ಭಾರತದ ಹೋರಾಟಕ್ಕೆ ಸಂದ ಜಯ: ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಮಹತ್ವದ ಬೆಳವಣಿಗೆಯಲ್ಲಿ ಪುಲ್ವಾಮಾ ಹಾಗೂ ಮುಂಬೈ ಉಗ್ರ ದಾಳಿಯ ಪ್ರಮುಖ ಸಂಚುಕೋರ, ಪಾಕಿಸ್ತಾನದಲ್ಲಿ ನೆಲೆಸಿರುವ ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಸ್ಥಾಪಕ ಮಸೂದ್ ಅಜರ್​ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರನೆಂದು ಘೋಷಿಸಿದೆ.

ಇಂದು ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267ನೇ ನಿರ್ಬಂಧ ಸಮಿತಿಯು ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ. ಬಹುತೇಕ ಎಲ್ಲಾ ಸದಸ್ಯ ರಾಷ್ಟ್ರಗಳು ಪ್ರಸ್ತಾವನೆ ಪರವಾಗಿ ಮತ ಚಲಾಯಿಸಿವೆ. ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಲ್ಲಿ ಎಲ್ಲರೂ ಒಟ್ಟಾಗಿದ್ದಾರೆ. ಚೀನಾ ಸಹ ಪ್ರಸ್ತಾವನೆಗೆ ಬೆಂಬಲ ಸೂಚಿಸಿದೆ ಎಂದು ವಿಶ್ವಸಂಸ್ಥೆಯ ಭಾರತದ ರಾಯಭಾರಿ ಸಯ್ಯದ್​ ಅಕ್ಬರುದ್ದೀನ್​ ತಿಳಿಸಿದ್ದಾರೆ.

ಘೋಷಣೆಯಿಂದ ಏನಾಗುತ್ತದೆ?

ವಿಶ್ವಸಂಸ್ಥೆ ಜಾಗತಿಕ ಉಗ್ರನೆಂದು ಘೋಷಿಸಿದರೆ ಅಜರ್​ಗೆ ಅಂತಾರಾಷ್ಟ್ರೀಯ ಸಂಚಾರ ಸಾಧ್ಯವಾಗುವುದಿಲ್ಲ. ಜೆಇಎಂಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿರುವ ಹಣಕಾಸು ನೆರವಿಗೆ ಕಡಿವಾಣ ಬೀಳಲಿದೆ. ಪುಲ್ವಾಮಾ ದಾಳಿ ಬಳಿಕ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ರಾಷ್ಟ್ರಗಳು ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಭದ್ರತಾ ಮಂಡಳಿಯ 1267ನೇ ನಿರ್ಬಂಧ ಸಮಿತಿ ಸಭೆಯಲ್ಲಿ ಪ್ರಸ್ತಾಪ ಇಟ್ಟಿದ್ದವು. ತಾಂತ್ರಿಕ ಕಾರಣ ನೀಡಿದ ಚೀನಾ ವಿಟೋ ಅಧಿಕಾರದ ಮೂಲಕ ಅಡ್ಡಗಾಲು ಹಾಕಿತು. ಇದರಿಂದ ಅಸಮಾಧಾನಗೊಂಡ ಅಮೆರಿಕ ಪರ್ಯಾಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಮಸೂದ್ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಭಾರತ ವಿಶ್ವಸಂಸ್ಥೆಯಲ್ಲಿ ಮಾಡಿದ ಪ್ರಯತ್ನಕ್ಕೆ ಚೀನಾ ನಾಲ್ಕು ಬಾರಿ ತಡೆ ಹಾಕಿತ್ತು.

One Reply to “ಭಾರತದ ಹೋರಾಟಕ್ಕೆ ಸಂದ ಜಯ: ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ವಿಶ್ವಸಂಸ್ಥೆ”

  1. Now Pappu Siddu got answer why Modi One lrg was in India and another one is at foreign country . Third rate IQ holder have no a idea about rank Holder Modi

Leave a Reply

Your email address will not be published. Required fields are marked *