: ಪರಿವರ್ತನ ಗುರುಕುಲ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಅಂಗಡಿ ಥಾಯ್ಲೆಂಡ್​ನ​ ಕೋರಾಟ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಗಣಿತ ಹಾಗೂ ಸಂಖ್ಯಾಶಾಸ್ತ್ರ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ.

ಸ್ಪರ್ಧೆಯಲ್ಲಿ 9 ದೇಶಗಳ 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾನ್ವಿ ಕೆಎಲ್​ಇ ಸಂಸ್ಥೆಯ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್​ನ ಪ್ರಾಚಾರ್ಯ ಡಾ. ವಿರೇಶ ಅಂಗಡಿ ಅವರ ಪುತ್ರಿ. ಈ ಮೊದಲು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಳು.