26.3 C
Bengaluru
Sunday, January 19, 2020

ಸಮಯ ಪರಿಪಾಲನೆಯೇ ಯಶಸ್ಸಿನ ಸೂತ್ರ

Latest News

ಹೇಮೆ ನಾಲೆ ಆಧುನೀಕರಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ : ಸಚಿವ ಜೆ.ಸಿ.ಮಾಧುಸ್ವಾಮಿ

ತುಮಕೂರು: ತುಮಕೂರು, ಮಂಡ್ಯ ಜಿಲ್ಲೆಗೆ ನೀರು ಹರಿಯುವ 70 ರಿಂದ 166 ಕಿಲೋಮೀಟರ್‌ವರೆಗಿನ ಹೇಮಾವತಿ ನಾಲೆ ಆಧುನೀಕರಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​ ಬಂದ ಮೇಲೆ ಸಂಪುಟ ವಿಸ್ತರಣೆ: ಡಿಸಿಎಂ ಅಶ್ವತ್ಥ ನಾರಾಯಣ

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ...

ಸೋ ಕಾಲ್ಡ್​ ಸೆಕ್ಯುಲರ್​ ಎಂದು ಕರೆಯಿಸಿಕೊಳ್ಳುವವರಷ್ಟು ಜಾತಿವಾದಿಗಳು ಬೇರೊಬ್ಬರಿಲ್ಲ: ಸಚಿವ ಸಿ.ಟಿ.ರವಿ

ತುಮಕೂರು: ಸೋಕಲ್ಡ್ ಸೆಕ್ಯುಲರ್ ಅಂತ ಕರೆಸಿಕೊಳ್ಳುವಂತವರಷ್ಟು ದೊಡ್ಡ ಜಾತಿವಾದಿಗಳು ಇನ್ನೊಬ್ಬರಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಅವರ ಪಕ್ಷಕ್ಕೆ ಜಾತಿಯನ್ನೇ ಅಸ್ತವಾಗಿ ಬಳಸಿಕೊಳ್ಳುತ್ತಾರೆ ಎಂದು ಸಚಿವ...

ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಹೊತ್ತಿದ್ದ ಏರ್​ ಇಂಡಿಯಾದ ಹಿರಿಯ ಪೈಲಟ್​ ಮರಳಿ ಕೆಲಸಕ್ಕೆ

ನವದೆಹಲಿ: ಸಹೋದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಅಮಾನತುಗೊಂಡಿದ್ದ ಏರ್​ ಇಂಡಿಯಾದ ಹಿರಿಯ ಪೈಲಟ್​ ಒಬ್ಬರು ಮತ್ತೆ ಕೆಲಸಕ್ಕೆ ಮರಳಿದ್ದಾರೆ ಎಂದು...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ...

| ಡಾ.ಕೆ.ಪಿ. ಪುತ್ತೂರಾಯ

ಜೀವನದಲ್ಲಿ ಕೆಲವೇ ವ್ಯಕ್ತಿಗಳು ಯಶಸ್ವೀ ವ್ಯಕ್ತಿಗಳಾಗುತ್ತಾರೆ; ಹೆಚ್ಚಿನವರು ಆಗುವುದಿಲ್ಲ. ಹೀಗಾಗಲು ಅನೇಕ ಕಾರಣಗಳ ಜತೆ, ಬಲು ಮುಖ್ಯ ಕಾರಣವೇನೆಂದರೆ ಸಮಯದ ಸಮರ್ಪಕ ನಿರ್ವಹಣೆ ಹಾಗೂ ಪರಿಪಾಲನೆ ಕೊರತೆ. It is only the busy man, who has time for everything and for everybody while the lazy man has no time at all ಎಂಬ ಮಾತಿನಂತೆ, ಕಾರ್ಯನಿರತರಿಗೆ ಸಮಯದ ಅಭಾವವೇ ಇಲ್ಲ. ಸೋಮಾರಿಗಳ ಬಳಿ ಸಮಯವೇ ಇಲ್ಲ. ಕಾರ್ಯಶೀಲರಿಗೆ ಸಮಯದ ಬೆಲೆ ಗೊತ್ತು. ನಮ್ಮಿಂದ ಅಳೆಯಲಾಗದ ಮತ್ತು ನಾವು ತಡೆ ಹಿಡಿಯಲಾಗದ ವಿಷಯಗಳಲ್ಲಿ ಕಾಲವೂ ಒಂದು. ಸಮಯ ಯಾರಿಗೂ ಕಾಯುವುದಿಲ್ಲ; ಯಾರನ್ನೂ ಕೇಳುವುದಿಲ್ಲ. ಅದು, ಅದರ ಪಾಡಿಗೆ ನಿರಂತರವಾಗಿ ಸಾಗುತ್ತಿರುತ್ತದೆ. ಕಳೆದ ಹಣ, ಸ್ಥಾನಮಾನವನ್ನು ಮತ್ತೆ ಸಂಪಾದಿಸಬಹುದು. ಆದರೆ ಕಳೆದುಹೋದ ಸಮಯ ಮತ್ತೆಂದೂ ಮರಳಿ ಬಾರದು. ಅಂತೆಯೇ ಸಂಗ್ರಹಿಸಿ ಇಟ್ಟುಕೊಳ್ಳಲಾಗದ, ಉಳಿತಾಯ ಮಾಡಿಕೊಳ್ಳಲಾಗದ ವಿಷಯವೆಂದರೆ ಸಮಯ. ಸಮಯವೆಂಬುದು ಕಾಲ ನಮಗೆಲ್ಲರಿಗೂ ಸರಿಸಮಾನವಾಗಿ, ಸಮ ಪ್ರಮಾಣದಲ್ಲಿ ನೀಡಿರುವ ಬಹು ಅಮೂಲ್ಯ ಕಾಲಾವಕಾಶ. ಸಮಯ ಪಕ್ಷಪಾತಿಯಲ್ಲ. ಎಲ್ಲರ ದಿನಗಳಲ್ಲಿ ಇರೋದು 24 ಗಂಟೆಗಳು ಮಾತ್ರ.

‘ನಾನು ರಾಜನಾಗಿರಬಹುದು. ಆದರೆ ಒಂದು ನಿಮಿಷವನ್ನೂ ವ್ಯರ್ಥವಾಗಿ ಕಳೆಯುವಷ್ಟು ಶ್ರೀಮಂತನಲ್ಲ’ ಎಂಬ ಜೋರ್ಡಾನ್ ದೊರೆಯ ಮಾತಿನಲ್ಲಿ ಸತ್ಯವಿದೆ. ಬ್ಯಾಂಕ್​ನ ನಮ್ಮ ಖಾತೆಯಲ್ಲಿ ಎಷ್ಟು ಹಣ ಜಮಾ ಇದೆ ಎಂದು ಹೇಳಬಹುದು; ಆದರೆ ನಮ್ಮ ಜೀವನಾವಧಿಯಲ್ಲಿ ಎಷ್ಟು ಸಮಯ ಜಮಾ ಇದೆ ಎಂದು ಹೇಳಲಾಗದು. ನಾವು ಕಾಲವನ್ನು ವ್ಯರ್ಥ ಮಾಡಿದರೆ, ಕಾಲ ನಮ್ಮ ಜೀವನವನ್ನೇ ವ್ಯರ್ಥ ಮಾಡುತ್ತದೆ. ಸಮಯದ ಬೆಲೆಯನ್ನು ಅರಿತವರು ಜೀವನದ ಬೆಲೆಯನ್ನು ಅರಿತಿರುತ್ತಾರೆ. ಸಮಯಕ್ಕೆ ಗೌರವ ಕೊಡದವನು, ತನ್ನ ಜೀವನಕ್ಕೆ ಗೌರವ ಕೊಡದವನಂತೆ. ಯಾರು, ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೋ, ಜೀವನ ಅವರ ಪರ!

ಅಂಗಡಿಯಲ್ಲಿ ಬೆಲೆ ಬಾಳುವ ಗಡಿಯಾರ ದೊರಕಬಹುದು. ಆದರೆ ಕೋಟಿ ರೂಪಾಯಿ ಕೊಟ್ಟರೂ ಒಂದು ನಿಮಿಷವನ್ನು ಕೊಂಡುಕೊಳ್ಳಲಾಗದು; ಹೆಚ್ಚಿಸಿಕೊಳ್ಳಲಾಗದು. ಸಮಯದ ಜತೆ ಇದ್ದು, ನಮ್ಮ ಕೆಲಸಗಳನ್ನು ಪೂರೈಸಿಕೊಳ್ಳಬೇಕು. ಇದುವೇ ಜಾಣತನ. ನಮಗೆ ಲಭ್ಯವಿರುವ ಸಮಯದ ಜತೆ ಇದ್ದು, ನಮ್ಮ ಮಾನಸಿಕ ಗಡಿಯಾರವನ್ನು ಸೆಟ್ ಮಾಡಿಕೊಂಡು ಅದರಂತೆ ಕೆಲಸ ಮಾಡಲು ಹೊರಟರೆ ಎಲ್ಲವೂ ಸುಲಭ ಸಾಧ್ಯ. ವ್ಯಾಪಾರಿಗೆ Time is money; ಆದರೆ Time is Honey. ಅವರವರ ಪ್ರಾಪ್ತಿಯಲ್ಲಿರುವ ನಿಯಮಿತವಾದ ಜೀವನಾವಧಿಯನ್ನು, ಸಮರ್ಪಕವಾಗಿ ಬಳಸಿಕೊಳ್ಳಲೇಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಸಮಯ ವ್ಯರ್ಥಗೊಳಿಸಲು ನಮ್ಮಲ್ಲಿ ಸಮಯಾವಕಾಶವೇ ಇಲ್ಲ. ಕಾಲ ಮುಂದೆ ಮುಂದೆ ಸಾಗುತ್ತಿರುವಂಥದ್ದು; ಹಿಂದೆ ಹೋಗುವಂಥದ್ದಲ್ಲ. ಕಳೆದುಹೋದ ನಿನ್ನೆ ಮರಳಿ ಬಾರದು. ಜೀವನ ಸಾರ್ಥಕವಾಗಬೇಕಿದ್ದರೆ, ನಮ್ಮ ಪಾಲಿಗೆ ಬಂದಿರುವ ಸಮಯಾವಧಿಯ ಸಂಪೂರ್ಣ ಹಾಗೂ ಸಮರ್ಪಕ ಬಳಕೆಯಾಗಬೇಕು. ಸದುಪಯೋಗವಾಗಬೇಕು. ಕೆಲವರಿಗೆ ಸಮಯವನ್ನು ಹೇಗೆ ಕಳೆಯುವುದು ಎಂಬುದೇ ಒಂದು ಸಮಸ್ಯೆ. ಇಂಥವರು ಸಾಮಾನ್ಯವಾಗಿ ನಿರುದ್ಯೋಗಿಗಳು, ನಿರುತ್ಸಾಹಿಗಳು, ನಿರಾಕಾಂಕ್ಷಿಗಳು ಆಗಿರುತ್ತಾರೆ. ಇನ್ನು ಕೆಲವರಿಗೆ, ಮಾಡಲು ಕೈತುಂಬ ಕೆಲಸವಿದ್ದು, ಸಮಯವೇ ಸಾಕಾಗುವುದಿಲ್ಲ. ಆದರೆ ಸಮಯದ ಸಮರ್ಪಕ ನಿರ್ವಹಣೆಯಿಂದ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಬಹುದು.

ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಸೊತ್ತು ಇದೆ; ಆದರೆ ಯಾವುದಕ್ಕೂ ಪುರುಸೊತ್ತೇ ಇಲ್ಲ ಅಂತಾರೆ. ಇದು ಸಮಯದ ಅಭಾವದಿಂದಾಗುತ್ತಿಲ್ಲ; ಸಮಯದ ಅಸಮರ್ಪಕ ನಿರ್ವಹಣೆಯಿಂದ ಆದುದು. ಮಕ್ಕಳಿಂದ ಹಿಡಿದು ಮುದುಕರವರೆಗೆ, ಯಾರನ್ನು ಕೇಳಿದರೂ ಒಂದೇ ಮಾತು ‘ಟೈಮೇ ಇಲ್ಲ’. ಕೆಲವರಂತೂ ಟೈಮ್ ಎಷ್ಟು ಬೇಗ ಓಡುತ್ತಿದೆ; ಟೈಮ್ ಹೋದದ್ದೇ ಗೊತ್ತಾಗುವುದಿಲ್ಲ ನೋಡಿ ಅಂತಾರೆ. ವಾಸ್ತವದಲ್ಲಿ ಟೈಮ್ ವೇಗವಾಗಿಯೂ ಓಡುತ್ತಿಲ್ಲ. ನಿಧಾನವಾಗಿಯೂ ಓಡುತ್ತಿಲ್ಲ; ಅದು ತನ್ನ ನಿಗದಿತ ಗತಿಯಲ್ಲೇ ಸಾಗುತ್ತಿರುತ್ತದೆ. ಸಮಯದ ವೇಗಕ್ಕನುಸಾರವಾಗಿ ನಾವು ನಮ್ಮ ಕೆಲಸ ಕಾರ್ಯಗಳನ್ನು ರೂಪಿಸಿಕೊಳ್ಳಬೇಕು. ನಿಧಾನ ಮಾಡಿದರೆ ಕೆಲಸ ಸಾಗದು; ವೇಗ ಹೆಚ್ಚಿಸಿದರೆ ತಪ್ಪುಗಳಾದೀತು. ಒಟ್ಟಿನಲ್ಲಿ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ, ಸಮತೋಲನವನ್ನು ಕಾಪಾಡುತ್ತಿರಬೇಕು. ಇಂದಿನ ಈ ಸೂಪರ್​ಫಾಸ್ಟ್ ಯುಗದಲ್ಲಿ ದೊರಕಿರುವ ಕಾಲಾವಕಾಶದಲ್ಲೇ ಬಹಳಷ್ಟು ಕೆಲಸಗಳಾಗಬೇಕಾದ ಅನಿವಾರ್ಯತೆ ಇರುವ ಕಾರಣ ಸಮಯವನ್ನು ವ್ಯರ್ಥಗೊಳಿಸಲು ಸಾಧ್ಯವೇ ಇಲ್ಲ. ಇಂದಿನ ದಿನಗಳಲ್ಲಿ ಬಹುತೇಕ ಕೆಲಸಗಳಿಗೆ ಯಂತ್ರೋಪಕರಣಗಳು, ಕೆಲಸದಾಳುಗಳು, ವಾಹನ ಸೌಕರ್ಯಗಳಿದ್ದರೂ, ನಮಗೆ ಸಮಯ ಸಾಲುತ್ತಿಲ್ಲ. ಏಕೆ? ಕಾರಣ ನಮಗೆ ಸಮಯದ ಪರಿಪಾಲನೆ ಮತ್ತು ಸಮರ್ಪಕ ನಿರ್ವಹಣೆ ಗೊತ್ತಿಲ್ಲ. ಸಮಯದ ಸಮರ್ಪಕ ನಿರ್ವಹಣೆ ಹೇಗೆ ಸಾಧ್ಯವೆಂಬುದರ ಬಗ್ಗೆ ಕೆಲವು ಕಿವಿಮಾತುಗಳು. ದಿನದಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಒಂದು ಕಾರ್ಯಸೂಚಿ ಇರಬೇಕು. ಇದು ಹಿಂದಿನ ದಿನವೇ ಸಿದ್ಧವಾಗಿರಬೇಕು. ಈ ಕಾರ್ಯ ಸೂಚಿ ಅಥವಾ ಪಟ್ಟಿ ಆದ್ಯತೆಗಳಿಗೆ ಅನುಸಾರವಾಗಿರಬೇಕು. ಅಂತೆಯೇ ಪ್ರತಿಯೊಂದು ಕೆಲಸಕ್ಕೂ ತಗಲುವ ಅಂದಾಜು ವೇಳೆಯನ್ನು ಗೊತ್ತು ಮಾಡಿಕೊಂಡಿರಬೇಕು. ಒಟ್ಟಿನಲ್ಲಿ “Plan your work and work your plan’ ಎಂಬ ಸೂತ್ರ ಅನುಕರಣೀಯ.

ಕೆಲಸಗಳ ಪಟ್ಟಿ ಒಮ್ಮೆ ಸಿದ್ಧವಾಯಿತೆಂದರೆ, ಮತ್ತೆ ಅದನ್ನು ಕಾರ್ಯಗತಗೊಳಿಸುವಲ್ಲಿ ತಡಮಾಡಬಾರದು. ಬೆಳಗ್ಗೆ ಏಳುವುದೇ ತಡವಾದರೆ, ದಿನದ ಇನ್ನುಳಿದ ಕೆಲಸಗಳಿಗೆ ಸಮಯವೆಲ್ಲಿದೆ? ಮಾತ್ರವೇ ಅಲ್ಲ. ಕೆಲಸಗಳ ಒತ್ತಡಕ್ಕೂ ಒಳಗಾಗಬೇಕಾಗುತ್ತದೆ. ಹೀಗಾದಾಗ ಕೆಲಸಗಳೇ ಕೆಟ್ಟು ಹೋಗುವ ಸಂಭವ ಹೆಚ್ಚಾಗುತ್ತದೆ. ಇನ್ನು ತುರ್ತು ಪರಿಸ್ಥಿತಿಗಳ ಹೊರತಾಗಿ, ಯಾವುದೇ ಕಾರಣಕ್ಕೂ ನಿಗದಿ ಮಾಡಿಕೊಂಡ ಕೆಲಸಗಳನ್ನು ಮುಂದೂಡಬಾರದು. ಆಗ ಅದು ಮುಂದೆ ಮಾಡಬೇಕಾದ ಇನ್ನೊಂದು ಕೆಲಸಕ್ಕೂ ಅಡ್ಡಿಯಾಗಬಹುದು. ಹೀಗಾದಾಗ ಯಾವ ಕೆಲಸವೂ ಸಮರ್ಪಕವಾಗಿ ನಡೆಯದೆ ಅಸಹನೆ ಹುಟ್ಟಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ‘ಇಂದಿನ ಕೆಲಸವನ್ನು ಇಂದೇ ಮಾಡಿ; ಈಗಲೇ ಮಾಡಿ. ನಾಳೆಗೆ ನಾಳೆಯ ಕೆಲಸವಿದೆಯಲ್ಲ’ ಎಂಬ ಹಿರಿಯರ ಅನುಭವದ ಮಾತು ಅರ್ಥಪೂರ್ಣ. ನಾವು ಬದುಕಿರುವವರೆಗೆ ನಾಳೆ ಎಂಬುದು ದಿನಾ ಬರುತ್ತದೆ. ಆದರೆ ಇಂದು ಬರೋದು ಇಂದು ಮಾತ್ರ. ಇಂದು ಎಂಬುದು ನಿನ್ನೆಯ ನಾಳೆ; ಹಾಗೂ ನಾಳೆಯ ನಿನ್ನೆ. ಆದ್ದರಿಂದ ‘ನಿನ್ನೆ ನಿನ್ನೆಗೆ-ನಾಳೆ ನಾಳೆಗೆ-ಇಂದು ಇಂದಿಗೆ’ ಎಂಬ ತತ್ವ ಯಶಸ್ವೀ ಬದುಕಿಗೆ ಬೇಕಾದ ಸಿದ್ಧಾಂತ. ಯಾವುದೇ ಒಂದು ಕೆಲಸಕ್ಕೆ, ಅವಶ್ಯವಿರುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಾರದು. ಹೀಗಾದಾಗ ಸಮಯ ವ್ಯರ್ಥವಾಗಿ, ಮಾಡಿ ಮುಗಿಸಲೇಬೇಕಾದ ಕೆಲಸಗಳಿಗೆ ಸಮಯ ಸಿಗದೆ ಒತ್ತಡಕ್ಕೆ ಸಿಕ್ಕಿ ಒದ್ದಾಡುವ ಪರಿಸ್ಥಿತಿ ನಿರ್ವಣವಾಗುತ್ತದೆ. ಕೆಲಸವನ್ನು ವೇಗವಾಗಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರಂತೂ, ಸಮಯದ ಉಳಿತಾಯವಾಗಿ ನಾವು ಆರಾಮ ವಿರಾಮದಿಂದಿರಲು ಸುಲಭಸಾಧ್ಯವಾಗುತ್ತದೆ.

ಇನ್ನು ಒಂದು ಕೆಲಸದ ಜತೆ, ಇತರ ಸಣ್ಣ ಪುಟ್ಟ ಕೆಲಸಗಳನ್ನು ಏಕಕಾಲದಲ್ಲಿ ಮಾಡುವ ಕೌಶಲ ರೂಢಿಸಿಕೊಂಡರಂತೂ, ಸಮಯದ ಭಾರೀ ಉಳಿತಾಯವಾಗಿ ನೆಮ್ಮದಿಯಿಂದಿರಲು ಸಾಧ್ಯವಾಗುತ್ತದೆ. ಯಾವುದೇ ಒಂದು ಕೆಲಸವನ್ನು ಗಮನವಿಟ್ಟು ಮಾಡಬೇಕು. ಆಗ ತಪ್ಪುಗಳಾಗದೆ, ಅದೇ ಕೆಲಸ ಪುನರಾವೃತ್ತಿಗೊಳ್ಳುವ ಸಂದರ್ಭವೂ ಇಲ್ಲವಾಗಿ, ಸಮಯದ ಉಳಿತಾಯ ಹಾಗೂ ಇನ್ನೊಂದು ಕೆಲಸ ಮಾಡಲು ಅನುಕೂಲ ಒದಗಿ ಬರುತ್ತದೆ. ಯಾವತ್ತೂ ಸಮಯ ಪೋಲಾಗಬಾರದು. ಅನಗತ್ಯ ಅಪ್ರಸ್ತುತ ಮಾತುಕತೆಗಳಲ್ಲಿ ಸಮಯ ವ್ಯರ್ಥ ಮಾಡುವುದು ಸಮಯದ ಸಮರ್ಪಕ ನಿರ್ವಹಣೆ ಎನಿಸಲಾರದು. ಇನ್ನು ಭಾರತೀಯರಲ್ಲಂತೂ ಸಮಯಪ್ರಜ್ಞೆ ಇಲ್ಲವೆಂದೇ ಹೇಳಬಹುದು. ಈ ಕಾರಣಕ್ಕಾಗಿಯೇ”Indian standard time’ ಎಂಬ ಮಾತು ಪ್ರಚಲಿತವಾಗಿದೆ. ಸಭೆ ಸಮಾರಂಭಗಳು ಗಂಟೆಗಳಷ್ಟು ತಡವಾಗಿ ಪ್ರಾರಂಭವಾಗುತ್ತವೆ. ಗಂಟೆ ಎಂಟಾದರೂ ಮದುವೆಗಳಲ್ಲಿನ ವಧು-ವರರ ಆರಕ್ಷತೆ ಆರಂಭವಾಗಿರುವುದಿಲ್ಲ. ಅಂತೆಯೇ ಕಚೇರಿಗೆ ತಡವಾಗಿ ಬರುವ ಅಧಿಕಾರಿ, ತಡವಾಗಿ ಬರುವ ಇತರ ಸಿಬ್ಬಂದಿಗಳನ್ನು ಪ್ರಶ್ನಿಸುವ ನೈತಿಕ ಹಕ್ಕನ್ನೇ ಕಳೆದುಕೊಂಡಿರುತ್ತಾನೆ. ಸಮಯಪ್ರಜ್ಞೆ ಇಲ್ಲದವರು ಅನೇಕ ಬಾರಿ ಬಸ್, ಟ್ರೇನ್, ಫ್ಲೈಟ್​ಗಳನ್ನೇ ಮಿಸ್ ಮಾಡಿಕೊಂಡಿರುವ ಉದಾಹರಣೆಗಳಿವೆ. ಸಮಯಪ್ರಜ್ಞೆ ಇಲ್ಲದವರು ಇತರರ ಸಮಯವನ್ನೂ ಹಾಳು ಮಾಡುತ್ತಾರೆ. ಆ ಹಕ್ಕು ನಮಗಿಲ್ಲ. ಅತಿಥಿಗಳಾಗಿ, ತಡವಾಗಿ ಹೋದರೆ, ಎಲ್ಲರ ಸಮಯವನ್ನು ಹಾಳು ಮಾಡಿದಂತೆ ಹಾಗೂ ಅವರ ಮನಸ್ಸನ್ನು ನೋಯಿಸಿದಂತೆ. ಈ ಎಲ್ಲ ಹಿನ್ನೆಲೆಯಲ್ಲಿ ಸಮಯದ ಪರಿಪಾಲನೆ, ಆನಂದದ ಗೌರವಯುತ ಯಶಸ್ವೀ ಜೀವನಕ್ಕೆ ಅತ್ಯವಶ್ಯಕ.

(ಪ್ರತಿಕ್ರಿಯಿಸಿ [email protected]co.in)

ವಿಡಿಯೋ ನ್ಯೂಸ್

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...