ಮಾಸ್ತಿ ಪ್ರಶಸ್ತಿ ಪ್ರಕಟ

ಬೆಂಗಳೂರು: ಮಾಸ್ತಿ ಅಯ್ಯಂಗಾರ್ ಟ್ರಸ್ಟ್ ನೀಡುವ ಮಾಸ್ತಿ ಪ್ರಶಸ್ತಿಗೆ ಡಾ. ಕೆ.ಮರುಳಸಿದ್ದಪ್ಪ ಸೇರಿ ಐವರು ಸಾಹಿತಿಗಳು ಭಾಜನರಾಗಿದ್ದಾರೆ.

ವಿಮರ್ಶೆ ವಿಭಾಗದಲ್ಲಿ ಹಿರಿಯ ಸಾಹಿತಿ ಡಾ. ಕೆ. ಮರುಳಸಿದ್ದಪ್ಪ, ಸೃಜನಶೀಲ ವಿಭಾಗ ದಲ್ಲಿ ಬೋಳುವಾರು ಮಹಮದ್ ಕುಂಞ, ಕಥೆ ವಿಭಾಗದಲ್ಲಿ ಈಶ್ವರಚಂದ್ರ, ಡಾ. ಮೊಗಳ್ಳಿ ಗಣೇಶ್ ಮತ್ತು ಕಾವ್ಯ ವಿಭಾಗದಲ್ಲಿ ಸವಿತಾ ನಾಗಭೂಷಣ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಜೂ. 29ರಂದು ಭಾರ ತೀಯ ವಿದ್ಯಾ ಭವನದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 27ನೇ ವರ್ಷದ ಮಾಸ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಿಗೆ ಮಾಸ್ತಿ ಪ್ರಶಸ್ತಿ ಫಲಕ, 25 ಸಾವಿರ ರೂ. ನಗದನ್ನು ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *