ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ
ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ಎಂಬಲ್ಲಿ ಬುಧವಾರ ಸಂಜೆ ಗುಡ್ಡ ಜರಿದು, ಮಣ್ಣುಗಳ ರಾಶಿ ಹೆದ್ದಾರಿ ರಸ್ತೆಗೆ ಬೀಳುತ್ತಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಂಗಳವಾರ ಬೆಳಗ್ಗಿನಿಂದಲೇ ವಿಪರೀತ ಮಳೆಯಾಗುತ್ತಿದ್ದು ಬುಧವಾರವು ಮುಂದುವರೆದಿದ್ದು ದೊಡ್ಡ ತಪ್ಪಲು ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ರಸ್ತೆ ಮೇಲೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ರಿಷಾ ಕ್ರೇನ್ ಸರ್ವಿಸಸ್ ಸಿಬ್ಬಂದಿಗಳು ಮಾಡುತ್ತಿದ್ದು, ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಾಹನಗಳನ್ನು ಬಂಟ್ವಾಳದಲ್ಲಿ ತಡೆದು ಚಾರ್ಮಾಡಿ ಮೂಲಕ ಹೋಗುವಂತೆ ಹೇಳಲಾಗುತ್ತಿದೆ. ಗುಂಡ್ಯ ಚೆಕ್ ಪೋಸ್ಟ್ ಬಳಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತಿದ್ದಾರೆ.