ಮುದ್ದೇಬಿಹಾಳ: ಬೀದರ್, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಬೆಂಗಳೂರಿನ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಕೆಲ ಪರೀಕ್ಷಾರ್ಥಿಗಳ ಜನಿವಾರ ತೆಗೆಸಿದ ಅನುಚಿತ ಘಟನೆ ಖಂಡಿಸಿ ಜನಿವಾರಧಾರಿ ಸಮಾಜದವರು ಶನಿವಾರ ಪಟ್ಟಣದಲ್ಲಿ ರ‌್ಯಾಲಿ ಮೂಲಕ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಬರೆದ ಖಂಡನೆ ಮತ್ತು ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವ ಕುರಿತಾದ ಮನವಿಯನ್ನು ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ ಎಂ.ಎ.ಬಾಗೇವಾಡಿ ಅವರಿಗೆ ಸಲ್ಲಿಸಿದರು.

ಜನಿವಾರ ಧರಿಸುವ 18 ಸಮಾಜಗಳ ಮುಖಂಡರು ಶ್ರೀಗುರು ರಾಘವೇಂದ್ರ ಮಠದಲ್ಲಿ ಸೇರಿ ಅಲ್ಲಿಂದ ಬೈಕ್ ರ‌್ಯಾಲಿ ಮೂಲಕ ಹಳೇ ಸರ್ಕಾರಿ ಆಸ್ಪತ್ರೆ, ಗ್ರಾಮದೇವತೆ ಕಟ್ಟೆ, ಮುಖ್ಯ ಬಜಾರ್, ಬಸವೇಶ್ವರ ವೃತ್ತ್ತ, ಕಿತ್ತೂರುರಾಣಿ ಚನ್ನಮ್ಮ ವೃತ್ತ್ತ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು.
ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ವಿಪ್ರ ಸಮಾಜದ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಬಜಾರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಶಾಸಿ, ಚಲನಚಿತ್ರ ನಿದೇರ್ಶಕ ಅನುರಾಗ ಕಶ್ಯಪ್, ಸುರೇಶ ಕುಲಕರ್ಣಿ, ಅರವಿಂದ ಕುಲಕರ್ಣಿ, ವಿಜಯಕುಮಾರ ಬಡಿಗೇರ, ಈರಣ್ಣ ಬಡಿಗೇರ, ಎಬಿವಿಪಿ ಹಿರಿಯ ಕಾರ್ಯಕರ್ತ ಉದಯಸಿಂಗ್ ರಾಯಚೂರ ಅವರು ಮಾತನಾಡಿ ಜನಿವಾರ ಸಂಸ್ಕಾರಯುತವಾದದ್ದು, ಮಹತ್ವ ಉಳ್ಳದ್ದು. ಇದನ್ನರಿಯದ ಮೂಢರು ಜನಿವಾರ ತುಂಡರಿಸಿ ಕಸದ ಬುಟ್ಟಿಗೆ ಎಸೆದಿರುವುದು ಹಿಂದುಗಳ ಸಂಸ್ಕೃತಿ, ಭಾಗನೆಗಳಿಗೆ ಭಾರೀ ಹೊಡೆದ ನೀಡಿದಂತಾಗಿದೆ. ಈ ಸರ್ಕಾರದಲ್ಲಿ ಹಿಂದು ವಿರೋಧಿ ಕೃತ್ಯಗಳು ವಿಜೃಂಭಿಸುತ್ತಿವೆ. ಒಬ್ಬನ ಮೇಲೆ ಕ್ರಮ ಆದರೆ ಸಾಲದು. ಇದರ ಹಿಂದಿರುವ ಕಾಣದ ಕೈಗಳನ್ನ್ನು ಪತ್ತೇ ಹಚ್ಚಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ವಿಪ್ರ ಸಮಾಜದ ಮುಖಂಡರಾದ ಎಸ್.ಆರ್.ಕುಲಕರ್ಣಿ, ವಿ.ಆರ್.ದೇಶಪಾಂಡೆ, ಆನಂದ ಜಂಬಗಿ, ಸತೀಶ ಕುಲಕರ್ಣಿ, ಅನಿಲಕುಮಾರ ಕುಲಕರ್ಣಿ, ಸುಭಾಷ ಕುಲಕರ್ಣಿ, ಆರ್.ವಿ.ಪುರೋಹಿತ, ಬಿ.ಎಚ್.ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಚಿದಂಬರ ಜೋಶಿ, ರಾಘವೇಂದ್ರ ಆಲೂರ, ಎಲ್.ಎಸ್.ದೇಶಪಾಂಡೆ, ಅರವಿಂದ ದೇಶಪಾಂಡೆ, ರಾಜು ಪದಕಿ, ಅರುಣಕುಮಾರ ಪದಕಿ, ದಿಗಂಬರ ಜೈನ ಸಮಾಜದ ಮಾಣಿಕಚಂದ ದಂಡಾವತಿ, ಭರತೇಶ ಮಂಕಣಿ, ಭರತೇಶ ಶೆಟ್ಟ, ರಮೇಶ ದೊಡಮನಿ, ಶ್ವೇತಾಂಬರ ಜೈನ ಸಮಾಜದ ವಿಕ್ರಮ್ ಓಸ್ವಾಲ್, ಮರಾಠ ಸಮಾಜದ ರಾಜೇಂದ್ರ ಭೋಸಲೆ, ಭರತ್ ಭೋಸಲೆ, ಸೂರ್ಯವಂಶಿ ಕ್ಷತ್ರೀಯ ಕಲಾಲ ಸಮಾಜದ ಚಂದ್ರಶೇಖರ ಕಲಾಲ, ಯಶವಂತ ಕಲಾಲ, ಗೋಂಧಳಿ ಸಮಾಜದ ನಾರಾಯಣ ದುರ್ವೆ, ಮಂಜುನಾಥ ಪೇಟಕರ್, ಸೋಮವಂಶ ಆರ್ಯಕ್ಷತ್ರೀಯ ಸಮಾಜದ ನಾರಾಯಣ ಮಿರಜಕರ್, ಕುಬೇರ ಮಿರಜಕರ್, ಎಸ್.ಎಂ.ಮಿರಜಕರ್, ಸವಿತಾ (ನಯನಜ ಕ್ಷತ್ರೀಯ) ಸಮಾಜದ ಮಹೇಶ ತೇಲಂಗಿ, ಅನೀಲ ತೇಲಂಗಿ ಸೇರಿದಂತೆ ಭಾವಸಾರ ಕ್ಷತ್ರೀಯ, ಕ್ಷತ್ರೀಯ ಸಹಿತ ಜನಿವಾರ ಧರಿಸುವ 18 ಸಮಾಜಗಳ ಪ್ರತಿನಿಗಳು ಇದ್ದರು. ಭೋವಿ ಸಮಾಜದ ಸಂಗಮೇಶ ನಾಲತವಾಡ ಸಹಿತ ಇತರೆ ಹಿಂದು ಸಮಾಜದ ಪ್ರತಿನಿಧಿಗಳು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು.
ಈ ಹಿಂದೆ ನಡೆದ ಪರೀಕ್ಷೆಗಳಲ್ಲಿ ಹಿಂದೂ ಮಹಿಳೆಯರ ಕಾಲುಂಗರ, ಮಾಂಗಲ್ಯ ತೆಗೆಸಿದ ಘಟನೆಗಳು ನಡೆದಿದ್ದವು. ಇದೀಗ ಜನಿವಾರಕ್ಕೂ ಕೈಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಿರಂತರ ನಡೆಯುತ್ತಿದೆ. ಇದೆಲ್ಲ ಸರ್ಕಾರದ ತುಷ್ಟೀಕರಣ ನೀತಿಯ ಪ್ರಭಾವದಂತೆ ಕಾಣಿಸುತ್ತಿದೆ. ಹಿಂದುಗಳ ಸಹನಾ ಶಕ್ತಿ ಕೆಣಕಬೇಡಿ.
-ವಿಜಯಕುಮಾರ ಬಡಿಗೇರ, ಮುಖಂಡ, ವಿಶ್ವಕರ್ಮ ಸಮಾಜ, ಮುದ್ದೇಬಿಹಾಳ.