ಮುದ್ದೇಬಿಹಾಳ: ರಾಜ್ಯಾದ್ಯಂತ ನೀಡಿದ್ದ ಕರೆಯನ್ನು ಪಾಲಿಸಲು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಶಾಸಕರ ನಿವಾಸದ ಎದುರು ಮಹಾಲಕ್ಷಿ$್ಮ ಸಂಕೇತ, ಅಮೃತಕ್ಕೆ ಸಮನಾದ ಸೆಗಣಿ ಸಾರಿಸಿ ರಂಗೋಲಿ ಹಾಕಲು ತೆರಳಿದ್ದರು.
ಇವರ್ಯಾರೂ ಶಾಸಕರ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿಲ್ಲ. ಶಾಸಕರ ವಿರುದ್ಧ ಧಿಕ್ಕಾರ ಕೂಡ ಕೂಗಿಲ್ಲ. ಆದರೆ ಪೊಲೀಸರು ದೌರ್ಜನ್ಯ ನಡೆಸಿ, ಶಾಸಕರ ಪ್ರಭಾವಕ್ಕೆ ಒಳಗಾಗಿ ಅಮಾಯಕ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ. ಟನೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಮೂರು ಅವಧಿಗೆ ಶಾಸಕನಾಗಿದ್ದು ನನಗೆ ಕಾನೂನು ಗೊತ್ತಿದೆ.
ಹಸುವಿನ ಕೆಚ್ಚಲು ಕೊಯ್ದ ಆರೋಪಿಗಳನ್ನು ಬಂಧಿಸುವಂತೆ ಮನವಿ ಸಲ್ಲಿಸಲು ತೆರಳಿದ್ದವರನ್ನು ಬಂಧಿಸುವಂತೆ ಯಾವ ಕಾನೂನು ಹೇಳುತ್ತದೆ. ರೈತರ ಮಕ್ಕಳಿಗೆ ಸೆಗಣಿಯ ಮಹತ್ವ ಗೊತ್ತಿರುವುದರಿಂದಲೇ ಶಾಸಕರ ಮನೆ ಮುಂದೆ ಸೆಗಣಿಯಿಂದ ಲಕ್ಷ್ಮೀ ಮೂರ್ತಿ ಮಾಡಿ ಪೂಜೆ ಸಲ್ಲಿಸಿ ಹಿಂದು ಸಂಸತಿ ಮರೆತಿರುವ ಕಾಂಗ್ರೆಸ್ ನಾಯಕರಿಗೆ ತಿಳಿವಳಿಕೆ ಹೇಳಲು ಹೋಗಿದ್ದವರ ವಿರುದ್ಧ ಸುಳ್ಳು ಕೇಸ್ ಹಾಕಿ ಅಕ್ರಮವಾಗಿ ಬಂಧನ ಮಾಡಿಸಿರುವುದು ನಮ್ಮ ಸಂಸತಿಗೆ ಮಾಡಿದ ಅವಮಾನವಾಗಿದೆ. ಇದನ್ನು ನಾವು ಇಷ್ಟಕ್ಕೇ ಬಿಡುವುದಿಲ್ಲ.
ಇಂಥ ಹೋರಾಟಗಳಿಗಾಗಿ ಹತ್ತು ಸಾರಿಯಲ್ಲ ನೂರು ಸಾರಿ ಬಂಧಿಸಿದರೂ ಹೆದರಲ್ಲ. ಮುದ್ದೇಬಿಹಾಳದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಪೊಲೀಸರು ಇದನ್ನು ಮುಂದುವರಿಸದಂತೆ ಮನವಿ ಮಾಡಿದರೂ ಸ್ಪಂದಿಸಿಲ್ಲ.
ನಮ್ಮ ಹೋರಾಟ ಪೊಲೀಸ್ ಇಲಾಖೆ ವಿರುದ್ಧ ಅಲ್ಲ ಎಂದು ಮೇಲಿಂದ ಮೇಲೆ ಹೇಳಿದರೂ ಸ್ಪಂದಿಸದೆ ರೈತರನ್ನು ಬೆದರಿಸಿ ಅಕ್ರಮ ಬಂಧನ ಮಾಡಿದ್ದಾರೆ. ಈ ದಬ್ಬಾಳಿಕೆ, ಗೂಂಡಾಗಿರಿ ವಿರುದ್ಧ ನನ್ನ ಹೋರಾಟ ನಿರಂತರ ಮುಂದುವರಿಯುತ್ತದೆ.
ಕಾನೂನುಬಾಹಿರವಾಗಿ ಸೆನ್ ಹಾಕಿ ರಾಜಕೀಯ ಪ್ರೇರಿತವಾಗಿ ನಡೆಸಿರುವ ಬಂಧನ ಪ್ರತಿಭಟಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತದೆ ಎಂದರು.