ಮಾತೆ ಮಹಾದೇವಿ ಲಿಂಗೈಕ್ಯ

ಬೆಂಗಳೂರು: ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಕೂಡಲ ಸಂಗಮದ ಬಸವ ಪೀಠದ ಅಧ್ಯಕ್ಷೆ ಶ್ರೀಮಾತೆ ಮಹಾದೇವಿ(74) ಗುರುವಾರ ಕೊನೆಯುಸಿರೆಳೆದಿದ್ದಾರೆ.

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ 7 ದಿನಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತ ಬಂದಿತ್ತು. ಗುರುವಾರ ಸಂಜೆ 4.45ರ ವೇಳೆಗೆ ಅವರು ಲಿಂಗ್ಯಕೈರಾದರು.

ಚಿತ್ರದುರ್ಗ ಜಿಲ್ಲೆ ಸಾಸಲಹಟ್ಟಿ ಮೂಲದವರಾಗಿದ್ದು, ಗೃಹ ಸಚಿವ ಎಂ.ಬಿ. ಪಾಟೀಲ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದರು.

ಬುಧವಾರ(ಮಾ.13) ಮಾತೆ ಮಹಾದೇವಿ ಅವರ ಜನ್ಮದಿನವಾಗಿದ್ದು, ಗುರುವಾರ ಅವರು ಲಿಂಗೈಕರಾಗಿದ್ದಾರೆ.

ಮಾತೆ ಮಹಾದೇವಿ ಅವರ ಶರೀರವನ್ನು ಶುಕ್ರವಾರ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಕಳುಹಿಸಲಾಗುತ್ತಿದ್ದು, ಶನಿವಾರ ಅಂತಿಮ ವಿಧಿ, ವಿಧಾನಗಳನ್ನು ಕೂಡಲಸಂಗಮದಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ.