More

    ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ ಕಾರು ಕಂಪನಿ!

    ನವದೆಹಲಿ: ಮಾರುತಿ ಸುಜುಕಿ ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಆಘಾತ ನೀಡಿದ್ದು ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಸಲಾಗಿದೆ.

    ಪ್ರತಿ ಕಾರಿನ ಬೆಲೆಯನ್ನು ಶೇಕಡಾ 0.8ರಷ್ಟು ಏರಿಸಲಾಗಿದ್ದು ಉತ್ಪದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಸಂಸ್ಥೆ ಈ ಹೆಜ್ಜೆಯನ್ನಿಟ್ಟಿದೆ. ಕಳೆದ ತಿಂಗಳು ದೇಶಾದ್ಯಂತ 5.55 ಲಕ್ಷ ಪ್ರಯಾಣಿಕರ ವಾಹನಗಳು ಮಾರಾಟವಾಗಿದ್ದು ಇದು ವಾಹನ ಉತ್ಪಾದನಾ ಕಂಪನಿಗಳು ಮಾರಾಟದಲ್ಲಿ ಉತ್ತಮ ಪ್ರಗತಿಯನ್ನು ತೋರಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಾಹನ ಮಾರಾಟದಲ್ಲಿ ಶೇ.11ರಷ್ಟು ಹೆಚ್ಚಳವಾಗಿದೆ.

    ಮಾರುತಿ ಸುಜುಕಿ ಶೇ.11ರಷ್ಟು (1.55 ಲಕ್ಷ), ಹ್ಯುಂಡೈ ಶೇ.7ರಷ್ಟು (47001), ಮಹೀಂದ್ರ ಶೇ.10 (50558), ಕಿಯಾ ಶೇ.56 (24600), ಬಜಾಜ್ ಆಟೋ ಶೇ.56ರಷ್ಟು (1.55 ಲಕ್ಷ) ಪ್ರಗತಿ ಸಾಧಿಸಿವೆ. ಮಾರುತಿ ಸುಜುಕಿ ಕಡಿಮೆ ಬೆಲೆಗೆ ವಾಹನ ನೀಡುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲು ಹೊಂದಿದೆ ಎಂದೇ ಹೇಳಲಾಗುತ್ತಿದೆ. ಬೆಲೆ ಏರಿಕೆಯಿಂದ ಈ ವರ್ಷ ವಾಹನ ಮಾರಾಟಕ್ಕೂ ಹೊಡೆತ ಬೀಳಬಹುದಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts