ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿ: ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

blank

ನವದೆಹಲಿ: ಇಡೀ ವಿಶ್ವವನ್ನು ಮಹಾಮಾರಿ ಕರೊನಾ ಕಾಡುತ್ತಿದ್ದು, ಭಾರತವು ಸರಿಯಾದ ದಾರಿಯಲ್ಲಿ ಹೋರಾಡುತ್ತಿದೆ. ಪ್ರತಿಯೊಬ್ಬ ನಾಗರಿಕನು ಯೋಧನಾಗಿ ಕರೊನಾ ಯುದ್ಧವನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ಇಂದು ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

ಭಾನುವಾರ 64ನೇ ಮನ್​ ಕಿ ಬಾತ್​ ಆವೃತ್ತಿಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ, ಕರೊನಾ ವೈರಸ್​ ಅನ್ನು ಗಂಭೀರವಾಗಿ ಪರಿಗಣಿಸಿ, ತುಂಬಾ ಜಾಗ್ರತೆ ವಹಿಸಿ ಎಂದು ಕರೆ ನೀಡಿದರು.

ರೈತರು ಪ್ರತಿಯೊಬ್ಬರ ಹಸಿವನ್ನು ನೀಗಿಸುತ್ತಿದ್ದಾರೆ
ಈ ಸಾಂಕ್ರಮಿಕ ಸಮಯದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲದಂತೆ ನಮ್ಮ ರೈತರು ನೋಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರು ಕೂಡ ತಮ್ಮದೇ ಸಾಮರ್ಥ್ಯದಿಂದ ಕರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಕೆಲವೊಬ್ಬರು ಮನೆ ಬಾಡಿಗೆಗಳನ್ನು ತೆಗದುಕೊಂಡಿಲ್ಲ. ಕಲವರು ಊಟ-ಉಪಚಾರವನ್ನು ಮಾಡುತ್ತಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯರ ಹೋರಾಟದ ಸ್ಪೂರ್ತಿ ಶ್ಲಾಘನೀಯ
ಭಾರತೀಯರು ಹೋರಾಟದ ಸಂಕಲ್ಪ ಮಾಡಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ಜನರೇ ನೇತೃತ್ವ ವಹಿಸಿದ್ದಾರೆ. ಭಾರತೀಯರ ಹೋರಾಟದ ಸ್ಪೂರ್ತಿ ಶ್ಲಾಘನೀಯ ಎಂದರು. ಎಲ್ಲ ರಾಜ್ಯಗಳು ಸಹ ಕರೊನಾ ವಿರುದ್ಧ ಸರಿಯಾದ ಮಾರ್ಗದರ್ಶನಗಳನ್ನು ನೀಡುತ್ತಿವೆ ಎಂದು ಹೊಗಳಿದರು.

ಕೋವಿಡ್​ ವಾರಿಯರ್ಸ್​ ಜತೆ ಕೈಜೋಡಿಸಿ
ವೈದ್ಯಕೀಯ ಸಿಬ್ಬಂದಿ ರಕ್ಷಣೆಗಾಗಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕರೊನಾ ವಾರಿಯರ್ಸ್​ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ತೆಗದುಕೊಳ್ಳಲಾಗುತ್ತದೆ. ಕೋವಿಡ್​ ವಾರಿಯರ್ಸ್​ ಜತೆ ಕೈಜೋಡಿಸಿ, ದೇಶ ಸೇವೆಯನ್ನು ಮಾಡಿ ಎಂದು ಕರೆ ನೀಡಿದರು.

ಅನಗತ್ಯವಾಗಿ ರಸ್ತೆಗೆ ಇಳಿಯುವುದು ಬೇಡ
ಸರ್ಕಾರದಿಂದ ರೈತರ ಖಾತೆಗಳಿಗೆ ನೇರವಾಡಿ ಹಣ ಜಮೆಯಾಗುತ್ತಿದೆ. ಹಿರಿಯರ ಪಿಂಚಣಿ ಕೂಡ ಅವರ ಖಾತೆಗಳಿಗೆ ಸೇರುತ್ತಿದೆ. ಅಗತ್ಯ ವಸ್ತುಗಳನ್ನು ಪಕ್ಕದ ಅಂಗಡಿಗಳಲ್ಲೇ ಕೊಳ್ಳಿರಿ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ರಸ್ತೆಗೆ ಇಳಿಯುವುದು ಬೇಡ. ಅಗತ್ಯವಿರುವ ಪ್ರತಿಯೊಬ್ಬರಿಗೆ ಔಷಧ ನೀಡಲು ಪ್ರಯತ್ನಿಸುತ್ತಿದ್ದೇವೆ. ಔಷಧಿ ಸರಬರಾಜಿಗಾಗಿ ಜೀವದಾನ ವಿಮಾನ ಹಾರಾಟ ಮಾಡುತ್ತಿವೆ ಎಂದು ತಿಳಿಸಿದರು.

ವಿಶ್ವವೇ ಭಾರತ ಕೊಡುಗೆಯನ್ನು ಹಾಡಿ ಹೊಗಳುತ್ತಿದೆ
ಕರೊನಾ ವಿರುದ್ಧ ಹೋರಾಟದಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿಯಾಗಿದೆ. ಭಾರತ ಜಗತ್ತಿನ ಇತರೆ ರಾಷ್ಟ್ರಗಳಿಗೂ ಸಹಾಯಾಸ್ತ ಚಾಚಿದೆ. ಅಗತ್ಯ ವಸ್ತುಗಳನ್ನು ವಿದೇಶಕ್ಕೆ ಪೂರೈಕೆ ಮಾಡಿದೆ. ಇಡೀ ವಿಶ್ವವೇ ಭಾರತ ಕೊಡುಗೆಯನ್ನು ಹಾಡಿ ಹೊಗಳುತ್ತಿದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ವಿಶ್ವದ ನಾಯಕರು ಕರೆ ಮಾಡಿ ನನಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ ಎಂದರು.

ಬಿಸಿ ನೀರು ಸೇವನೆ ಮತ್ತು ಯೋಗ ಉತ್ತಮ
ಆಯುಷ್ಮಾನ್​ ಇಲಾಖೆಯ ಮಾರ್ಗಸೂಚಿಯನ್ನು ಪಾಲಿಸಿ, ಬಿಸಿ ನೀರು ಸೇವನೆ ಮತ್ತು ಯೋಗ ಉತ್ತಮ. ಯಾವುದೇ ಕಾರಣಕ್ಕೂ ಲಾಕ್​ಡೌನ್​ ಉಲ್ಲಂಘಿಸಬೇಡಿ. ಮಾಸ್ಕ್​ ಅನ್ನು ಕಡ್ಡಾಯವಾಗಿ ಧರಿಸಿ, ಇದರಿಂದ ಇನ್ನೊಬ್ಬರಿಗೆ ವೈರಸ್​ ಹರಡುವುದನ್ನು ತಡೆಯಬಹುದು. ಮಾಸ್ಕ್​ ನಾಗರಿಕ ಸಮಾಜದ ಸಂಕೇತವಾಗಿದೆ. ಕರೊನಾವನ್ನು ಗಂಭೀರವಾಗಿ ಪರಿಗಣಿಸಿ. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ. ಪರಿಸರದ ಬಗ್ಗೆ ಎಲ್ಲರು ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.

ಕರೊನಾ ವಿರುದ್ಧದ ಹೋರಾಟವೆ ನಿಜವಾದ ಅಕ್ಷಯ ತೃತೀಯ. ಕರೊನಾ ಜೀವನ ಶೈಲಿ, ಜೀವನ ಹಾಗೂ ಎಲ್ಲವನ್ನು ಬದಲಾಯಿಸಿದೆ. ಕರೊನಾ ಮುಗಿದ ಬಳಿಕ ಭಾರತದಲ್ಲಿ ಹೊಸ ಶಕೆ ಪ್ರಾರಂಭವಾಗಲಿದೆ ಎಂದರು.

ಕೊನೆಯಲ್ಲಿ ಇಂದು ಬಸವಣ್ಣನವರ ಜಯಂತಿ. ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು ಎಂದು ಪ್ರಧಾನಿ ಮೋದಿ ಶುಭಕೋರಿದರು. (ಏಜೆನ್ಸೀಸ್​)

ಮೊದಲ ಸಂಸತ್ತನ್ನು ರೂಪಿಸಿದ ದಾರ್ಶನಿಕ: ಪ್ರಧಾನಿ ನರೇಂದ್ರ ಮೋದಿ

Share This Article

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…

ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

ಪ್ರತಿದಿನ ಬೆಳಿಗ್ಗೆ ಪಪ್ಪಾಯಿ ತಿಂದರೆ ಏನಾಗುತ್ತದೆ ಗೊತ್ತಾ? ನೀವು ಇದನ್ನು ತಿಳಿದುಕೊಳ್ಳಲೇಬೇಕು..Papaya

Papaya: ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಪ್ರಯೋಜನಕಾರಿ ಎನ್ನುವುದು ನಮಗೆ ಗೊತ್ತಿರುವ ವಿಚಾರವಾಗಿದೆ. ಪಪ್ಪಾಯಿ…