ಮೋದಿಯಿಂದ ರೈತ ಪರ ಆಡಳಿತ

ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಮತ

ಮಸ್ಕಿ: ವಿಶ್ವ ಗುರುಸ್ಥಾನದಲ್ಲಿ ಭಾರತ ನಿಲ್ಲುವಂತೆ ಮಾಡ ಹೊರಟಿರುವ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಿದೆ ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಪಟ್ಟಣದ ತೆರಬಜಾರ ಬೀದಿಯಲ್ಲಿ ಗುರುವಾರ ಸಂಜೆ ಟೀಂ ಮೋದಿಯಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ದೇಶ ರಕ್ಷಣೆಯಲ್ಲಿ ಅಮೆರಿಕಾ, ರಷ್ಯಾ, ಚೀನಾ ಸಾಲಿನಲ್ಲಿ ಭಾರತ ಸೇರುವಂತೆ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಹೀನಾಯ ಸ್ಥಿತಿಯಲ್ಲಿದ್ದಾಗ ಪ್ರಧಾನಿ ಹುದ್ದೆಗೆ ಏರಿದ ಮೋದಿ ಬೊಕ್ಕಸದಲ್ಲಿ ಹಣ ಸಂಗ್ರಹಿಸಿ ಹಣದುಬ್ಬರ ಕಾಪಾಡಿಕೊಂಡು ಬಂದಿದ್ದಾರೆ. ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ನೀಡಿ ಕೃಷಿಕರ ರಕ್ಷಣೆಗೆ ಮುಂದಾಗಿದ್ದಾರೆ. ಬಡವರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬ್ಯಾಂಕ್ ಕಟ್ಟೆ ಹತ್ತದ ಸಮಾನ್ಯ ಜನರು ಕೂಡ ಬ್ಯಾಂಕ್‌ನಲ್ಲಿ ವ್ಯವಹರಿಸುವಂತೆ ಮಾಡಿದ್ದು ಮೋದಿಯ ಸಾಧನೆ ಬಣ್ಣಿಸಿದರು.

ಭ್ರಷ್ಟಾಚಾರ ಹತ್ತಿಕ್ಕುವ ನಿಟ್ಟಿನಲ್ಲಿ ಕಪ್ಪುಹಣ ಹೊರತೆಗೆಯಲು ನೋಟ್‌ಬ್ಯಾನ್ ಮಾಡಿದರು. ಅಲ್ಲದೆ ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಆಸಕ್ತಿ ವಹಿಸಿ ತಂತ್ರಜ್ಞಾನ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲುವಂತೆ ಮಾಡಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿರುವದು ಆ ಪಕ್ಷದವರ ದೌರ್ಭಾಗ್ಯ ಎಂದು ವ್ಯಂಗ್ಯವಾಡಿದರು. ವರ್ತಕ ಶಿವಶಂಕ್ರಪ್ಪ ಹಳ್ಳಿ ಮಾತನಾಡಿದರು.

Leave a Reply

Your email address will not be published. Required fields are marked *