ಕವಿತಾಳ: ಸಮೀಪದ ಆನಂದಗಲ್‌ನಲ್ಲಿ ಶನಿವಾರ ಆಂಜನೇಯ ದೇವರ ಆರನೇ ವರ್ಷದ ಜಾತ್ರೆ ಅಂಗವಾಗಿ ಉಟಕನೂರು ಮರಿಬಸವಲಿಂಗ ದೇಶೀಕೇಂದ್ರ ಸ್ವಾಮಿಗಳ ದೇವಸ್ಥಾನದಿಂದ ಮಾರುತಿ ದೇವರ ಗುಡಿವರೆಗೆ ಮಹಿಳೆಯರಿಂದ ಕುಂಭ ಕಳಸ ಮೆರವಣಿಗೆ ಜರುಗಿತು.
ಇದನ್ನೂ ಓದಿ: ಆಂಜನೇಯಸ್ವಾಮಿ ರಥೋತ್ಸವ ಅದ್ಧೂರಿ
ಮೆರವಣಿಗೆಯಲ್ಲಿ ನರಗುಂದ ತಾಲೂಕಿನ ಸಂಗೊಳ್ಳಿ ರಾಯಣ್ಣ ಮಹಿಳಾ ತಂಡದ ಡೊಳ್ಳು ಕುಣಿತ ನೋಡುಗರರ ಗಮನಸಳೆಯಿತು. ನಂತರ ಮಾರುತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಮಸ್ಕಿ ಗಚ್ಚಿನ ಮಠದ ವರರುದ್ರ ಮುನಿಸ್ವಾಮಿ, ಷಡರಕ್ಷಯ್ಯಸ್ವಾಮಿ, ಪ್ರಮುಖರಾದ ಮಂಜುನಾಥ ಅಂಗಡಿ, ವೀರೇಶ ಹೊನ್ನಳ್ಳಿ, ವೀರೇಶ ಯಡ್ರಾಮಿ, ಅಯ್ಯನಗೌಡ ವಟಗಲ್, ಶರಣಪ್ಪ, ಮಂಜುನಾಥ ಶರಣಪ್ಪ, ಹುಚ್ಚರಡ್ಡಿ ಹುಲಿಗುಡ್ಡ, ಹುಚ್ಚರಡ್ಡಿ ತುಮಕೂರು, ಚನ್ನಬಸಮ್ಮ ಹೂಗಾರ, ಶಂಕ್ರಮ್ಮ, ಉಮಾದೇವಿ, ರೇಣುಕಾ, ಶೈಲಜಾ, ಮಂಜೂರು, ಅಶೋಕ ಇತರರಿದ್ದರು.