ಗೌಡನಬಾವಿ ಕಟ್ಟೆ ಬಸವೇಶ್ವರ ಜಾತ್ರೆ ಇಂದು

ಮಸ್ಕಿ: ತಾಲೂಕಿನ ಗೌಡನಬಾವಿ ಗ್ರಾಮದಲ್ಲಿ ಮಾ.17ರಂದು ಉಟಗನೂರ ಮೌನಯೋಗಿ ಲಿಂ.ಮರಿಬಸವಲಿಂಗ ಶಿವಯೋಗಿಗಳು ಪ್ರತಿಷ್ಠಾಪಿಸಿದ ಶ್ರೀಕಟ್ಟೆ ಬಸವೇಶ್ವರರ 26ನೇ ಜಾತ್ರೋತ್ಸವ ಹಾಗೂ ಸಾಮೂಹಿಕ ವಿವಾಹ ನಡೆಯಲಿದೆ.

ಜಾತ್ರೆ ಹಿನ್ನೆಲೆಯಲ್ಲಿ ಶ್ರೀಕಟ್ಟೆ ಬಸವೇಶ್ವರ ದೇವಸ್ಥಾನ, ಶ್ರೀ ಬಸವಲಿಂಗೇಶ್ವರ ಮಠ ಹಾಗೂ ಪ್ರಮುಖ ರಸ್ತೆಗಳ ಉದ್ದಕ್ಕೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಗ್ರಾಮ ಪ್ರವೇಶಿಸುವ ಮುಖ್ಯ ರಸ್ತೆಯಲ್ಲಿ ಶಿವಲಿಂಗ ಇರುವ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಭಕ್ತರಿಗಾಗಿ ಕುಡಿವ ನೀರು, ನೆರಳು, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲ್ಲಿಸಲು ಸ್ಥಳ ಗುರುತಿಸಲಾಗಿದೆ.

ಮಾ.17 ರಂದು ಶ್ರೀ ಬಸವಲಿಂಗೇಶ್ವರ ಅಮೃತ ಶಿಲಾಮೂರ್ತಿಗೆ ರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ಮಂಗಳಾರತಿ, ಮಹಾಪ್ರಸಾದ ವಿತರಣೆ, ಪಲ್ಲಕ್ಕಿ ಮಹೋತ್ಸವ, ಮಧ್ಯಾಹ್ನ 101 ಜೊಡಿ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉಟಗನೂರು ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಗೌಡನಭಾವಿ ಶ್ರೀಮಠದ ಸಂಕಲ್ಪ ಕರ್ತೃ ನಾಗಪ್ಪತಾತನ ನೇತೃತ್ವ ವಹಿಸಲಿದ್ದಾರೆ. ಅಂಕಲಿಮಠದ ಶ್ರೀ ವೀರಭದ್ರ ಸ್ವಾಮೀಜಿ, ಶ್ರೀ ಬಸವರಾಜ ಸ್ವಾಮೀಜಿ, ಬಳಗಾನೂರಿನ ಅಭಿನವ ಶ್ರೀ ಮರಿಸಿದ್ಧಬಸವ ಸ್ವಾಮೀಜಿ, ಮಸ್ಕಿ ಗಚ್ಚಿನ ಮಠದ ವರರುದ್ರಮುನಿ ಸ್ವಾಮೀಜಿ, ವೆಂಕಟಗಿರಿಕ್ಯಾಂಪ್‌ನ ಡಾ.ಸಿದ್ಧರಾಮ ಶರಣರು, ಸಿಂಧನೂರಿನ ಸೋಮನಾಥ ಶಿವಾಚಾರ್ಯರು ಸೇರಿ ವಿವಿಧ ಮಠಾಧೀಶರು ಭಾಗವಹಿಸುವರು ಎಂದು ಶ್ರೀಮಠದ ಶರಣಪ್ಪ ಜಾಲಿಹಾಳ ತಿಳಿಸಿದ್ದಾರೆ.