ಮದ್ಯ ಅಕ್ರಮ ಮಾರಾಟ ತಡೆಗಾಗಿ ನೋಟಾಕ್ಕೆ ಮತ

ಗೋನಾಳದಲ್ಲಿ 500ಕ್ಕೂ ಹೆಚ್ಚು ಮತದಾರರು ಹಕ್ಕು ಚಲಾವಣೆ

ಮಸ್ಕಿ: ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ತಾಲೂಕಿನ ಗೋನಾಳ ಮತದಾರರು ಮಂಗಳವಾರ ನೋಟಾಕ್ಕೆ ಮತ ಚಲಾಯಿಸಿದರು. 1900 ಮತದಾರರು ಇರುವ ಗೋನಾಳ ಗ್ರಾಮದಲ್ಲಿ ಎರಡು ಮತಗಟ್ಟೆಗಳಲ್ಲಿ ಮಹಿಳೆಯರು ಸೇರಿ ಸುಮಾರು 500ಕ್ಕೂ ಹೆಚ್ಚು ಮತದಾರರು ನೋಟಾಕ್ಕೆ ಮತ ಹಾಕಿದರು.

ಮತದಾನಕ್ಕೂ ಮುನ್ನ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಒಕ್ಕೂಟದ ದುರುಗಮ್ಮ ಮತ್ತು ಅಂಬಮ್ಮ ಮಾತನಾಡಿ, ಈಗಾಗಲೇ ಮದ್ಯ ಅಕ್ರಮ ಮಾರಾಟ ನಿಷೇಧಿಸುವಂತೆ ಹೋರಾಟ ಮಾಡಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಬೇಡಿಕೆ ಈಡೇರಿಸಲು ಯಾರೂ ಮುಂದಾಗಿಲ್ಲ. ಆದ್ದರಿಂದ ಯಾವುದೇ ಪಕ್ಷಗಳಿಗೆ ನಾವು ಮತ ಹಾಕಲ್ಲ. ಮತದಾನ ನಮ್ಮ ಹಕ್ಕಾಗಿದ್ದು, ನೋಟಾಕ್ಕೆ ಚಲಾಯಿಸುತ್ತೇವೆ ಎಂದರು.

ಗ್ರಾಮದಲ್ಲಿ ಕುಡಿತದ ಚಟಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ವರ್ಷದಿಂದ ಮಹಿಳೆಯರು ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ನಿರ್ಲಕ್ಷೃ ಧೋರಣೆ ಖಂಡಿಸಿ ನೋಟಾಕ್ಕೆ ಮತ ಚಲಾಯಿಸಿದ್ದಾರೆ.
| ಧರ್ಮರಾಜ ಗೋನಾಳ, ರಂಗ ಕಲಾವಿದ ಹಾಗೂ ಹೋರಾಟಗಾರ

ಮದ್ಯ ಅಕ್ರಮ ಮಾರಾಟಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಲಾಗಿದೆ.
| ಬಲರಾಮ ಕಟ್ಟಿಮನಿ ತಹಸೀಲ್ದಾರ್ ಮಸ್ಕಿ

Leave a Reply

Your email address will not be published. Required fields are marked *